ಇತ್ತೀಚಿಗೆ ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳಲ್ಲಿಯೂ ಹೆಚ್ಚಾಗಿ ಕಾಡುತ್ತಿರುವ ಸಮಸ್ಯೆ ಎಂದರೆ ಥೈರಾಯ್ಡ್ ಸಮಸ್ಯೆ. ಹಿಂದಿನ ಕಾಲದಲ್ಲಿ ಥೈರಾಯ್ಡ್ ಸಮಸ್ಯೆ ಅಂದರೆ ಏನು ಎಂಬುದು ಗೊತ್ತಿರಲಿಲ್ಲ. ಆದರೆ ಈಗ ಎಲ್ಲ ಕಡೆ ಥೈರಾಯ್ಡ್ ಸಮಸ್ಯೆ ಹೆಚ್ಚಾಗುತ್ತಿದೆ. ಹಾಗಾದರೆ ಈ ಥೈರಾಯ್ಡ್ ಸಮಸ್ಯೆಗೆ ಕಾರಣ ಏನು? ಇದಕ್ಕೆ ಪರಿಹಾರವೇನು ಎಂದು ನಾವೂ ತಿಳಿಯೋಣ.

ಹೆಣ್ಣು ಮಕ್ಕಳಲ್ಲಿ ಹೆಚ್ಚಿಗೆ ಥೈರಾಯ್ಡ್ ಸಮಸ್ಯೆ ಕಂಡುಬರುತ್ತದೆ. ಥೈರಾಯ್ಡ್ ಸಮಸ್ಯೆಗೆ ಕಾರಣ ನೋಡಿದಾಗ ಆಹಾರ, ವಿಹಾರ, ವಿಚಾರದಂತಹ ಮೂರು ಹಂತದಲ್ಲಿ ಕಾಣಬಹುದು. ಆಹಾರದಿಂದ ಥೈರಾಯ್ಡ್ ಬರುವುದಿಲ್ಲ. ವಿಹಾರ ಅಂದರೆ ಸರಿಯಾದ ವಿಧಾನದಲ್ಲಿ ಕುಳಿತುಕೊಳ್ಳದೆ ಇರುವುದರಿಂದಲೂ ಥೈರಾಯ್ಡ್ ಸಮಸ್ಯೆ ಕಾಡುವುದಿಲ್ಲ. ಆದರೆ ವಿಚಾರದಿಂದ ಬರುವ ಸಾಧ್ಯತೆ ಇದೆ. ಇದರ ವಿಷಯ ಡಾಕ್ಟರ್ ಬಳಿ ಕೇಳಿದಾಗ ಅವರ ಉತ್ತರ ದೇಹದಲ್ಲಿ ಥೈರಾಕ್ಸಿಕೋಸಿನ್ ಎನ್ನುವ ಹಾರ್ಮೋನ್ ಉತ್ಪತ್ತಿ ಆಗುತ್ತಿಲ್ಲ ಇಲ್ಲವೇ ಹೆಚ್ಚಿಗೆ ಆಗುತ್ತಿರುವುದರಿಂದ ಥೈರಾಯ್ಡ್ ಸಮಸ್ಯೆ ಕಾಣಿಸುತ್ತದೆ ಎಂದು ಹೇಳುತ್ತಾರೆ. ಹಾರ್ಮೋನ್ ವ್ಯತ್ಯಾಸವಾಗಲೂ ಕಾರಣ ಗಂಟಲಿನಲ್ಲಿ ಥೈರಾಯ್ಡ್ ಗ್ಲಾಂಟ್ ಇದೆ ಅದರಲ್ಲಿ ಆಗಿರುವ ವ್ಯತ್ಯಾಸದಿಂದ ಹಾರ್ಮೋನ್ ಏರು ಪೇರು ಆಗಿದೆ. ಈ ಥೈರಾಯ್ಡ್ ಗ್ಲಾಂಟ್ ವ್ಯತ್ಯಾಸವಾಗಲೂ ಕಾರಣ ಡಾಕ್ಟರ್ ಗೂ ತಿಳಿದಿರುವುದಿಲ್ಲ. ಥೈರಾಯ್ಡ್ ಗ್ಲಾಂಟ್ ಕೆಡಲು ಕಾರಣ ವಿಚಾರವಾಗಿರುತ್ತದೆ. ಥೈರಾಯ್ಡ್ ಸಮಸ್ಯೆಗೆ ಕಾರಣ ನಮ್ಮ ವಿಚಾರಗಳು. ಯಾವುದೇ ಭಾವನೆಗಳನ್ನು ಮುಚ್ಚಿಟ್ಟುಕೊಳ್ಳುತ್ತಾ ಇರುವುದರಿಂದ ಥೈರಾಯ್ಡ್ ಸಮಸ್ಯೆ ಪ್ರಾರಂಭವಾಗುತ್ತದೆ. ಆಸೆಗಳು ಈಡೇರದೆ ಇದ್ದಾಗ ಮನಸ್ಸಿನಲ್ಲಿ ಕಾಡುವ ಚಿಂತೆಗಳು ಥೈರಾಯ್ಡ್ ಸಮಸ್ಯೆ ಕಾಡುತ್ತದೆ. ಈ ತರಹದ ಸಮಸ್ಯೆಗಳು ಕಾಡುವುದು ಕೂಡ ಹೆಣ್ಣುಮಕ್ಕಳಲ್ಲೆ ಹೆಚ್ಚು. ಸಮಜದ ಕಟ್ಟುಪಾಡುಗಳು, ಭಯ, ಹಿಂಜರಿಕೆಗಳಿಂದ ಹೆಣ್ಣು ವಿಷಯಗಳನ್ನು ಮುಚ್ಚಿಟ್ಟುಕೊಳ್ಳುವುದು ಹೆಚ್ಚು. ಹೀಗೆ ಮುಚ್ಚಿಡುವುದರಿಂದ ಥೈರಾಯ್ಡ್ ಗ್ಲಾಂಟ್ ನಲ್ಲಿ ಹೆಚ್ಚಿನ ಹಾರ್ಮೋನ್ ತೊಂದರೆ ಕಾಣಿಸಿಕೊಳ್ಳುತ್ತದೆ.

ಮತ್ತೊಂದು ಕಾರಣ ಎಂದರೆ ಮಲಬದ್ಧತೆ. ಮಲಬದ್ಧತೆ ಇದ್ದಾಗ ಅಪಾನವಾಯು ಉರ್ಧ್ವವಾಯು ಆಗಿ ಬದಲಾಗುತ್ತದೆ. ಇದರಿಂದಲೂ ಥೈರಾಯ್ಡ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹಾಗಾದರೆ ಥೈರಾಯ್ಡ್ ಲಕ್ಷಣಗಳು ಏನು ಎಂದರೆ ಇದ್ದಕ್ಕಿದ್ದಂತೆ ತೂಕದಲ್ಲಿ ಹೆಚ್ಚಳ, ತಲೆ ಕೂದಲು ಉದುರುವಿಕೆ, ಖಿನ್ನತೆ, ಸಿಟ್ಟು, ಗಂಟಲು ದಪ್ಪ ಆಗುವುದು, ನೋವು ಬರುವುದು. ಇದಕ್ಕೆ ಮನೆ ಮದ್ದು ಏನು ಎಂದರೆ. ಆಹಾರದಲ್ಲಿ ಆದಷ್ಟು ಮಸಾಲೆ ಪದಾರ್ಥಗಳನ್ನು ಬಿಟ್ಟು ಸಾತ್ವಿಕ ಆಹಾರ ಸೇವಿಸುವುದು. ವಿಹಾರದಲ್ಲಿ ಆದಷ್ಟು ನಿರಾಳವಾದ ಜಾಗದಲ್ಲಿ, ಪ್ರಶಾಂತ ಜಾಗದಲ್ಲಿ ಇರುವುದು ಉತ್ತಮ. ಮನೆ, ಕೆಲಸದ ಜಾಗ ಯಾವುದೇ ಇರಲಿ ಉಸಿರುಗಟ್ಟುವ ವಾತಾವರಣದಿಂದ ದೂರವಿರುವುದು ಉತ್ತಮ. ಮುಚ್ಚಿಡುವ ಗುಣ ಬಿಟ್ಟು ಬಿಡಬೇಕು. ವಿಚಾರದಲ್ಲಿ ಯೋಚನೆಗಳ ರೀತಿಯನ್ನು ಬದಲಾಯಿಸಿಕೊಳ್ಳಬೇಕು. ಭಯದ ಬದಲು, ಧೈರ್ಯದ ಭಾವನೆಗಳನ್ನು ಬೆಳೆಸಿಕೊಳ್ಳಬೇಕು. ಸಮುದ್ರದ ಉಪ್ಪನ್ನು ಸೇವಿಸುವ ಬದಲಾಗಿ ಸೈಂದವ ಲವಣ ಹೆಚ್ಚು ಉಪಯೋಗ ಥೈರಾಯ್ಡ್ ಸಮಸ್ಯೆಗೆ ಉತ್ತಮ ಉಪಶಮನ ಸಿಗುತ್ತದೆ. ಮಲಬದ್ಧತೆಯ ಕಡಿಮೆ ಆದಾಗ ಥೈರಾಯ್ಡ್ ಸಮಸ್ಯೆ ಕೂಡ ಕಡಿಮೆ ಆಗುತ್ತದೆ. ಜೀರ್ಣಕ್ರಿಯೆ ಸರಿಯಾಗಿ ನಡೆದಾಗ ಮಲಬದ್ಧತೆಯ ನಿವಾರಣೆ ಆಗುತ್ತದೆ. ಬೀನ್ಸ್ ಹಾಗೂ ಜವಳೆಕಾಯಿಯನ್ನು ರಾತ್ರಿ ವೇಳೆ ಹಸಿಯಾಗಿ ತಿನ್ನುವುದರಿಂದ ಮಲಬದ್ಧತೆ ಕಡಿಮೆ ಆಗುತ್ತದೆ. ನೊಇರು ಕುಡಿಯುವುದರಿಂದ ಮಲಬದ್ಧತೆ ಕಡಿಮೆ ಆಗುತ್ತದೆ. ಮಲಬದ್ಧತೆಯ ಜೊತೆಗೆ ಥೈರಾಯ್ಡ್ ಸಮಸ್ಯೆಯೂ ಕಡಿಮೆ ಆಗುತ್ತದೆ.

ಥೈರಾಯ್ಡ್ ಸಮಸ್ಯೆ ಲಕ್ಷಣಗಳು ಕಂಡು ಬಂದಾಗ ಅಹಾರ ಚಿಕಿತ್ಸೆ, ವಿಹಾರ ಚಿಕಿತ್ಸೆ ಹಾಗೂ ವಿಚಾರದ ಚಿಕಿತ್ಸೆ ಈ ಮೂರನ್ನು ಮಾಡಿ ನೋಡಿ. ಒಂದು ವೇಳೆ ಇದರಿಮನದ ಥೈರಾಯ್ಡ್ ಸಮಸ್ಯೆಗಳು ಪರಿಹಾರವಾಗದೆ ಇದ್ದಲ್ಲಿ, ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಇಲ್ಲವೇ ಕೆಳಗೆ ನೀಡಿದ ದೂರವಾಣಿ ನಂಬರ್ ಗೆ ಸಂಪರ್ಕಿಸಿ.

Leave a Reply

Your email address will not be published. Required fields are marked *