ತಮ್ಮ ನೈಜ ಹಾಗೂ ಅಮೋಘ ನಟನೆಯ ಮೂಲಕ ಪ್ರತಿಯೊಬ್ಬರ ಮನದಲ್ಲಿ ಮನೆಮಾತಾಗಿರುವ ಕನ್ನಡದ ನಟಿ ಅಂದರೆ ಅರುಣಾ ಬಾಲರಾಜ್ ಅವರು. ಧಾರಾವಾಹಿಯ ಮೂಲಕ ತಮ್ಮ ನಟನೆಯನ್ನು ಆರಂಭಿಸಿದ ಅರುಣ ಅವರು ತಮ್ಮ ನೈಜ ನಟನೆಯ ಮೂಲಕ ಜನರನ್ನು ತಮ್ಮ ಕಡೆ ಸೆಳೆದುಕೊಂಡರು. ಚನ್ನರಾಯಪಟ್ಟಣದಲ್ಲಿ ಹುಟ್ಟಿ ಬೆಳೆದ ಅರುಣ ಅವರು ಅಲ್ಲಿಯೇ ತಮ್ಮ ಬಾಲ್ಯದ ಶಿಕ್ಷಣವನ್ನು ಕೂಡ ಮುಗಿಸಿದರು. ಚಿಕ್ಕಂದಿನಿಂದಲೂ ನಟನೆಯ ಬಗ್ಗೆ ಬಹಳ ಆಸಕ್ತಿ ಯನ್ನು ಹೊಂದಿದ್ದು ಆಕರ್ಷಿತರಾಗಿದ್ದ ಅರುಣ ಅವರು ತಮ್ಮ ಡಿಗ್ರಿ ಮುಗಿದ ನಂತರ ಮದುವೆಯಾದರು. ಆದರೆ ಇವರ ಅದೃಷ್ಟ ಹೇಗಿತ್ತು ಎಂದರೆ ಅವರು ಮದುವೆಯಾಗಿ ಹೋಗಿರುವುದು ಘಟನೆಯ ಹಿನ್ನೆಲೆ ಇರುವಂತಹ ಒಂದು ಕುಟುಂಬಕ್ಕೆ ಮದುವೆಯಾಗಿ ಹೋಗಿದ್ದರು. ಅರುಣ ಅವರ ಮಾವ ಶ್ರೀನಿವಾಸಮೂರ್ತಿ ಅವರು ಸಾಕಷ್ಟು ಧಾರಾವಾಹಿಗಳಲ್ಲಿ ನಟನೆ ಮಾಡುತ್ತಿದ್ದರು. ಅರುಣ ಅವರು ಇದೇ ಸಮಯದಲ್ಲಿ ತಮ್ಮ ಮಾವ ಶ್ರೀನಿವಾಸಮೂರ್ತಿ ಅವರ ಬಳಿ ನನಗೂ ಕೂಡ ಧಾರಾವಾಹಿಗಳಲ್ಲಿ ನಟನೆ ಮಾಡುವ ಆಸಕ್ತಿ ಹಾಗೂ ಆಸೆ ಇದೆ ಹಾಗಾಗಿ ತನಗೂ ಒಂದು ಅವಕಾಶವನ್ನು ಕೊಡಿಸಿ ಎಂದು ತಮ್ಮ ಮಾವನ ಬಳಿ ಕೇಳಿಕೊಂಡರು.

