Ashada Masa: ಆಷಾಡ ಮಾಸ ಯಾವಾಗ ಪ್ರಾರಂಭ, ಈ ಮಾಸದಲ್ಲಿ ಒಳ್ಳೆ ಕೆಲಸ ಮಾಡಲು ಹಿಂದೇಟು ಹಾಕ್ತಾರೆ ಯಾಕೆ? ಇಲ್ಲಿದೆ ಮಾಹಿತಿ

0 5

Ashada Masa: ಆಷಾಢ ಮಾಸ ಎಂದರೆ ಕೆಲವರಿಗೆ ಅಥವಾ ತುಂಬಾ ಜನರಿಗೆ ಕೆಟ್ಟದ್ದು ಎನ್ನುವ ಭಾವನೆ ಮೂಡುತ್ತದೆ ಮತ್ತು ಈ ಮಾಸದಲ್ಲಿ ಮಳೆ ಗಾಳಿ ಹಾಗೂ ಗುಡುಗಿನಿಂದ ಕೂಡಿ ಇರುತ್ತದೆ ಹಾಗೆಯೇ ಆಷಾಢ ಮಾಸ (Ashada Masa) ಬಂತೆಂದರೆ ಮನೆಯ ಸೊಸೆಯನ್ನು ತವರು ಮನೆಗೆ ಕಳುಹಿಸುವ ಸಂಪ್ರದಾಯ ಹಿಂದೂ ಧರ್ಮದಲ್ಲಿ ಕಂಡು ಬರುತ್ತದೆ ಹಾಗೆಯೇ ನವ ವಧುವರರು ಆಷಾಢ ಮಾಸದಲ್ಲಿ ಒಟ್ಟಿಗೆ ಇರಬಾರದು ಎನ್ನುವ ಸಂಪ್ರದಾಯ ಇರುತ್ತದೆ

ಆಷಾಢ ಮಾಸದಲ್ಲಿ ಮದುವೆ ಮುಂಜಿ ವಾಹನ ಖರೀದಿ ಭೂಮಿ ಖರೀದಿ ಹಾಗೂ ಹೊಸ ಹೊಸ ವ್ಯಾಪಾರ ವ್ಯವಹಾರ ಮಾಡುವುದು ಹೀಗೆ ಅನೇಕ ಶುಭ ಸಂಗತಿ ಹಾಗೂ ಶುಭ ಕಾರ್ಯವನ್ನು ಮಾಡಲಾಗುವುದು ಇಲ್ಲ. ಪ್ರತಿಯೊಬ್ಬರೂ ಸಹ ಆಷಾಢ ಮಾಸದ ಪೂರ್ವದಲ್ಲಿಯೇ ಶುಭಕಾರ್ಯವನ್ನು ಮಾಡಿ ಮುಗಿಸುತ್ತಾರೆ ಹಾಗೆಯೇ ಈ ಮಾಸದಲ್ಲಿ ಕೆಲಸ ಕಾರ್ಯಗಳಿಗೆ ವಿಳಂಬ ಕಂಡು ಬರುವ ಕಾರಣದಿಂದ ಮನೆಯಲ್ಲಿ ಅತ್ತೆ ಸೊಸೆಗೆ ಭಿನ್ನಾಭಿಪ್ರಾಯ ಕಂಡು ಬರಬಾರದು ಎನ್ನುವ ಕಾರಣದಿಂದಲೂ ಸಹ ತವರು ಮನೆಗೆ ಕಳುಹಿಸಿ ಕೊಡಲಾಗಿತ್ತದೆ ನಾವು ಈ ಲೇಖನದ ಮೂಲಕ ಆಷಾಢ ಮಾಸದ ಮಹತ್ವ ಹಾಗೂ ಒಳ್ಳೆಯ ಕೆಲಸ ಮಾಡಲು ಯಾಕೆ ಹಿಂದೇಟು ಹಾಕುತ್ತಾರೆ ಎನ್ನುವುದನ್ನು ತಿಳಿದುಕೊಳ್ಳೋಣ.

