ಪುನೀತ್ ರಾಜ್ ಕುಮಾರ್ ಅವರ ಮನೆ ಎಷ್ಟು ಸುಂದರ ನೋಡಿ

0 2

ದೊಡ್ಮನೆ ಹುಡುಗ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಪ್ರಸಿದ್ಧ ನಟ. ಇವರು ಬರೀ ಚಿತ್ರ ನಟ ಮಾತ್ರ ಅಲ್ಲದೆ ಒಬ್ಬ ಹಿನ್ನೆಲೆ ಗಾಯಕ ಕೂಡಾ ಹೌದು ಹಾಗೇ ಆಂಕರ್ ಹಾಗೂ ಪ್ರೊಡ್ಯೂಸರ್ ಕೂಡಾ ಆಗಿದ್ದಾರೆ. ಪುನೀತ್ ರಾಜಕುಮಾರ್ ಅವರು ತಮ್ಮ PRK ಪ್ರೊಡಕ್ಷನ್ ಅಡಿಯಲ್ಲಿ ನಟನೆಯಲ್ಲಿ ಹೊಸಬರಿಗೆ ಅವಕಾಶ ನೀಡುತ್ತಿದ್ದಾರೆ. ಇವರಿಗೆ ಅಶ್ವಿನಿ ಅವರ ಜೊತೆ ವಿವಾಹ ಆಗಿದ್ದು ಧೃತಿ ಹಾಗೂ ವಂದಿತಾ ಎಂಬ ಇಬ್ಬರು ಹೆಣ್ಣು ಮಕ್ಕಳು ಕೂಡ ಇದ್ದಾರೆ.

ಇನ್ನು ಪುನೀತ್ ರಾಜಕುಮಾರ್ ಅವರು ಡಾಕ್ಟರ್ ರಾಜಕುಮಾರ್ ಅವರು ವಾಸವಾಗಿದ್ದ ಅವರ ಸದಾಶಿವನಗರದ ಮನೆಯಲ್ಲಿಯೆ ವಾಸವಾಗಿದ್ದಾರೆ. ಪವರ್ ಸ್ಟಾರ್ ಅವರನ್ನು ಭೇಟಿ ಮಾಡಬೇಕು ಎಂದುಕೊಂಡಿರುವ ಅಭಿಮಾನಿಗಳು ಯಾರೇ ಆದರೂ ಕೂಡಾ ಭೇಟಿ ನೀಡುವುದು ಸದಾಶಿವನಗರದ ಮನೆಗೇ. ಹಾಗಾಗಿ ಇವರ ಮನೆಯನ್ನು ಸದಾಶಿವನಗರದ ಲ್ಯಾಂಡ್ ಮಾರ್ಕ್ ಎನ್ನಬಹುದು.

ಪುನೀತ್ ರಾಜಕುಮಾರ್ ಅವರಿಗೆ ಬಿಡುವಿಲ್ಲದ ಶೂಟಿಂಗ್ ನಡುವೆಯೂ ಕೂಡಾ ಕುಟುಂಬದ ಜೊತೆ ಕಾಲ ಕಳೆಯುವುದು ಅಂದರೆ ಬಹಳಷ್ಟು ಇಷ್ಟ ಹಾಗಾಗಿ ಕುಟುಂಬ ಸದಸ್ಯರ ಜೊತೆಗೆ ಸ್ವಲ್ಪ ಸಮಯವನ್ನು ಕಳೆಯಲು ಎಂದೇ ಪುನೀತ್ ರಾಜಕುಮಾರ್ ಅವರು ಬೇರೆ ಹೊಸ ಮನೆಯನ್ನು ಕೂಡಾ ಕಟ್ಟಿಸಿದ್ದಾರೆ. ಸಂಪೂರ್ಣ ಪಾಶ್ಚಾತ್ಯ ಶೈಲಿಯಲ್ಲಿ ಪುನೀತ್ ಅವರ ಹೊಸ ಮನೆಯನ್ನು ಪುನೀತ್ ರಾಜಕುಮಾರ್ ಹಾಗೂ ಅವರ ಪತ್ನಿ ಅಶ್ವಿನಿ ಅವರ ಇಚ್ಛೆಗೆ ತಕ್ಕ ಹಾಗೆ ಎಲ್ಲವನ್ನೂ ಅಚ್ಚು ಕಟ್ಟಾಗಿ ವಿನ್ಯಾಸ ಗೊಳಿಸಿ ಅವರ ಮನೆಯನ್ನು ನಿರ್ಮಾಣ ಮಾಡಲಾಗಿದೆ. ಅವರ ಮನೆಯನ್ನು ನೋಡಿದರೆ ಒಮ್ಮೆ ಎಲ್ಲರೂ ಅಚ್ಚರಿ ಪಟ್ಟುಕೊಳ್ಳುವ ಹಾಗೇ ಇದೆ.

Leave A Reply

Your email address will not be published.