ಆಗ ಅರುಣ ಅವರ ಮಾವ ಶ್ರೀನಿವಾಸಮೂರ್ತಿ ಅವರು ಮನ್ವಂತರ ಧಾರವಾಹಿಯಲ್ಲಿ ನಟನೆ ಮಾಡುತ್ತಿದ್ದರು. ಮನ್ವಂತರ ಧಾರವಾಹಿಯ ನಿರ್ದೇಶಕರಾದ ಟಿ ಎನ್ ಸೀತಾರಾಮ್ ಅವರ ಬಳಿ ಶ್ರೀನಿವಾಸಮೂರ್ತಿಯವರು ತಮಗೂ ಕೂಡ ಒಂದು ಅವಕಾಶವನ್ನು ಕೊಡುವಂತೆ ಕೇಳಿಕೊಂಡರು. ನಂತರದ ದಿನಗಳಲ್ಲಿ ಅರುಣ ಅವರ ಅಭಿನಯವನ್ನು ಗಮನಿಸಿದ ನಿರ್ದೇಶಕರು ಒಂದು ದಿನ ಮನ್ವಂತರ ಧಾರಾವಾಹಿಯಲ್ಲಿ ನಟಿಸಲು ಒಂದು ದಿನದ ಅವಕಾಶವನ್ನು ನೀಡಿದರು. ಅರುಣ ಅವರ ತನಗೆ ಸಿಕ್ಕ ಅವಕಾಶವನ್ನು ಸರಿಯಾಗಿ ಸದುಪಯೋಗ ಪಡಿಸಿಕೊಂಡು ನಟನೆ ಮಾಡಿ ಎಲ್ಲರ ಮೆಚ್ಚುಗೆ ಗಳಿಸಿ ಮತ್ತಷ್ಟು ಧಾರವಾಹಿಗಳಲ್ಲಿ ನಟಿಸುವ ಅವಕಾಶವನ್ನು ಪಡೆದುಕೊಂಡರು. ಇದುವರೆಗೂ ನಟಿ ಅರುಣ ಅವರು ನೂರಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಹಾಗೂ ಹತ್ತಾರು ಸಿನಿಮಾಗಳಲ್ಲಿ ಕೂಡ ನಟನೆ ಮಾಡಿದ್ದಾರೆ.

ಇನ್ನು ಕುಟುಂಬದ ವಿಷಯಕ್ಕೆ ಬಂದರೆ ಅವರು ನ ಅವರು ತುಂಬಾ ಅದೃಷ್ಟವಂತೆ ಅಂತಲೇ ಹೇಳಬಹುದು. ಸೊಸೆ ಬಂದ ತಕ್ಷಣ ಸೊಸೆಯ ಮೇಲೆ ಅಧಿಕಾರ ಚಲಾಯಿಸುವ ಅಂತಹ ಅತ್ತೆ ಮಾವ ಇರುವ ಕಾಲದಲ್ಲಿ , ಅರುಣ ಅವರ ಮಾವ ಸೊಸೆಗೆ ನಟನೆಯಲ್ಲಿ ಆಸಕ್ತಿ ಇದೆ ಎನ್ನುವುದನ್ನು ತಿಳಿದು ತಮ್ಮ ಮನೆಯ ಸೊಸೆಗೆ ನಟನೆಯಲ್ಲಿ ಅವಕಾಶವನ್ನು ಒದಗಿಸಿ ಅರುಣ ಅವರ ಕನಸನ್ನು ನನಸಾಗಿಸಿದ್ದಾರೆ. ಅರುಣ ಅವರ ಮನೆಯ ಕೆಳಭಾಗದಲ್ಲಿ ಅರುಣ ಹಾಗೂ ಅವರ ಅತ್ತೆ ಮಾವ ಗಂಡ ಹಾಗೂ ಮಕ್ಕಳು ವಾಸವಾಗಿದ್ದರೆ, ಇನ್ನು ಅವರ ಮನೆಯ ಕೆಳಮಹಡಿಯಲ್ಲಿ ಅರುಣ ಅವರ ತಂದೆ-ತಾಯಿ ವಾಸವಾಗಿದ್ದಾರೆ. ಹೀಗಾಗಿ ಎಲ್ಲರೂ ಒಂದೇ ಸ್ಥಳದಲ್ಲಿ ವಾಸವಿರುವ ಕಾರಣ ಅರುಣ ಅವರು ಆತ್ಮಸ್ಥೈರ್ಯವನ್ನು ಹೆಚ್ಚಿಸಿಕೊಂಡು ತಮ್ಮನ್ನು ತಾವು ನಟನೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!