ಆಷಾಢ ಮಾಸ ಆರಂಭ ಆದರೆ ಯಾರೂ ಸಹ ಶುಭ ಕಾರ್ಯವನ್ನು ಮಾಡುವುದು ಇಲ್ಲ ಹಿಂದೂ ಜೋತಿಷ್ಯ ಪ್ರಕಾರ ಅಶುಭ ಮಾಸ ಇದಾಗಿದೆ ಈ ಮಾಸದಲ್ಲಿ ವಾಹನ ಖರೀದಿ ಜಮೀನು ಖರೀದಿ ಮದುವೆ ಉಪನಯನ ಪೂಜೆ ಕಾರ್ಯ ಹೊಸ ವ್ಯಾಪಾರ ಪ್ರಾರಂಭ ಇತರದ ಯಾವುದೇ ಕಾರ್ಯವನ್ನು ನಿಷೇಧಿಸಲಾಗಿದೆ ಇದಕ್ಕೆ ನೂರಾರು ಕಾರಣಗಳು ಇರುತ್ತದೆ ಈ ಮಾಸದಲ್ಲಿ ಮಳೆಯ ಆರ್ಭಟ ಜಾಸ್ತಿ ಇರುತ್ತದೆ ಮಳೆ ಗಾಳಿಯಿಂದ ಸಂಚಾರಕ್ಕೆ ತೊಂದರೆ ಕಂಡು ಬರುತ್ತದೆ

ಹೀಗೆ ಅನೇಕ ಕಾರಣಗಳಿಂದ ಆಷಾಢ ಮಾಸದಲ್ಲಿ ಶುಭಕಾರ್ಯ ಮಾಡಲು ನಿರ್ಧರಿಸುವುದು ಇಲ್ಲ ಆಂಧ್ರ ಪ್ರದೇಶ ಹಾಗೂ ಕರ್ನಾಟಕದಲ್ಲಿ ಕೆಲವು ಸಮುದಾಯದಲ್ಲಿ ನವ ವಧುವರರು ಆಷಾಢ ಮಾಸದಲ್ಲಿ ಒಟ್ಟಿಗೆ ಇರಬಾರದು ಎನ್ನುವ ಸಂಪ್ರದಾಯ ಇರುತ್ತದೆ ಈ ಮಾಸದಲ್ಲಿ ಗರ್ಭ ಧರಿಸಿದರೆ ಚೈತ್ರ ಮಾಸ ಅಥವಾ ಬೇಸಿಗೆಯಲ್ಲಿ ಮಗು ಜನಿಸುತ್ತದೆ.

ಬೇಸಿಗೆ ಅವಧಿಯಲ್ಲಿ ಹೆಚ್ಚಿನ ತೊಂದರೆ ಕಂಡು ಬರುತ್ತದೆ ಹೀಗಾಗಿ ಈ ಸಂಪ್ರದಾಯ ಮಾಡಿದ್ದಾರೆ ಆಷಾಢ ಮಾಸ ಮಳೆಗಾಲವಾದ್ದರಿಂದ ಮನೆಯಲ್ಲಿ ಹೊಲ ಗದ್ದೆಗಳಲ್ಲಿ ತುಂಬಾ ಕೆಲಸ ಇರುತ್ತದೆ ಅತ್ತೆಯದವರು ಸೊಸೆಗೆ ಹೆಚ್ಚಿನ ಒತ್ತಡ ತರುತ್ತಾಳೆ ಇದರಿಂದ ಇಬ್ಬರ ನಡುವೆ ಭಿನ್ನಾಭಿಪ್ರಾಯ ಕಂಡು ಬರುತ್ತದೆ ಎನ್ನುವ ಉದ್ದೇಶದಿಂದ ಒಂದು ತಿಂಗಳ ಕಾಲ ತವರುಮನೆಗೆ ಕಳುಹಿಸುವ ಸಂಪ್ರದಾಯ ಇರುತ್ತದೆ .

