ತಮ್ಮದೇ ಸ್ವಂತ ಪ್ರೊಡಕ್ಷನ್ ನ ಮೂಲಕ ಮಜಾ ಟಾಕೀಸ್ ಕಾರ್ಯಕ್ರಮವನ್ನು ಆರಂಭ ಮಾಡಿ ಎಲ್ಲರನ್ನು ನಗುವಿನಲ್ಲಿ ತೇಲಾಡಿಸುತ್ತಿದ್ದಾರೆ ಸೃಜನ್ ಲೋಕೇಶ್ ಅವರು. ಮಜಾ ಟಾಕೀಸ್ ಈಗಾಗಲೇ ಎರಡು ಸೀಸನನ್ನ ಮುಗಿಸಿ ಮೂರನೇ ಸೀಸನ್ ಆರಂಭವಾಗಿದೆ. ತಮ್ಮ ಮಾತಿನ ಮೂಲಕವೇ ಪ್ರೇಕ್ಷಕರನ್ನು ನಗುವಿನ ಕಡಲಲ್ಲಿ ತೇಲಿಸುತ್ತಾರೆ. ಸೃಜನ್ ಅವರಿಗೆ ಈಗಾಗಲೇ ಮದುವೆಯಾಗಿದ್ದು ಇಬ್ಬರು ಗಂಡು ಮಕ್ಕಳಿದ್ದಾರೆ. ಸೃಜನ್ ಲೋಕೇಶ್ ಅವರ ಎರಡನೇ ಮಗ ಹೇಗಿದ್ದಾನೆ ಎನ್ನುವುದರ ಕುರಿತಾಗಿ ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಸೃಜನ್ ಲೋಕೇಶ್ ಅವರಿಗೆ ಇಬ್ಬರು ಮಕ್ಕಳಿದ್ದು ಮೊದಲ ಮಗ ಸ್ವಲ್ಪ ದೊಡ್ಡವನಾಗಿದ್ದಾನೆ. ಎರಡನೇ ಮಗನಿಗೆ ಒಂದು ವರ್ಷ ತುಂಬಿದೆ. ಎರಡನೇ ಮಗನಿಗೆ ಒಂದು ವರ್ಷ ತುಂಬಿದ ಸಂದರ್ಭದಲ್ಲಿ, ಸಂತೋಷದ ಸಮಯದಲ್ಲಿ ಹುಟ್ಟುಹಬ್ಬದ ಆಚರಣೆಯನ್ನು ಮಾಡಬೇಕು ಎಂದುಕೊಂಡಿದ್ದ ಸೃಜನ್ ಲೋಕೇಶ್ ಅವರು ಈಗ ಕೋರೋನ ಕಾಲ ಆಗಿರುವುದರಿಂದ ಎಲ್ಲವೂ ಬಂದ್ ಆಗಿರುವುದರಿಂದ ಸೃಜನ್ ಲೋಕೇಶ್ ಅವರುಹೊರಗಡೆ ಬೇರೆ ಎಲ್ಲಿಯೂ ಹೋಗು ಹುಟ್ಟುಹಬ್ಬ ಆಚರಣೆ ಮಾಡಿದೆ ಮನೆಯಲ್ಲಿ ಸಿಂಪಲ್ಲಾಗಿ ಹುಟ್ಟುಹಬ್ಬವನ್ನು ಆಚರಣೆ ಮಾಡಿದ್ದಾರೆ. ತಮ್ಮ ಎರಡನೇ ಮಗನಿಗೆ ಒಂದು ವರ್ಷದ ತುಂಬಿದ ಸಂದರ್ಭದಲ್ಲಿ ಮನೆಯಲ್ಲಿ ಸಿಹಿ ಮಾಡಿ ಹುಟ್ಟುಹಬ್ಬವನ್ನು ಆಚರಣೆ ಮಾಡಿದರು.

ಸೃಜನ್ ಲೋಕೇಶ್ ಅವರು ಮೂವತ್ತಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ ಹಾಗೂ ಹಲವಾರು ರಿಯಾಲಿಟಿ ಶೋಗಳನ್ನು ಕೂಡ ನಡೆಸಿಕೊಟ್ಟಿದ್ದಾರೆ. ಜೀ ಕನ್ನಡದಲ್ಲಿ ಹಿಂದೆ ಪ್ರಸಾರವಾಗುತ್ತಿದ್ದ ಛೋಟಾ ಚಾಂಪಿಯನ್ ಎಂಬ ಮಕ್ಕಳ ಕಾರ್ಯಕ್ರಮ ಇವರಿಗೆ ತುಂಬಾ ಹೆಸರನ್ನು ತಂದುಕೊಟ್ಟಿತು. ನಂತರ 2015 ರಿಂದ 2019 ರವರೆಗೆ ಮಜಾ ಟಾಕೀಸ್ ಎಂಬ ಕಾಮಿಡಿ ಕಾರ್ಯಕ್ರಮವನ್ನು ಸಹ ನಡೆಸಿಕೊಟ್ಟಿದ್ದರು. ಸೃಜನ್ ಲೋಕೇಶ್ ಅವರಿಗೆ ಈಗ 40 ವರ್ಷ ವಯಸ್ಸು ಇವರ ಪತ್ನಿ ಹೆಸರು ಗ್ರೀಷ್ಮಾ. ಸೃಜನ್ ಲೋಕೇಶ್ ಅವರು ಕಾಮಿಡಿ ಟಾಕೀಸ್ ಎಂಬ ಒಂದು ರಿಯಾಲಿಟಿ ಶೋದಲ್ಲಿ ಜಡ್ಜ್ ಆಗಿ ಕೂಡ ಭಾಗವಹಿಸಿದ್ದರು. 2002ರಲ್ಲಿ ಸೃಜನ್ ಲೋಕೇಶ್ ಅವರು ನೀಲಮೇಘಶ್ಯಾಮ ಎಂಬ ಕನ್ನಡ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಚಿತ್ರದಲ್ಲಿ ರಾಧಿಕಾ ಕುಮಾರಸ್ವಾಮಿ ಅವರ ಜೊತೆ ನಟನೆ ಮಾಡಿದ್ದರು . ಇದಾದ ನಂತರ ಪೋರ್ಕಿ ಚಿಂಗಾರಿ ಸ್ನೇಹಿತರ ಮುಂತಾದ ಚಿತ್ರಗಳಲ್ಲಿ ಕೂಡ ಅಭಿನಯ ಮಾಡಿದ್ದಾರೆ. ದರ್ಶನ್ ಹಾಗೂ ಸೃಜನ್ ಲೋಕೇಶ್ ಆತ್ಮೀಯ ಗೆಳೆಯರು. ಸಮಯ ಸಿಕ್ಕಾಗಲೆಲ್ಲಾ ಮೈಸೂರಿನ ಫಾರ್ಮ್ ಹೌಸ್ ನಲ್ಲಿ ಸ್ನೇಹಿತರ ಜೊತೆ ಸಮಯ ಕಳೆಯುತ್ತಾರೆ. ಸೃಜನ್ ಲೋಕೇಶ್ ಅವರು ಬೇಸ್ಟನ್ ಕಾರ್ ಅವಾರ್ಡ್ ಕೂಡ ಪಡೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *