ಅಶ್ವಗಂಧ ಗಿಡದಿಂದ ಪುರುಷರಿಗೆ ಏನ್ ಲಾಭವಿದೆ ಗೊತ್ತೇ?

0 25

ಭೂಮಿಯ ಮೇಲೆ ಹಲವಾರು ರೀತಿಯ ಸಸ್ಯಜಾತಿಗಳಿವೆ.ಅವುಗಳಲ್ಲಿ ಎಷ್ಟೋ ಸಸ್ಯಗಳು ಔಷಧೀಯ ಗುಣಗಳನ್ನು ಹೊಂದಿರುತ್ತವೆ.ಅದರಲ್ಲಿ ಅಶ್ವಗಂಧ ಕೂಡ ಒಂದು.ನಾವು ಇಲ್ಲಿ ಅಶ್ವಗಂಧದ ಪ್ರಯೋಜನದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಅಶ್ವಗಂಧ ಇದು ಹೆಸರೇ ಹೇಳುವಂತೆ ಕುದುರೆಯ ಶಕ್ತಿಯನ್ನು ನೀಡುವ ಶಕ್ತಿ ಇದರಲ್ಲಿದೆ. ಇದು ಭಾರತೀಯ ಗಿಡಮೂಲಿಕೆ ಎನ್ನುವುದು ಒಂದು ಹೆಮ್ಮೆಯ ವಿಷಯವಾಗಿದೆ. ಏಕೆಂದರೆ ಅತಿ ಹೆಚ್ಚು ರಫ್ತಾಗುವ ಔಷಧಿಗಳಲ್ಲಿ ಇದು ಅಗ್ರಗಣ್ಯ ಸ್ಥಾನವನ್ನು ಪಡೆದಿದೆ. ಇದನ್ನು ಬಳಸಿ ಯಾವುದೇ ರೀತಿಯ ಕೆಟ್ಟ ಪರಿಣಾಮ ಇಲ್ಲದ ಅತೀ ಒಳ್ಳೆಯ ನಿದ್ರೆಯ ಮಾತ್ರೆಯನ್ನು ಮಾಡಲಾಗುತ್ತದೆ. ವಿದೇಶದಲ್ಲಿ ಅಶ್ವಗಂಧದ ಬಗ್ಗೆ ಅತೀ ಹೆಚ್ಚು ಸಂಶೋಧನೆ ಮಾಡಲಾಗಿದೆ. ನಮ್ಮ ವಿಜ್ಞಾನಿಗಳು ಅವರಿಗಿಂತ ಬುದ್ಧಿವಂತರು. ಅವರೇ ನಮ್ಮ ಋಷಿಮುನಿಗಳು. ಇವರು ಬರೆದಿದ್ದನ್ನು ವಿದೇಶಿಯರು ರುಜುವಾತು ಮಾಡಿದ್ದಾರೆ.

ಈ ಅಶ್ವಗಂಧದ ಒಂದು ಚಮಚ ಪುಡಿಯನ್ನು ರಾತ್ರಿ ಹಾಲಿನಲ್ಲಿ ತೆಗೆದುಕೊಳ್ಳುವುದರಿಂದ ರಾತ್ರಿ ಚೆನ್ನಾಗಿ ನಿದ್ರೆಬರುತ್ತದೆ. ಲೈಂ ಗಿಕ ನಿರಾಸಕ್ತಿ ಕೂಡ ಕಡಿಮೆಯಾಗಲು ಸಹಾಯಕ ಆಗುತ್ತದೆ. ಪುರುಷರಲ್ಲಿ ಮಕ್ಕಳಾಗದ ಸಮಸ್ಯೆಗೆ ಬಹಳ ಉಪಯುಕ್ತ ಆಗಿದೆ. ಇದು ಮೆದುಳಿಗೆ ಬಹಳ ಒಳ್ಳೆಯದು. ಮೆದುಳಿನ ಕಾರ್ಯಗಳು ಸುಲಭವಾಗಿ ನಡೆಯುತ್ತವೆ. ಡಯಾಬಿಟಿಸ್ ನ್ನು ಸಹಜಸ್ಥಿತಿಯಲ್ಲಿ ಇಡುತ್ತದೆ. ಇದು ಸಕ್ಕರೆ ಖಾಯಿಲೆಯ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಕ್ಯಾನ್ಸರ್ ಇದ್ದರೆ ಅದನ್ನು ಕಡಿಮೆ ಮಾಡುವ ಶಕ್ತಿ ಇದಕ್ಕಿದೆ. ಒತ್ತಡದ ಹಾರ್ಮೋನುಗಳನ್ನು ಕಡಿಮೆ ಮಾಡುತ್ತದೆ. ಕೆಲವರು ಒತ್ತಡದಲ್ಲಿ ಇರುವುದೇ ಜಾಸ್ತಿ. ಇದನ್ನೆಲ್ಲಾ ಇದು ದೂರಗೊಳಿಸುತ್ತದೆ.

ಡಿಪ್ರೆಷನ್ ನಿಂದ ಹೊರ ಬಂದು ಕುದುರೆಯ ರೀತಿ ಶಕ್ತಿ ಬರಲು ಇದು ಸಹಾಯ ಮಾಡುತ್ತದೆ. ದಿನಕ್ಕೆ 600ಮಿಲಿಗ್ರಾಮ್ ಅಶ್ವಗಂಧ ಕೊಟ್ಟಾಗ 79% ಡಿಪ್ರೆಷನ್ ನ್ನು ಇದು ಕಡಿಮೆ ಮಾಡಿದೆ ಎಂದು ಸಂಶೋಧಕರು ಹೇಳಿದ್ದಾರೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆದ್ದರಿಂದ ಇದನ್ನು ಬಳಸಿ ಇದರ ಪ್ರಯೋಜನ ಪಡೆದುಕೊಳ್ಳಿ.

ನಾವು ಪ್ರಕಟ ಮಾಡುವ ಯಾವುದೇ ಲೇಖನದಲ್ಲಿನ ಮಾಹಿತಿ ನಮ್ಮ ಸ್ವಂತದ್ದಾಗಿರುವುದಿಲ್ಲ. ಸಂಗ್ರಹಿತ ಮಾಹಿತಿಯನ್ನು ನಿಮ್ಮ ಮುಂದೆ ಇಡುತ್ತೇವೆ‌. ಇವುಗಳಿಂದ ಮೂಡುವ ಯಾವುದೇ ರೀತಿಯ ಭಿನ್ನಾಭಿಪ್ರಾಯ, ಗೊಂದಲಗಳಿಗೆ ನಾವು ಹೊಣೆಗಾರರಾಗಿರುವುದಿಲ್ಲ.

Leave A Reply

Your email address will not be published.