ಸ್ಯಾಂಡಲ್ವುಡ್ , ಬಾಲಿವುಡ್ , ಕಾಲಿವುಡ್ , ಟಾಲಿವುಡ್ ಇಲ್ಲೆಲ್ಲ ನೂರು ಕೋಟಿ ವೆಚ್ಚದ ಸಿನಿಮಾಗಳನ್ನು ನಾವು ನೋಡಿರುತ್ತೇವೆ. ಆದ್ರೂ ಒಂದು ಸಿನಿಮಾ ಎಂದರೆ ಹೆಚ್ಚು ಅಂದರೆ 40 ರಿಂದ 50 ಕೋಟಿ ರೂಪಾಯಿ ವೆಚ್ಚದಲ್ಲಿ ಖರ್ಚು ಮಾಡಿ ಮಾಡಿರುವುದನ್ನು ನೋಡಿರುತ್ತೇವೆ. ಆದರೆ ಒಂದು ದಾರವಾಹಿ ಸಲುವಾಗಿ ನೂರು ಕೋಟಿ ವೆಚ್ಚಮಾಡಿ ನಿರ್ಮಾಣ ಮಾಡುತ್ತಾರೆ ಅಂದರೆ ಅದು ಇನ್ನೆಂತಹ ಧಾರವಾಹಿ ಆಗಿರಬಹುದು!? ಈಗ ಸರಿ ಸುಮಾರು 7 ವರ್ಷಗಳ ಹಿಂದೆ ಹಿಂದಿ ಭಾಷೆಯಲ್ಲಿ ಪ್ರಸಾರವಾದ ಮಹಾಭಾರತ ಧಾರವಾಹಿ ಈಗ ಕನ್ನಡದಲ್ಲಿ ಸುವರ್ಣ ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿದೆ. ಆಗಲೇ ಈ ದಾರವಾಹಿ ನಿರ್ಮಾಣದ ಬಜೆಟ್ 100 ಕೋಟಿಗಿಂತಲೂ ಅಧಿಕವಾಗಿತ್ತು. ಏಳು ವರ್ಷಗಳ ಹಿಂದೆಯೇ ಮಹಾಭಾರತ ದಾರವಾಹಿ ನಿರ್ಮಾಣ ವೆಚ್ಚ 100 ಕೋಟಿಗಿಂತಲೂ ಅಧಿಕವಾಗಿತ್ತು ಎಂದರೆ ಈಗ 2020ರಲ್ಲಿ ಮಹಾಭಾರತ ದಾರವಾಹಿ ನಿರ್ಮಾಣ ವೆಚ್ಚ ಎಷ್ಟು ಆಗಬಹುದಿತ್ತು? ನೂರು ಕೋಟಿ ಬಜೆಟ್ ವೆಚ್ಚದಲ್ಲಿ ಧಾರಾವಾಹಿಯನ್ನು ನಿರ್ಮಾಣ ಮಾಡಿ ಹೆಚ್ಚು ಹೆಚ್ಚು ಜನರನ್ನು ತಲುಪುತ್ತೇವೆ ಎನ್ನುವ ನಂಬಿಕೆ ಮಹಾಭಾರತ ದಾರವಾಹಿಯ ನಿರ್ಮಾಪಕ ಹಾಗೂ ನಿರ್ದೇಶಕರು ಹಾಗೂ ನಿರ್ಮಾಣ ಸಂಸ್ಥೆ ಇವರ ಪರಿಶ್ರಮ ಹಾಗೂ ಧೈರ್ಯವನ್ನು ಮೆಚ್ಚಲೇಬೇಕು. ಮಹಾಭಾರತ ಧಾರವಾಹಿಯನ್ನು ದೇಶದ ವಿವಿಧ ಭಾಗಗಳಲ್ಲಿ ಇರುವಂತಹ ಅದ್ಭುತ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಧಾರಾವಾಹಿಯ ಚಿತ್ರೀಕರಣ, ಪಾತ್ರದಾರಿಗಳ ಸಂಭಾವನೆ ಹಾಗೂ ಅವರ ಮೇಕಪ್ ಹಾಗೂ ಕಾಸ್ಟಿಂಗ್ ಇವೆಲ್ಲವನ್ನು ಸೇರಿ ಮಹಾಭಾರತ ದಾರವಾಹಿ ನಿರ್ಮಾಣಕ್ಕಾಗಿ 120 ಕೋಟಿಗೂ ಅಧಿಕ ಹಣವನ್ನು ಖರ್ಚು ಮಾಡಲಾಗಿದೆ.

