ವಿಷ್ಣುವರ್ಧನ್ ಅವರಿಗೆ ಕಥೆ ಹೇಳುತ್ತಲೇ ಒಂದಿಷ್ಟು ದೃಶ್ಯಗಳನ್ನು ಹೆಣೆದು ಹೇಳಿದಾಗ ಕಥೆಯನ್ನು ಹೇಳಿ ಮುಗಿಸುವಷ್ಟರಲ್ಲಿ ಎಸ್ ನಾರಾಯಣ್ ಅವರಿಗೆ ಒಂದು ಅಚ್ಚರಿ ಕಾದಿತ್ತು. ವಿಷ್ಣುವರ್ಧನ್ ಅವರು ಕಥೆ ಕೇಳಿ ಮುಗಿಯುವವರೆಗೂ ಏನು ಮಾತೇ ಆಡಲಿಲ್ಲ. ಎಸ್ ನಾರಾಯಣ್ ಅವರು ಚಿತ್ರವನ್ನು ನಾನೇ ನಿರ್ಮಾಣ ಮಾಡುತ್ತೇನೆ ಆದರೆ ಸಂಭಾವನೆಯಲ್ಲಿ ನನಗೆ ಸ್ವಲ್ಪ ವಿನಾಯಿತಿ ನೀಡಬೇಕು. ನಿಮಗೆ ಮಾರ್ಕೆಟ್ ಇರುವಷ್ಟು ಸಂಭಾವನೆಯನ್ನು ನನಗೆ ನೀಡಲು ಆಗುವುದಿಲ್ಲ ಎಂದು ಎಸ್ ನಾರಾಯಣ್ ಅವರು ಹೇಳಿದಾಗ ವಿಷ್ಣುವರ್ಧನ್ ಅವರು ಎಸ್ ನಾರಾಯಣ್ ಅವರಿಗೆ ಮೊದಲು ಸಿನಿಮಾ ಮಾಡಿ ಸಂಭವನೆಯ ಬಗ್ಗೆ ನಂತರ ನೋಡೋಣ ಎಂದು ವಿಷ್ಣುವರ್ಧನ್ ಅವರು ಹೇಳಿದರು. ವಿಷ್ಣುವರ್ಧನ್ ಅವರು ಎಸ್ ನಾರಾಯಣ್ ಅವರಿಗೆ ಯಾವ ಸಿನಿಮಾ ಸಮಯದಲ್ಲಿ ಈ ಮಾತನ್ನು ಹೇಳಿದ್ದರು ಹಾಗೂ ಅವರು ಪಡೆದುಕೊಂಡ ಸಂಭಾವನೆ ಎಷ್ಟು ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ನಿರ್ದೇಶಕ ಎಸ್ ನಾರಾಯಣ್ ಅವರು ಹೇಳುವಂತೆ ತನ್ನ ಎದುರು ಕುಳಿತಿರುವ ವ್ಯಕ್ತಿಗೆ ಒಬ್ಬ ಕಥೆಗಾರ ತನ್ನ ಕಥೆಯನ್ನು ಹೇಳಬೇಕಾದರೆ ಕಥೆಯನ್ನು ಕೇಳುವವ ಆತ ಒಬ್ಬ ಕನ್ನಡಿಯಂತೆ ಆಗಿರುತ್ತಾನೆ. ಕಥೆ ಹೇಗೆ ಬರುತ್ತದೆ ಎನ್ನುವುದು ಕೇಳುವವರ ಪ್ರತಿಕ್ರಿಯೆ ಮೂಲಕ ನಾವು ತಿಳಿದುಕೊಳ್ಳಬಹುದು. ಎದುರುಗಡೆ ಇರುವಂತಹ ವ್ಯಕ್ತಿ ಕತೆಯನ್ನು ಸರಿಯಾಗಿ ಕೇಳದೆ ಆತನಿಗೆ ಬೇಸರ ಉಂಟಾದಲ್ಲಿ ಆಕಳಿಸುವುದು ಸರಿಯಾಗಿರುವುದು ಮಾಡಿದರೆ ಅಲ್ಲಿಗೆ ಕುಂದುತ್ತದೆ ಏನು ಹೇಳಬೇಕು ಎಂದುಕೊಂಡು ಬಂದಿರುವನು ಅದನ್ನು ಮರೆತು ಬಿಡುತ್ತಾನೆ. ಆದರೆ ಎಸ್ ನಾರಾಯಣ್ ಅವರ ವಿಷ್ಣುವರ್ಧನ್ ಅವರ ಬಗ್ಗೆ ಈ ರೀತಿಯಾಗಿ ಹೇಳುತ್ತಾರೆ. ವಿಷ್ಣುವರ್ಧನ್ ಅವರ ಬಳಿ ಕಥೆ ಹೇಳುವಾಗ ಅವರು ಹೇಗೆ ಕೇಳುತ್ತಿದ್ದಾರೆ ಎಂದರೆ ತನಗೆ ಕಥೆಯನ್ನು ಹೇಳುವಾಗಲೇ ಒಂದಿಷ್ಟು ಹೊಸ ಹೊಸ ದೃಶ್ಯಗಳು ಕೂಡ ತನ್ನಲ್ಲಿಯೇ ಹುಟ್ಟಿಕೊಂಡು ಅವರಿಗೆ ಅದನ್ನು ಹೇಳಿದ್ದೆ. ಕಥೆಯಲ್ಲಿ ಇಲ್ಲದೆ ಇರುವಂತಹ ದೃಶ್ಯಗಳನ್ನು ತರಿಸಲು ವಿಷ್ಣುವರ್ಧನ್ ಅವರು ತನಗೆ ಸ್ಫೂರ್ತಿಯಾಗಿದ್ದಾರೆ ಎಂದು ನಾರಾಯಣ್ ಅವರು ಹೇಳುತ್ತಾರೆ.