ಈ ಮಾಸದಲ್ಲಿ ಕುಮಾರ ಷಷ್ಠಿ ಮತ್ತು ಶನಿಗೌರಿ ವ್ರತ ಹಾಗೂ ಭಾನು ಸಪ್ತಮಿ ಮತ್ತು ಭೀಮನ ಅಮಾವಾಸ್ಯೆ ಈ ತಿಂಗಳಲ್ಲಿ ಕಂಡು ಬರುವ ಶುಭದಿನಗಳಾಗಿವೆ 2023 ಜೂನ್ 19 ಸೋಮವಾರ ಆರಂಭ ಆಗುತ್ತದೆ ಜುಲೈ ಹದಿನೇಳು ಸೋಮವಾರದಂದು ಅಂತ್ಯ ಆಗುತ್ತದೆ ಈ ಮಾಸದ ಮಹತ್ವ ಹೀಗೆ ಇರುತ್ತದೆ ಗಂಗೆಯು ಭೂಮಿಗೆ ಉತ್ತರಾಭಿಮುಖವಾಗಿ ಹರಿದು ಬಂದಿದ್ದು ಈ ಮಾಸದಲ್ಲಿ ಮತ್ತು ಅನಸೂಯಾ ದೇವಿ ಎನ್ನುವ ಪತಿವೃತೆ ಈ ಮಾಸದ ನಾಲ್ಕು ಸೋಮವಾರ ಶಿವ ವೃತವನ್ನು ಮಾಡಿದ್ದಳು ಅಮರನಾಥನ ದರ್ಶನ ಪ್ರತಿ ವರ್ಷ ಈ ಸಮಯದಲ್ಲಿ ಆರಂಭ ಆಗುತ್ತದೆ

ಪ್ರಥಮ ಏಕಾದಶಿ ವ್ರತ ಆರಾಧನೆ ಬರುವುದು ಆಷಾಢ ಮಾಸದಲ್ಲಿ ಹೀಗೆ ಹೆಚ್ಚಿನ ಮಹತ್ವವನ್ನು ಹೊಂದಿದೆ .ಕೆಲವರು ಆಷಾಢ ಮಾಸವನ್ನು ಕೆಟ್ಟದ್ದು ಎಂದು ಭಾವಿಸುತ್ತಾರೆ ಆದರೆ ಈ ಮಾಸ ಕೆಟ್ಟದ್ದು ಅಲ್ಲ ಕಾರಣಾಂತರದಿಂದ ಶುಭ ಕಾರ್ಯವನ್ನು ಮಾಡಲಾಗುವುದು ಇಲ್ಲ ಹಾಗೂ ಲಕ್ಷ್ಮಿ ಪೂಜೆ ವೃತ ಆಷಾಢ ಶುಕ್ರವಾರದ ಪೂಜೆ ಭೀಮನ ಅಮಾವಾಸ್ಯೆ ಶನಿ ಗೌರಿ ವೃತ ಹೀಗೆ ಅತ್ಯಂತ ಮಂಗಳಕರ ದಿನಗಳು ಆಷಾಢ ಮಾಸದಲ್ಲಿ ಬರುತ್ತದೆ ಹೀಗೆ ಆಷಾಢ ಮಾಸವು ಕೆಟ್ಟದಲ್ಲ ಬದಲಾಗಿ ಆಷಾಢ ಮಾಸದಲ್ಲಿ ಲಕ್ಷ್ಮಿ ದೇವಿಯ ಆರಾಧನೆ ಮಾಡಲಾಗುತ್ತದೆ ಹಾಗೂ ಅತ್ಯಂತ ಮಹತ್ವವನ್ನು ಪಡೆದ ಮಾಸ ಇದಾಗಿದೆ. ಇದನ್ನೂ ಓದಿ Asadha Month: ಆಷಾಡ ಮಾಸದಲ್ಲಿ ಅತ್ತೆ ಸೊಸೆ ಒಂದೇ ಕಡೆ ಇರಬಾರದು, ಗಂಡ ಹೆಂಡ್ತಿ ಸೇರಬಾರದು ಯಾಕೆ ಗೊತ್ತಾ..

Leave A Reply

Your email address will not be published.