ಇನ್ನು ಈ ಮಹಾಭಾರತ ಧಾರವಾಹಿಯ ಸಲುವಾಗಿ ಪ್ರತಿಯೊಂದು ಪಾತ್ರವೂ ಕೂಡ ಹೇಳಿಮಾಡಿಸಿದ ಹಾಗಿದೆ ಒಂದೊಂದು ಪಾತ್ರವೂ ಕೂಡಾ ಪರಕಾಯ ಪ್ರವೇಶ ಮಾಡಿದ್ದಾರೇನು ಎನ್ನುವ ಮಟ್ಟಿಗೆ ಅಷ್ಟು ಅದ್ಭುತ ಪ್ರದರ್ಶನ ನೀಡಿದ್ದಾರೆ. ನೋಡುಗರಿಗೆ ಅಂತೂ ನಿಜವಾಗಿಯೂ ಕೃಷ್ಣ ಅರ್ಜುನ ದ್ರೌಪದಿ ದುರ್ಯೋಧನ ಭೀಷ್ಮ ಪಾತ್ರಧಾರಿಗಳನ್ನು ನೋಡಿದಾಗ ನಿಜವಾಗಿಯೂ ಇವರೆಲ್ಲ ಹೀಗೆ ಇದ್ದರೆನೊ ಎನ್ನುವಷ್ಟರ ಮಟ್ಟಿಗೆ ಜನರು ಇವರನ್ನು ಮೆಚ್ಚಿಕೊಂಡಿದ್ದಾರೆ. ಇಂತಹ ಒಂದು ಅದ್ಭುತ ದಾರವಾಹಿ ಕಲಾವಿದರಿಗೆ ಅವರ ನಟನೆಗಾಗಿ ಒಂದು ದಿನದ ಸಂಭಾವನೆ ಎಷ್ಟಿರಬಹುದು ಗೊತ್ತಾ? ನಮ್ಮ ಕರ್ನಾಟಕ ಕಿರುತರೆg ಧಾರಾವಾಹಿಗಳು ಕರ್ನಾಟಕದಲ್ಲಿ ಮಾತ್ರ ಸೀಮಿತವಾಗಿರುವುದರಿಂದ ಇಲ್ಲಿನ ಕಲಾವಿದರಿಗೆ ಸಂಭಾವನೆ ಸ್ವಲ್ಪ ಕಡಿಮೆಯೇ ಎನ್ನಬಹುದು. ಜೊತೆ ಜೊತೆಯಲಿ ಧಾರವಾಹಿ ಅನಿರುದ್ಧ್, ಗಟ್ಟಿಮೇಳ ಧಾರವಾಹಿಯ ವೇದಾಂತ್ , ಪ್ರೇಮಲೋಕ ಧಾರವಾಹಿ ವಿಜಯ್ ಸೂರ್ಯ ಸೂರ್ಯ ಇವರೆಲ್ಲ ಕನ್ನಡ ಕಿರುತೆರೆಯಲ್ಲಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟರು. ಆದರೆ , ಇವರಿಗೆಲ್ಲಾ ಹೆಚ್ಚೆಂದರೆ ದಿನಕ್ಕೆ 35000 ರೂಪಾಯಿ ಸಂಭಾವನೆ ನೀಡಲಾಗುತ್ತದೆ. ಹಿಂದಿ ಧಾರವಾಹಿಗಳಲ್ಲಿ ಯಾವುದೇ ಬೌಂಡರಿ ಇಲ್ಲದೆ ಇರುವುದರಿಂದ ಇದರ ಮಾರ್ಕೆಟಿಂಗ್ ಕೂಡ ದೊಡ್ಡದಾಗಿರುವುದರಿಂದಯಾವುದೇ ರಾಜ್ಯದಲ್ಲಿ ಕೂಡ ಹಿಂದಿ ದಾರವಾಹಿ ವೀಕ್ಷಕರು ಇರುವುದರಿಂದ ಧಾರವಾಹಿಯ ನಿರ್ಮಾಣದ ವೆಚ್ಚವೂ ಕೂಡ ಅಧಿಕವಾಗಿರುತ್ತದೆ. ಮೇಲೆ ಹೇಳಿದಂತೆ ಮಹಾಭಾರತ ಧಾರವಾಹಿ ನಿರ್ಮಾಣಕ್ಕಾಗಿ ಮೂರು ಕೋಟಿಗೂ ಅಧಿಕ ವೆಚ್ಚವನ್ನು ಮಾಡಲಾಗಿತ್ತು ಇದರಿಂದ ಬಂದ ಲಾಭವು ಅಧಿಕವಾಗಿಯೇ ಇರುವುದರಿಂದ ಕಲಾವಿದರ ಸಂಭಾವನೆಯೂ ಕೂಡ ಅಧಿಕವಾಗಿರುತ್ತದೆ. ನೂರು ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣವಾಗಿರುವ ಮೊದಲ ಧಾರವಾಹಿ ಮಹಾಭಾರತ ಆಗಿರುವುದರಿಂದ ಧಾರವಾಹಿ ನಟನೆ ಮಾಡಿದ ಕಲಾವಿದರ ಸಂಭಾವನೆ ಎಷ್ಟಿರಬಹುದು ಎನ್ನುವ ಕುತೂಹಲ ಸಹಜವಾಗಿ ಎಲ್ಲರಲ್ಲಿಯೂ ಮೂಡಿರುತ್ತದೆ ಮಹಾಭಾರತ ದಾರವಾಹಿ ಕಲಾವಿದರ ಸಂಭಾವನೆಯ ಕುರಿತಾಗಿ ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಮಹಾರಾಜ ಪಾಂಡು ಪಾತ್ರ ದಾರಿಯಲ್ಲಿ ಅಭಿನಯಿಸಿದ ಅರ್ಜುನ್ ಸಿಂಗ್ ರಾಣಾ ಅವರ ಒಂದು ದಿನದ ಸಂಭಾವನೆ 20,000 ರೂಪಾಯಿಗಳು. ಸತ್ಯವತಿ ಪಾತ್ರದಲ್ಲಿ ಅಭಿನಯಿಸಿದ ಸಯಂತನಿ ಘೋಷ್ ಅವರ ಸಂಪಾದನೆ ದಿನಕ್ಕೆ 20000 ರುಪಾಯಿ. ವಿದುರ ಪಾತ್ರದಾರಿ ನವೀನ್ ಜಿಂಗಾ ರವರ ಒಂದು ದಿನದ ಸಂಭಾವನೆ 25000 ರೂಪಾಯಿ. ಅಶ್ವಥಾಮ ಪಾತ್ರದಾರಿ ಅಂಕಿತ್ ಮೋಹನ್ ಅವರ ಒಂದು ದಿನದ ಸಂಭಾವನೆ 25000 ರೂಪಾಯಿ. ದ್ರೋಣಾಚಾರ್ಯರ ಪಾತ್ರದಲ್ಲಿ ಅಭಿನಯಿಸಿದ ನಿಸಾರ್ ಖಾನ್ ಅವರ ಒಂದು ದಿನದ ಸಂಭಾವನೆ 25000 ರೂಪಾಯಿ. ವೃಶಾಲಿ ಪಾತ್ರದಲ್ಲಿ ಅಭಿನಯಿಸಿರುವ ನಜಿಯ ಸೈಯದ್ ಅವರ ಸಂಭಾವನೆ ಒಂದು ದಿನಕ್ಕೆ 25000 ರೂಪಾಯಿ. ಇತರೆ ಪಾತ್ರದಲ್ಲಿ ಅಭಿನಯಿಸಿದ ರೈತ ಮುಖರ್ಜಿ ಅವರಿಗೂ ಕೂಡ ಒಂದು ದಿನದ ಸಂಭಾವನೆಯನ್ನು 25000 ರುಪಾಯಿ ನೀಡಲಾಗುತ್ತದೆ. ಅಂಬಾ ಹಾಗೂ ಶಿಖಂಡಿಯ ಪಾತ್ರದಲ್ಲಿ ಅಭಿನಯಿಸಿದ ಶಿಖಾ ಸಿಂಗ್ ಅವರ ಸಂಭಾವನೆ ಕೂಡ ಒಂದು ದಿನಕ್ಕೆ 25000 ರುಪಾಯಿ.

