ಬೆಂಡೆಕಾಯಿ ಸೇವನೆ ಯಾವೆಲ್ಲ ಸಮಸ್ಯೆಗೆ ಒಳ್ಳೇದು ಗೊತ್ತೇ?

0 2

ಎಲ್ಲಾ ತರಕಾರಿಗಳಲ್ಲಿ ಬೆಂಡೆಕಾಯಿ ಕೂಡ ಒಂದು. ಇದು ನೋಡಲು ಬಹಳ ಸುಂದರವಾಗಿ ಕಾಣುತ್ತದೆ. ಇದನ್ನು ಎಲ್ಲರೂ ತಿನ್ನುವುದಿಲ್ಲ. ಏಕೆಂದರೆ ಇದು ಒಳಗೆ ಲೋಳೆ ಇರುತ್ತದೆ ಎಂದು. ಆದರೆ ಇದು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದರ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಯಾರನ್ನೇ ನಾವು ಹೆಚ್ಚು ಹತ್ತಿರವಾಗುವ ಮೊದಲು ಅವರು ಹೇಗೆ, ಸ್ವಭಾವ ಹೇಗೆ, ಗುಣ ಹೇಗೆ ಎಂಬುದನ್ನು ತಿಳಿಯುತ್ತೇವೆ. ಹಾಗೆಯೇ ತಿನ್ನುವಾಗ ಸಹ ಆಹಾರದ ಅಂದ ಚಂದಗಳನ್ನು ನೋಡಿ ತಿನ್ನಬಾರದು. ಅದರ ಗುಣಧರ್ಮಗಳು, ರುಚಿ, ಸ್ವಭಾವ, ರಸ, ದೋಷ, ಸಿದ್ಧಾಂತಗಳನ್ನು ತಿಳಿದು ಸೇವಿಸಬೇಕು. ಬೆಂಡೆಕಾಯಿಯು ಕಫಕಾರಕ. ಅಂದರೆ ದೇಹದಲ್ಲಿ ಕಫವನ್ನು ಜಾಸ್ತಿ ಮಾಡುತ್ತದೆ. ಆದ್ದರಿಂದ ಅತಿಯಾಗಿ ತಿನ್ನಬಾರದು. ಅಸ್ತಮಾ, ನೆಗಡಿ, ಕೆಮ್ಮು ಇರುವವರು ಇದನ್ನು ಸ್ವಲ್ಪ ಪ್ರಮಾಣದಲ್ಲಿ ಸೇವಿಸಬೇಕು.

ಹಾಗೆಯೇ ಇದು ದೇಹದ ತೂಕವನ್ನು ಜಾಸ್ತಿ ಮಾಡುತ್ತದೆ. ತೆಳ್ಳಗಿರುವವರು ಬೆಂಡೆಕಾಯಿಯನ್ನು ಹೇರಳವಾಗಿ ತಿನ್ನಬಹುದು. ಇದರಿಂದ ದೇಹದ ತೂಕ ಹೆಚ್ಚಾಗುತ್ತದೆ. ಹಾಗೆಯೇ ಮಲಬದ್ಧತೆ ಇರುವವರು ಬೆಂಡೆಕಾಯಿ ತಿನ್ನಬೇಕು. ಹಸಿ ಹಸಿಯಾದ ಬೆಂಡೆಕಾಯಿ ತಿನ್ನುವುದರಿಂದ ಮಲಬದ್ಧತೆ ಕಡಿಮೆಯಾಗುತ್ತದೆ. ರಾತ್ರಿ ಹಸಿಯಾದ ಬೆಂಡೆಕಾಯಿ ತಿನ್ನಬೇಕು. ಮನುಷ್ಯನ ಕಾಲುಗಂಟಿನಲ್ಲಿ ಒಂದು ರೀತಿಯ ಎಣ್ಣೆ ಇರುತ್ತದೆ. ಆ ಎಣ್ಣೆಯನ್ನು ಸಮ ಪ್ರಮಾಣದಲ್ಲಿ ಇಡಲು ಬೆಂಡೆಕಾಯಿಯನ್ನು ತಿನ್ನಬೇಕು. ಹಾಗಾಗಿ ಎಲ್ಲಾ ತರಕಾರಿಗಳನ್ನು ಒಂದು ಹದದಲ್ಲಿ ತಿಂದು ಆರೋಗ್ಯವನ್ನು ಹೆಚ್ಚಿಸಿಕೊಳ್ಳಬೇಕು.

Leave A Reply

Your email address will not be published.