ಗೋಲ್ಡನ್ ಸ್ಟಾರ್ ಗಣೇಶ್ ಅವರ ಸಿನಿಮಾಗೆ ನಾಯಕಿಯಾಗಲಿದ್ದಾರೆ ಕಿರುತೆರೆ ನಟಿ. ಅವರು ಯಾರು, ಯಾವ ಸಿನಿಮಾಕ್ಕೆ ನಟಿ ಆಗಲಿದ್ದಾರೆ ಎಂಬೆಲ್ಲಾ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಗೋಲ್ಡನ್ ಸ್ಟಾರ್ ಗಣೇಶ್ ಅವರ ಅಭಿನಯದ ಮುಂದಿನ ಸಿನಿಮಾ ತ್ರಿಬಲ್ ರೈಡಿಂಗ್. ಕಾಮೆಡಿ, ಆಕ್ಷನ್, ಸಸ್ಪೆನ್ಸ್, ಥ್ರಿಲ್ಲರ್ ಹಾಗೂ ಪ್ರೇಮಕಥೆ ಇರುವ ಈ ಸಿನಿಮಾವನ್ನು ಮಹೇಶ್ ಗೌಡ ಅವರು ನಿರ್ದೇಶನ ಮಾಡುತ್ತಿದ್ದಾರೆ. ಕೃಪಾಳು ಎಂಟರಟೇನಮೆಂಟ್ ಲಾಂಛನದಲ್ಲಿ ರಾಮ್ ಗೋಪಾಲ್ ವೈ.ಎಂ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸಾಯಿ ಕಾರ್ತಿಕ್ ಈ ಸಿನಿಮಾಕ್ಕೆ ಸಂಗೀತ ನಿರ್ದೇಶನವನ್ನು ಮಾಡುತ್ತಿದ್ದಾರೆ. ಝೀ ಕನ್ನಡದಲ್ಲಿ ಪ್ರಸಾರವಾಗುವ ಜೊತೆಜೊತೆಯಲಿ ಧಾರಾವಾಹಿ ಈಗಾಗಲೇ ಸಾಕಷ್ಟು ಜನಪ್ರಿಯವಾಗಿದ್ದು, ಇದರಲ್ಲಿ ನಟಿಸಿರುವ ಬಹುತೇಕ ನಟ ನಟಿಯರಿಗೂ ಕೂಡಾ ದೊಡ್ಡ ಮಟ್ಟದ ಜನಪ್ರಿಯತೆ ಕೂಡಾ ದಕ್ಕಿದ್ದು, ಟಿ.ಆರ್.ಪಿ ವಿಷಯದಲ್ಲೂ ಕೂಡಾ ಈ ಧಾರಾವಾಹಿ ಟಾಪ್ ನಲ್ಲಿದೆ.

ಈ ಧಾರಾವಾಹಿಯಲ್ಲಿ ನಾಯಕಿಯಾಗಿ ಕಾಣಿಸಿಕೊಂಡ ನಟಿ ಮೇಘಾ ಶೆಟ್ಟಿ, ತನ್ನ ಮುಗ್ಧ ಮಾತು ಹಾಗೂ ನಟನೆಯ ಮೂಲಕ ಎಲ್ಲರ ಮನೆ ಮಾತಾಗಿದ್ದಾರೆ. ಮೇಘಾ ಶೆಟ್ಟಿ ಇದೀಗ ಕಿರುತೆರೆಯಿಂದ ಬೆಳ್ಳಿ ತೆರೆಗೆ ಹೆಜ್ಜೆ ಇಡಲು ಸಿದ್ಧರಾಗಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ ಅವರ ತ್ರಿಬಲ್ ರೈಡಿಂಗ್ ಸಿನಿಮಾದ ನಾಯಕಿಯಾಗಿ ಮೇಘಾ ಶೆಟ್ಟಿ ಆಯ್ಕೆ ಆಗಿದ್ದಾರೆ. ಈ ಮೂಲಕ ಮೇಘಾ ಶೆಟ್ಟಿ ಸಿನಿಮಾ ನಾಯಕಿಯಾಗಿ ಸ್ಯಾಂಡಲ್ ವುಡ್ ಪ್ರವೇಶವನ್ನು ಮಾಡುತ್ತಿದ್ದಾರೆ. ಈಗಾಗಲೇ ಕಿರುತೆರೆಯ ಮೂಲಕ ಹೆಸರು ಮಾಡಿರುವ ಮೇಘಾ ಅವರ ನಟನೆಯ ಪಯಣ ಈಗ ಬೆಳ್ಳಿ ತೆರೆ ಕಡೆ ಆಗಿದ್ದು ಅವರಿಗೆ ದೊಡ್ಡ ಮಟ್ಟದ ಯಶಸ್ಸು ಸಿಗಲೆಂದು ಹಾಗೂ ನಟ ಗಣೇಶ್ ಅವರ ಸಿನಿಮಾ ಯಶಸ್ವಿಯಾಗಲಿ ಎಂದು ಹಾರೈಸೋಣ.

Leave a Reply

Your email address will not be published. Required fields are marked *