ದ್ರೌಪದಿಯ ತಂದೆ ದ್ರುಪದ ರಾಜನ ಪಾತ್ರದಲ್ಲಿ ಅಭಿನಯ ಮಾಡಿದ ಸುರೇಶ್ ಬೆರ್ರಿ ಅವರ ಒಂದು ದಿನದ ಸಂಭಾವನೆ 25000 ರುಪಾಯಿ. ದುಶ್ಯಾಸನ ಪಾತ್ರದಲ್ಲಿ ಅಭಿನಯಿಸಿದ ನಿರ್ಭಯ ವಾದ್ವಾ ಅವರ ಒಂದು ದಿನದ ಸಂಭಾವನೆ 30000 ರೂಪಾಯಿ. ಇನ್ನು ದೃಷ್ಟಿ ಇದುನ್ನ ಪಾತ್ರದಲ್ಲಿ ಅಭಿನಯಿಸಿದ್ದ ಕರಣ್ ಅವರಿಗೆ ಒಂದು ದಿನದ ಸಂಭಾವನೆ 30000 ರೂಪಾಯಿ. ಬಲರಾಮನ ಪಾತ್ರದಲ್ಲಿ ಅಭಿನಯಿಸಿದ ತರುಣ್ ಕನ್ಹ ಅವರಿಗೆ ಒಂದು ದಿನದ ಸಂಭಾವನೆ 35000 ರೂಪಾಯಿ. ಸಹದೇವನ ಪಾತ್ರದಲ್ಲಿ ಅಭಿನಯಿಸಿದ್ದ ಲಾವಣ್ಯ ಭಾರದ್ವಾಜ್ ಅವರ ಸಂಪಾದನೆ ಕೂಡ ಒಂದು ದಿನಕ್ಕೆ 35000 ರೂಪಾಯಿ. ನಕುಲನ ಪಾತ್ರದಲ್ಲಿ ಅಭಿನಯಿಸಿದ್ದ ವಿನ್ ರಾಣಾಗೆ ಕೂಡಾ ಒಂದು ದಿನದ ಸಂಪಾದನೆ 35000 ರೂಪಾಯಿ. ಅತಿ ಮುಖ್ಯವಾದ ಪಾತ್ರ ಕುಂತಿ ಪಾತ್ರದಲ್ಲಿ ಅಭಿನಯ ಮಾಡಿದ್ದ ಶಾಫಾಕ್ ನಾಜ್ ಪಡೆಯುವ ಒಂದು ದಿನದ ಸಂಭಾವನೆ ಕೂಡ 35000 ರೂಪಾಯಿ. ಸುಭದ್ರೆ ಪಾತ್ರದಲ್ಲಿ ಅಭಿನಯಿಸಿದ ವಿಭಾ ಆನಂದ್ ಅವರ ಒಂದು ದಿನದ ಸಂಪಾದನೆ ಕೂಡ 35000 ರೂಪಾಯಿ. ಅಭಿಮನ್ಯು ಪಾತ್ರಧಾರಿ ಪರಾಷ್ ಅರೋರ ಅವರ ಒಂದು ದಿನದ ಸಂಪಾದನೆ 40 ಸಾವಿರ ರೂಪಾಯಿ. ಗಾಂಧಾರಿ ಪಾತ್ರದ ರಿಯ ಅವರಿಗೆ ಒಂದು ದಿನದ ಸಂಭಾವನೆ 45 ಸಾವಿರ ರೂಪಾಯಿ.

