Rain Alert: ಈ ಜಿಲ್ಲೆಗಳಲ್ಲಿ ಇನ್ನು 2 ದಿನ ಬಾರಿ ಮಳೆಯಾಗಲಿದೆ ಹವಾಮಾನ ಇಲಾಖೆಯಿಂದ ಸೂಚನೆಸೂರ್ಯನ ಶಾಖಕ್ಕೆ ಬೆವರಿ ಬೆಂಡಾಗಿ ಹೋಗಿರುವ ಜನ ಕಾಯ್ತಾ ಇರೋದು ಮಳೆಗೆ, ಜನರಂತೂ ಸೂರ್ಯ ನಿನ್ನ ಬ್ರೈಟ್ನೆಸ್ (brightness) ಕಮ್ಮಿ ಮಾಡು ಮಾರಾಯ ಇಲ್ಲ ಕೆಲಸಕ್ಕೆ ರಾಜೆ ಹಾಕಿ ಬೇರೆ ಎಲ್ಲಿಗಾದರೂ ಹೋಗಿ ಬಾರಯ್ಯ ಎನ್ನುವ ಲೆವೆಲ್’ಗೆ ಬೇಡಿಕೆ ಇಟ್ಟಿದ್ದಾರೆ. ರಾಜ್ಯದಲ್ಲಿ ಇಂದು ಮತ್ತು ನಾಳೆ ಭಾರಿ ಮಳೆಯಾಗುವುದು ಎಂದು ಹವಾಮಾನ ಇಲಾಖೆ ಮಾಹಿತಿ ಕೊಟ್ಟಿದ್ದಾರೆ.

ಇಂದು ಮತ್ತು ನಾಳೆ ರಾಜ್ಯದ ಕೆಲವು ಕಡೆ ಗುಡುಗು-ಮಿಂಚು ಸಮೇತ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಕರ್ನಾಟಕದ ರಾಜ್ಯದ ಹೆಚ್ಚಿನ ಜಿಲ್ಲೆಗಳಲ್ಲಿ ಸ್ವಲ್ಪ ಮಳೆಯಾಗುವ ಸಾಧ್ಯತೆ ಇದೆ, ಕರಾವಳಿಯ ಎಲ್ಲಾ ಜಿಲ್ಲೆಗಳಿಗೆ ಯೇಲ್ಲೋ ಅಲರ್ಟ್ (yellow alert) ಘೋಷಣೆ ಮಾಡಲಾಗಿದೆ.

ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಭಾಗಕ್ಕೆ ಯೇಲ್ಲೋ ಅಲರ್ಟ್ (yellow alert) ಘೋಷಿಸಲಾಗಿದೆ, ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ (orange alert) ಘೋಷಣೆ ಮಾಡಲಾಗಿದೆ.

ಬೆಂಗಳೂರು ನಗರ, ಗ್ರಾಮಾಂತರ, ತುಮಕೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಮಂಡ್ಯ, ಮೈಸೂರು, ಕೋಲಾರ, ರಾಮನಗರ, ಶಿವಮೊಗ್ಗ, ವಿಜಯನಗರ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ (Yellow alert) ನೀಡಲಾಗಿದೆ. ಗುಡುಗು-ಮಿಂಚು ಸಮೇತ ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆಯ ನೀಡಿದೆ.

Leave a Reply

Your email address will not be published. Required fields are marked *