ವಿಷ್ಣುವರ್ಧನ್ ಅವರ ಕಥೆಯನ್ನು ಕೇಳುತ್ತಾ ತುಂಬಾ ಭಾವುಕರಾಗಿದ್ದು ಕಥೆ ಹೇಳಿ ಮುಗಿಸಿದ ನಂತರ ಎದ್ದು ನಿಂತು ಸೆಲ್ಯೂಟ್ ಹೊಡೆದಿದ್ದರು ಎಂದು ಎಸ್ ನಾರಾಯಣ್ ಅವರು ಹೇಳುತ್ತಾರೆ. ಚಿತ್ರದ ಕಥೆಯನ್ನು ಹೇಳಿ ಮುಗಿಸಿದ ನಂತರ ಆರೇಳು ನಿಮಿಷಗಳ ಕಾಲ ವಿಷ್ಣುವರ್ಧನ್ ಹಾಗೂ ಎಸ್ ನಾರಾಯಣ್ ಇವರಿಬ್ಬರ ನಡುವೆ ಯಾವುದೇ ಮಾತುಕತೆ ಇಲ್ಲ ಬರಿ ಮೌನವೊಂದೇ ಆವರಿಸುತ್ತದೆ. ಬಹಳಷ್ಟು ಭಾವುಕರಾಗಿದ್ದರು. ಎಸ್ ನಾರಾಯಣ್ ಅವರ ವಿಷ್ಣುವರ್ಧನ್ ಅವರನ್ನು ಈ ಒಂದು ಚಿತ್ರದಲ್ಲಿ ತುಂಬಾ ವಿಭಿನ್ನ ರೀತಿಯಲ್ಲಿ ತೋರಿಸಲು ಇಷ್ಟಪಟ್ಟಿದ್ದರು. ಆ ಚಿತ್ರವೇ ದೇಶಪ್ರೇಮದ ವೀರಪ್ಪನಾಯಕ” ಚಿತ್ರ. ವಿಷ್ಣುವರ್ಧನ್ ಅವರ ಇದನ್ನು ಕೇಳಿ ತಾನು ವೀರಪ್ಪ ನಾಯಕನ ಪಾತ್ರದಲ್ಲಿ ಅಭಿನಯಿಸುವುದು ತನಗೆ ತುಂಬಾ ಹೆಮ್ಮೆ ಎಂದು ಹೇಳಿದ್ದರಂತೆ. ವಿಷ್ಣುವರ್ಧನ್ ಅವರು ಸುಮಾರು ಒಂದು ಹತ್ತರಿಂದ ಹದಿನೈದು ನಿಮಿಷಗಳ ಕಾಲ ಕಥೆಯನ್ನು ಮೆಲುಕುಹಾಕುತ್ತಾ ಕಥೆಯ ಬಗ್ಗೆ ಹೊಗಳಿದರೆ ಹೊರತು ಕಥೆಯಲ್ಲಿ ಯಾವುದೇ ಲೋಪದೋಷಗಳನ್ನು ಕೂಡ ಕಂಡುಹಿಡಿಯಲು ಅವರಿಂದ ಆಗಲಿಲ್ಲವಂತೆ.

ಸಂಪೂರ್ಣ ದೇಶಪ್ರೇಮದ ಚಿತ್ರವಾಗಿರುವ ವೀರಪ್ಪನಾಯಕ ಚಿತ್ರ ಕಾಗೆ ಎಸ್ ನಾರಾಯಣ್ ಅವರ ವಿಷ್ಣುವರ್ಧನ್ ಅವರ ಬಳಿ ಅವರ ಅಭಿನಯಕ್ಕೆ ಸಂಭಾವನೆಯನ್ನು ಎಷ್ಟು ನೀಡಬೇಕು ಎಂದು ಕೇಳಿದಾಗವಿಷ್ಣುವರ್ಧನ್ ಅವರ ಎಸ್ ನಾರಾಯಣ್ ಅವರಿಗೆ ನಾವಿಬ್ಬರೂ ಸೇರಿ ಈ ಸಿನಿಮಾವನ್ನು ಮಾಡುತ್ತಿದ್ದೇವೆ ಸಂಭಾವನೆಯನ್ನು ನಾನು ಇಷ್ಟೇ ಬೇಕು ಎಂದು ಕೇಳುವುದಿಲ್ಲ ನೀವು ಕೊಟ್ಟಷ್ಟು ನಾನು ತೆಗೆದುಕೊಳ್ಳುವೆ ಎಂದು ಹೇಳಿದ್ದರಂತೆ. ಈ ರೀತಿಯಾಗಿ ವೀರಪ್ಪನಾಯಕ ಸಿನಿಮಾಗೆ ಅರ್ಧ ಯಶಸ್ಸು ಅಲ್ಲಿ ದೊರಕಿತ್ತು ಎಂದು ಎಸ್ ನಾರಾಯಣ್ ಅವರು ಹೇಳುತ್ತಾರೆ. ಈ ಮೂಲಕ ಎಸ್ ನಾರಾಯಣ್ ಹಾಗೂ ವಿಷ್ಣುವರ್ಧನ್ ಅವರ ಮೊದಲ ಚಿತ್ರ ವೀರಪ್ಪನಾಯಕ ಆರಂಭವಾಗಿತ್ತು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!