ಯುಧಿಷ್ಠಿರನ ಪಾತ್ರದಾರಿ ರೋಹಿತ್ ಭಾರದ್ವಾಜ್ ಅವರ ಒಂದು ದಿನದ ಸಂಭಾವನೆ 50000 ರೂಪಾಯಿಗಳು. ಧೃತರಾಷ್ಟ್ರ ಪಾತ್ರಧಾರಿ ಟಾಕುರ್ ಅನುಪ್ ಸಿಂಗ್ ಅವರ ಒಂದು ದಿನದ ಸಂಭಾವನೆ 60000 ರೂಪಾಯಿ. ಭೀಮನ ಪಾತ್ರದಾರಿ ಸೌರವ್ ಗುರ್ಜರ ಅವರ ಒಂದು ದಿನದ ಸಂಭಾವನೆ 75000 ರೂಪಾಯಿ. ಇನ್ನು ದುರ್ಯೋಧನನ ಪಾತ್ರಧಾರಿ ಅರ್ಪಿತ್ ರಾಂಕಾ ಅವರ ಒಂದು ದಿನದ ಸಂಭಾವನೆ 80000 ರೂಪಾಯಿ. ಶಕುನಿ ಪಾತ್ರದಾರಿ ಪ್ರಣಿತ್ ಭಟ್ ಅವರ ಒಂದು ಸಂಭಾವನೆ 85000 ರೂಪಾಯಿ. ಭೀಷ್ಮ ಪಾತ್ರದಲ್ಲಿ ಅಭಿನಯಿಸಿದ ಅರವ್ ಚೌದರಿ ಅವರ ಒಂದು ದಿನದ ಸಂಭಾವನೆ 95000 ರೂಪಾಯಿ. ಕರ್ಣನ ಪಾತ್ರದಲ್ಲಿ ಅಭಿನಯಿಸಿದ ಅಹಂ ಶರ್ಮ ಅವರ ಒಂದು ದಿನದ ಸಂಭಾವನೆ 1,35,000 ರೂಪಾಯಿ. ದ್ರೌಪದಿ ಪಾತ್ರದಲ್ಲಿ ಅಭಿನಯಿಸಿದ ಪೂಜಾ ಶರ್ಮಾ ಅವರ ಒಂದು ದಿನದ ಸಂಭಾವನೆ 1,40,000 ರೂಪಾಯಿ. ಅರ್ಜುನನ ಪಾತ್ರದಲ್ಲಿ ಅಭಿನಯಿಸಿದ ಸಹಿರ್ ಶೇಕ್ ಅವರ ಒಂದು ದಿನದ ಸಂಭಾವನೆ 2,25,000 ರೂಪಾಯಿ. ಇನ್ನು ಶ್ರೀಕೃಷ್ಣನ ಪಾತ್ರದಲ್ಲಿ ಅಭಿನಯಿಸುತ್ತಿದ್ದ ಸೌರಭ್ ರಾಜ್ ಜೈನ್ ಇವರು ಪಡೆಯುತ್ತಿದ್ದ ಒಂದು ದಿನದ ಸಂಭಾವನೆ ಎರಡು ಲಕ್ಷದ 50 ಸಾವಿರ ರೂಪಾಯಿ.
ಇವು ಮಹಾಭಾರತ ದಾರವಾಹಿಯ ಕಲಾವಿದರು ಒಂದು ದಿನಕ್ಕೆ ಪಡೆಯುವಂತಹ ಸಂಭಾವನೆ ಇಷ್ಟಾಗಿತ್ತು.

Leave a Reply

Your email address will not be published. Required fields are marked *