ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ಕಲೆ ಇದ್ದೆ ಇರುತ್ತದೆ. ಅದನ್ನ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದುಬಿಟ್ಟರೆ ಸಾಕು ಅದೃಷ್ಟ ಎನ್ನುವುದು ನಮ್ಮ ಪರವಾಗಿದ್ದರೆ ಅವಕಾಶಗಳು ತಾನಾಗಿಯೇ ನಮ್ಮನ್ನು ಹುಡುಕಿಕೊಂಡು ಬರುತ್ತವೆ. ಈಗ ಅದೇ ಸಾಲಿಗೆ ಸೇರಿರುವುದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಇತ್ತೀಚಿಗೆ ಆರಂಭವಾದ ಗೀತ ಧಾರವಾಹಿಯ ನಾಯಕ ನಟಿಯ ಜೀವನದಲ್ಲೂ ಹಾಗೇ ಆಗಿದೆ. ಗಗನ ಸಖಿ ಆಗಬೇಕು ಎನ್ನುವ ಕನಸು ಹೊತ್ತಿದ್ದ ನಟಿ ಭವ್ಯಾ ಗೌಡ ಅದಕ್ಕಾಗಿ ತಯಾರಿಯನ್ನು ಕೂಡಾ ನಡೆಸುತ್ತಾ ಇದ್ದರು ಎನ್ನಲಾಗುತ್ತದೆ. ಆದರೆ ಭವ್ಯ ಅವರ ತಂದೆ ತಾಯಿ ಇಬ್ಬರಿಗೂ ತಮ್ಮ ಮಗಳು ನಟಿ ಆಗಬೇಕು ಸಿನಿಮಾ ಧಾರವಾಹಿಗಳಲ್ಲಿ ನಟಿಸಬೇಕು ಎನ್ನುವ ಮಹದಾಸೆ ಇದ್ದಿತ್ತು. ಅದರಂತೆ ಅವರ ಆಸೆ ಈಡೇರಿಸಲು ಈಗ ಇವರಿಗೆ ಬಣ್ಣದ ಬದುಕು ಕೈ ಹಿಡಿದಿದೆ. ಭವ್ಯ ಸೀರ್ಯಲ್ ನಲ್ಲಿ ಕಾಣಿಸಿಕೊಳ್ಳುವ ಮೊದಲು ಟಿಕ್ ಟಾಕ್ ನಲ್ಲಿ ಬಹಳಷ್ಟು ಜನಪ್ರಿಯತೆ ಹೊಂದಿದ್ದರು. ಆದರೆ ತಾನು ಟಿಕ್ ಟಾಕ್ ನಿಂದ ಬಣ್ಣದ ಜಗತ್ತಿಗೆ ಬರಲಿಲ್ಲ ಅದು ಬರೀ ಟೈಮ್ ಪಾಸ್ ಅಷ್ಟೇ ಆಗಿತ್ತು ಎಂದು ಹೇಳುತ್ತಾರೆ ನಟಿ ಭವ್ಯಾ ಗೌಡ ಅವರು.

ಹಲವಾರು ಜನರು ಸಾಮಾಜಿಕ ಜಾಲ ತಾಣಗಳ ಮೂಲಕ ಬಣ್ಣದ ಜಗತ್ತಿಗೆ ಕಾಲಿಟ್ಟರೆ ನಟಿ ಭವ್ಯ ಗೌಡ ಆ ರೀತಿ ಮಾಡಿದೆ ತಾವೇ ಸ್ವತಹ ಆಡಿಷನ್ ನೀಡುವ ಮೂಲಕ ಗೀತಾ ಎನ್ನುವ ಸೀರಿಯಲ್ ನಲ್ಲಿ ಮುಖ್ಯ ಪಾತ್ರವನ್ನು ಪಡೆದುಕೊಂಡರು. ಗೀತ ದಾರವಾಹಿ ಪ್ರಮುಖ ಪಾತ್ರದಲ್ಲಿ ಮಿಂಚುತ್ತಿರುವ ಭವ್ಯ ಗೌಡ ಅವರದ್ದು ಸ್ವಾಭಿಮಾನ ಹೊಂದಿರುವ ಪಾತ್ರವಾಗಿದೆ. ಇವರಿಗೆ ಸಾಕಷ್ಟು ಅಭಿಮಾನಿಗಳು ಕೂಡಾ ಹುಟ್ಟಿಕೊಂಡಿದ್ದು , ಗೀತಾ ಧಾರಾವಾಹಿ ಶುರುವಿನಲ್ಲೆ ಜನರಿಂದ ಮೆಚ್ಚಿಕೊಂಡು ಉತ್ತಮ ರೀತಿಯಲ್ಲಿ ಮುಂದುವರೆದಿದೆ. ಹಾಗೆ ಇವರ ಅಭಿಮಾನಿಗಳಿಗೆ ಕೂಡಾ ತಮ್ಮ ನೆಚ್ಚಿನ ನಟಿಯ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತದೆ. ನಟಿ ಭವ್ಯಾ ಗೌಡ ಅವರಿಗೆ ಒಬ್ಬಳು ತಂಗಿ ಕೂಡಾ ಇದ್ದು , ಇವರ ತಂಗಿಯ ಹೆಸರು ದಿವ್ಯ ಗೌಡ. ದಿವ್ಯಾ ಕೂಡಾ ಯಾವ ನಟಿಗೂ ಕಡಿಮೆ ಇಲ್ಲ ಅಷ್ಟು ಮುದ್ದಾಗಿ ಇದ್ದಾರೆ. ತಂಗಿಯನ್ನು ತುಂಬಾ ಇಷ್ಟ ಪಡುವ ನಟಿ ಭವ್ಯಾ ಗೌಡ ತಂಗಿಯ ಜೊತೆಗೆ ಕಳೆದ ಕ್ಷಣಗಳನ್ನು ಸಾಮಾಜಿಕ ಜಾಲತಾಗಳಲ್ಲಿ ಹಂಚಿಕೊಳ್ಳುತ್ತಲೇ ಇದ್ದಾರೆ.

Leave a Reply

Your email address will not be published. Required fields are marked *