ಸೆಲೆಬ್ರಿಟಿಗಳು ಒಂದಲ್ಲ ಒಂದು ರೀತಿಯ ಸುದ್ದಿಯಲ್ಲಿ ಇರುತ್ತಾರೆ, ಅವರಿಗೆ ಹೊಸ ಹೊಸ ಪ್ರಯೋಗ ಮಾಡಿ ಸುದ್ದಿಯಲ್ಲಿ ಇರುವುದು ಒಂದು ರೀತಿ ಖುಷಿ ಕೊಡುತ್ತದೆಯೋ ಏನೋ..

ಜನಪ್ರಿಯ ನಟ ಕೆವಿನ್ ಹೆಣ್ಣಾಗಿ ಬದಲಾಗಿದ್ದಾರೆ, ಈ ವಿಷಯವಾಗಿ ಅವರು ಅವರ ಫೋಟೋಗಳನ್ನು ಇನ್ಸ್ಟಾಗ್ರಾಂ ಅಕೌಂಟ್ ಮೂಲಕ ಹಂಚಿಕೊಂಡಿದ್ದಾರೆ. ನಟ ಈ ರೀತಿ ಏಕಾಏಕಿ ಬದಲಾಗಿದ್ದು, ನೋಡಿ ಅವರ ಅಭಿಮಾನಿಗಳು ಶಾಕ್’ಗೆ ಒಳಗಾಗಿದ್ದಾರೆ.

ಈ ನಟ ಹೆಂಗಸಿನ ರೀತಿ ಬಟ್ಟೆ ಧಾರಣೆ ಮಾಡಲು ಕಾರಣವೇನು?.
ಕಾಲಿವುಡ್‌ ನಟ ಕೆವಿನ್ ತಮಿಳು ಚಿತ್ರರಂಗದಲ್ಲಿ ಉದಯೋನ್ಮುಖ ನಾಯಕ. ಸಧ್ಯ ಕವಿನ್‌ ಅವರ ಇನ್ಸ್ಟಾಗ್ರಾಮ್ ಪುಟದಲ್ಲಿ ಕೆಲವು ಹೊಸ ಫೋಟೋಗಳನ್ನು ಪ್ರಕಟಣೆ ಮಾಡಿದ್ದಾರೆ.

ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ತಮಿಳು ಕಿರುತೆರೆಯ ಮುಖಾಂತರ ಕೆವಿನ್‌ ಅಭಿಮಾನಿಗಳಿಗೆ ಪರಿಚಯವಾದವರು. ಬಿಗ್ ಬಾಸ್ ಕಾರ್ಯಕ್ರಮದ ಮುಖಾಂತರ ಜನಮನ್ನಣೆ ಗಳಿಸಿದವರು. ಕೆವಿನ್ ಸದ್ಯ ‘ ಸ್ಟಾರ್ ‘ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಯುವನ್ ಶಂಕರ್ ರಾಜಾ ಸಂಗೀತ ಸಂಯೋಜನೆ ಮಾಡಿದ್ದಾರೆ. ಸದ್ಯ ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಇದೆ.

ಇದರ ಮಧ್ಯೆ’ ಸ್ಟಾರ್ ‘‌ ಸಿನಿಮಾದ ಮೊದಲ ಸಿಂಗಲ್ ಪೋಸ್ಟರ್ ಇಂದು ಬಿಡುಗಡೆಯಾಗಿದ್ದು, ಈ ಹಾಡಿನಲ್ಲಿ ಕೆವಿನ್‌ ಯುವತಿಯ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಲೀರಿಕಲ್ ‌ಸಾಂಗ್’ಗೆ ಅಭಿಮಾನಿಗಳು ಅತ್ಯುತ್ತಮ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಲೆಡಿ ಗೆಟಪ್’ನಲ್ಲಿ ಕೆವಿನ್‌ ನೋಡಿದ ಪ್ಯಾನ್ಸ್‌ ಥ್ರಿಲ್‌ ಆಗಿದ್ದಾರೆ.

Leave a Reply

Your email address will not be published. Required fields are marked *