50 ರಿಂದ ನೂರು ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ ಈ ಗಿಡಕ್ಕಿದೆ

0 5

ಭೂಮಿಯಲ್ಲಿ ಹಲವಾರು ಸಸ್ಯಜಾತಿಗಳಿವೆ. ಅವುಗಳು ಪ್ರತಿಯೊಂದು ಅದರದೇ ಆದ ಔಷಧೀಯ ಗುಣಗಳನ್ನು ಹೊಂದಿವೆ. ಅವುಗಳು ನಮ್ಮ ಮನೆಯಲ್ಲೇ ಕಣ್ಣೆದುರೇ ಇದ್ದರೂ ಅದರ ಔಷಧೀಯ ಗುಣ ನಮಗೆ ತಿಳಿದಿರುವುದಿಲ್ಲ. ನಾವು ಇಲ್ಲಿ ಕೆಲವು ಗಿಡಗಳ ಔಷಧೀಯ ಉಪಯೋಗಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ನೆಲನಲ್ಲಿ ಗಿಡ:-ಯಾವುದೇ ರೀತಿಯ ಕಿಡ್ನಿಯ ಸಮಸ್ಯೆಗಳಿದ್ದರೆ ನೆಲನೆಲ್ಲಿಯ ಪೂರ್ಣಗಿಡ ಅಥವಾ ಬೇರನ್ನು ತೆಗೆದುಕೊಂಡು ಅದನ್ನು ಮಿಕ್ಸಿ ಮಾಡಿ ಅದರ ನೀರನ್ನು 7 ರಿಂದ 8ದಿನ ಕುಡಿದರೆ ಯಾವುದೇ ರೀತಿಯ ಕಿಡ್ನಿಯ ಸಮಸ್ಯೆಗಳು ಇದ್ದರೂ ಕಡಿಮೆಯಾಗುತ್ತದೆ. ಇದು ಮೂತ್ರನಾಳ, ಮೂತ್ರಕೋಶದ ಸಮಸ್ಯೆಯನ್ನು ಸುಲಭವಾಗಿ ಹೋಗಲಾಡಿಸಲು ಸಹಾಯಕ.

ತುಂಬೆಹೂ:-ನಾವು ಯಾವುದನ್ನು ಪೂಜೆಗೆ ಹಾಕುತ್ತೀವೋ ಅಂತಹ ಹೂವು ಮತ್ತು ಎಲೆಗಳು ಔಷಧೀಯ ಗುಣಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಪಂಚೇಂದ್ರಿಯಗಳ 50 ರಿಂದ 100 ಖಾಯಿಲೆಗಳನ್ನು ಗುಣ ಮಾಡುವ ಶಕ್ತಿ ಇದಕ್ಕಿದೆ. ಇದರ ಎಲೆಯನ್ನು ತಿನ್ನುವುದರಿಂದ ಸಹನೆಯ ಸಾಮರ್ಥ್ಯ ಜಾಸ್ತಿಯಾಗುತ್ತದೆ.

ಮಂಚಿಪತ್ರೆ:-ಇದರ ಎಲೆಯು ಸೇವಂತಿಗೆಯ ಪರಿಮಳ ಹೊಂದಿರುತ್ತದೆ. ಇದರ ಎಲೆಯನ್ನು ಕೊಬ್ಬರಿ ಎಣ್ಣೆಯಲ್ಲಿ ಹಾಕಿ ತಲೆಗೆ ಹಚ್ಚುವುದರಿಂದ ಕೂದಲು ಉದುರುವುದು ಕಡಿಮೆ ಆಗುತ್ತದೆ. ತಲೆಯಲ್ಲಿ ಹೊಟ್ಟು ಇರುವುದಿಲ್ಲ.

ಶತಾವರಿ:-ಇದು 99.9% ಮಹಿಳೆಯರಿಗೆ ಬಹಳ ಒಳ್ಳೆಯದು. ಇದಕ್ಕೆ ಬೇರು ಇರುತ್ತದೆ. ಇದನ್ನು ‘ಹಲವು ಮಕ್ಕಳ ತಾಯಿಬೇರು’ ಎಂದು ಕರೆಯಲಾಗುತ್ತದೆ. ಇದರ ಬೇರನ್ನು ತಿನ್ನುವುದರಿಂದ ಹಸಿಶೇಂಗಾ ತಿಂದ ಹಾಗೆ ಆಗುತ್ತದೆ. ದೇಹದಲ್ಲಿ ಒಂದು ರೀತಿಯ ಚೈತನ್ಯ ಮೂಡುತ್ತದೆ.

ಹುಲಿಕಡ್ಡಿ:-ಇದು ಯಾವುದೇ ರೀತಿಯ ಕಣ್ಣಿನಬೇನೆ ಇದ್ದರೆ ಕಡಿಮೆ ಆಗುತ್ತದೆ. ಇದರ ಕಡ್ಡಿಯನ್ನು ತೆಗೆದು ಬೆಳಿಗ್ಗೆ 6 ಗಂಟೆಯ ಒಳಗೆ ಒಂದು ನೀರಿನಬಾಟಲಿಗೆ ಹಾಕಿ 200 ಬಾರಿ ತಿರಿಸಿದಾಗ ಒಂದು ರೀತಿಯ ಹಾಲು ಬರುತ್ತದೆ. ಇದನ್ನು15 ರಿಂದ 20ದಿನ ಕಣ್ಣಿಗೆ ಹಾಕಿಕೊಂಡರೆ ಕಣ್ಣಿಗೆ ಹೂವು ಕುಳಿತರೂ ಹೋಗುತ್ತದೆ.

ಗೋಳಿಸೊಪ್ಪು:-ಇದು ತಿನ್ನಲು ಸ್ವಲ್ಪ ಹುಳಿ ಇರುತ್ತದೆ. ಇದರ ಪಲ್ಯ ತಿಂದು 2 ಗಂಟೆಗಳ ಕಾಲ ಯಾವುದೇ ಸಿಹಿ ಪದಾರ್ಥ ತಿನ್ನಬಾರದು.

Leave A Reply

Your email address will not be published.