ನಟಿ ಪ್ರೇಮ ಅವರು ಎಂತ ಸೊಗಸಾಗಿ ಹಾಡಿದ್ದಾರೆ ನೋಡಿ

0 5

ಕನ್ನಡ ಚಿತ್ರರಂಗದಲ್ಲಿ ತನ್ನದೆ ಆದ ವೈಶಿಷ್ಟ್ಯದಿಂದ ಹೆಸರು ಮಾಡಿದ ನಟಿ ಇವರು. ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ಖ್ಯಾತಿ ಇವರಿಗೆ ಸಲ್ಲುತ್ತದೆ. ಕನಸುಗಾರ, ನಮ್ಮೂರ ಮಂದಾರ ಹೂವೆ, ನನ್ನವಳು, ಆಪ್ತಮಿತ್ರ ಹೀಗೆ ಅವರ ಸಿನಿಮಾಗಳ ಲೆಕ್ಕಾಚಾರ ಹೇಳುತ್ತಾ ಹೋದರೆ ಮುಂದುವರೆಯುತ್ತಲೆ ಇರುತ್ತದೆ. ಚಿತ್ರರಂಗದ ಎಲ್ಲಾ ದೊಡ್ಡ ದೊಡ್ಡ ಕಲಾವಿದರ ಜೊತೆಗೆ ಅಭಿನಯಿಸಿದ ಹೆಗ್ಗಳಿಕೆ ಇವರದು. ಆ ನಟಿ ಯಾರು ಅನ್ನೋದನ್ನ ನಾವಿಲ್ಲಿ ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಕನ್ನಡದ ಸಾಕಷ್ಟು ಹೆಸರಾಂತ ನಂತರ ಜೊತೆ ನಟನೆ ಮಾಡಿದ ನಟಿ ಬೇರೆ ಯಾರೂ ಅಲ್ಲ ಅವರೇ ನಟಿ ಪ್ರೇಮ. ಹಾಸ್ಯದ ಪಾತ್ರವೇ ಇರಲಿ, ಪ್ರೀತಿಗೆ ಸಂಬಂಧಿಸಿದ ಪಾತ್ರವೆ ಇರಲಿ, ಅಹಂಕಾರ ಸೊಕ್ಕಿನ ಪಾತ್ರವೇ ಇರಲಿ, ಕರುಣೆ ಮಮಕಾರದ ಪಾತ್ರವಿರಲಿ ಎಲ್ಲಾ ಪಾತ್ರಗಳನ್ನು ತನ್ನೊಳಗೆ ಆಹ್ವಾನಿಸಿ ಅಭಿನಯಿಸುವ ಕಲಾವಿದೆ ನಟಿ ಪ್ರೇಮಾ. ಇವರು ಅಂಬರೀಶ್, ವಿಷ್ಣುವರ್ಧನ್, ರವಿಚಂದ್ರನ್, ಶಿವರಾಜ್ ಕುಮಾರ್ ಇಂತಹ ದಿಗ್ಗಜರೊಂದಿಗೂ ಸಿನಿಮಾ ಮಾಡಿದ ಹೆಗ್ಗಳಿಕೆ ಪ್ರೇಮ ಅವರದ್ದು. ಮನೆಯವರೊಂದಿಗೆ ಕಾಲ ಕಳೆಯಲು ಇಷ್ಟಪಡುವ ಇವರು ಮನೆಯವರೊಂದಿಗೆ ಕುಳಿತು ಬಾಳಾ ಬಂಗಾರ ನೀನು ಹಣೆಯ ಸಿಂಧೂರ ನೀನು ನಿನ್ನ ಕೈಲಾಡೊ ಗೊಂಬೆ ನಾನಯ್ಯ ನಾನಯ್ಯ ತಾನೊ ತಂದಾನೊ ತಾನೋ ಎಂದು ಹಾಡಿ ಮನೆಯವರಿಗೆ ಮನರಂಜಿಸಿದರು. ವಿಡಿಯೋ ಕೃಪೆ: ಟಾಪ್ ಕನ್ನಡ

ಅಭಿನಯ ಚತುರೆಯಾದ ಇವರು ಸುಂದರವಾಗಿ ಹಾಡುತ್ತಾರೆ ಕೂಡ. ಪ್ರೇಮ ಅವರು ಮನೆಯವರ ಜೊತೆ ಕಾಲ ಕಳೆಯುತ್ತಾ ತಮ್ಮದೇ ಆದ ಶೈಲಿಯಲ್ಲಿ ತಮಗೆ ಇಷ್ಟ ಬಂದ ಹಾಡನ್ನು ಹಾಡುತ್ತಾ ಇರುತ್ತಾರೆ.ಸದ್ಯಕ್ಕೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Leave A Reply

Your email address will not be published.