ನಮ್ಮ ಜೀವನದಲ್ಲಿ ಒಳ್ಳೆಯ ಕನಸುಗಳನ್ನು ಕಂಡು ಉತ್ತಮ ಜೀವನ ನಡೆಸಬೇಕು ಎಂದು ನಾವು ಬಯಸುತ್ತೇವೆ. ಹಾಗೆ ಜೀವನದಲ್ಲಿ ಒಂದು ಗುರಿಯನ್ನು ಕೂಡಾ ಹೊಂದಿದ್ದು ಆ ಗುರಿಯನ್ನು ತಲುಪಲು ಶ್ರಮವನ್ನು ಕೂಡಾ ಪಡುತ್ತೇವೆ. ಆದರೆ ನಾವು ನಮ್ಮ ಜೀವನದಲ್ಲಿ ಬಯಸಿದ್ದು ಯಾವುದೂ ನಡೆಯುವುದಿಲ್ಲ ಹಾಗೆಯೇ ನಾವು ಜೀವನದಲ್ಲಿ ಬಯಸಿದ್ದೆ ಒಂದು, ಆಗುವುದೇ ಇನ್ನೊಂದು ಎನ್ನುವುದಕ್ಕೆ ಈ ನಟಿ ಉತ್ತಮ ಉದಾಹರಣೆ ಆಗಿದ್ದಾರೆ. ಅಷ್ಟಕ್ಕೂ ಯಾರು ಈ ನಟಿ ಅವರ ಜೀವನದಲ್ಲಿ ನಡೆದಿರುವುದು ಆದರೂ ಎನು ಎನ್ನುವುದನ್ನು ನಾವಿಲ್ಲಿ ನೋಡೋಣ.

ಈ ನಟಿ ತಮ್ಮ ಜೀವನದಲ್ಲಿ ವೈದ್ಯೆ ಆಗಬೇಕು ಎನ್ನುವ ಕನಸು ಕಂಡಿದ್ದರು ಮೀರಾ ಜಾಸ್ಮಿನ್. ಇವರು ತಮ್ಮ ಕನಸನ್ನು ಬಿಟ್ಟು ಅಚಾನಕ್ ಆಗಿ ಸಿನಿಮಾ ರಂಗಕ್ಕೆ ಬಂದರು. ಮೀರಾ ಜಾಸ್ಮಿನ್ 2001 ರಾಲ್ಲಿ ಸೂತ್ರಧಾರ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ. ಇಲ್ಲಿಂದ ಈ ನಟಿ ಹಿಂದಿರುಗಿ ನೋಡಿದ ಇತಿಹಾಸವೇ ಇಲ್ಲಾ. 2010ರ ವರೆಗೆ ಕನ್ನಡ, ಮಲೆಯಾಳಂ, ತೆಲುಗು, ತಮಿಳು ಚಿತ್ರ ರಂಗದಲ್ಲಿ ಸುಮಾರು 50 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ದಕ್ಷಿಣ ಭಾರತದ ಜನಪ್ರಿಯ ನಟಿ ಎಂದು ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ. ಆದರೆ ಇಷ್ಟೆಲ್ಲಾ ಹೆಸರು, ಖ್ಯಾತಿ ಗಳಿಸಿದ ಈ ನಟಿಯ ಸಾಂಸಾರಿಕ ಜೀವನ ಎಷ್ಟೊಂದು ಘೋರವಾದ ಪರಿಸ್ಥಿತಿಯಲ್ಲಿ ಎಂದರೆ ತಿಳಿದರೆ ಎಲ್ಲರಿಗೂ ನೋವಾಗುವುದು ಸಹಜ.

ಮೀರಾ ಜಾಸ್ಮಿನ್ ಕನ್ನಡದಲ್ಲಿ ನಟಿಸಿದ್ದು ಕೇವಲ 5 ಸಿನಿಮಾಗಳಲ್ಲಿ ಮಾತ್ರ ನಟಿಸಿದ್ದು. ಆದರೆ ಇವರು ಕನ್ನಡದಲ್ಲಿ ನಟಿಸಿದ ಐದು ಚಿತ್ರಗಳ ಮೂಲಕವೇ ಕನ್ನಡ ಅಭಿಮಾನಿಗಳ ಹೃದಯ ಕದ್ದಿದ್ದಾರೆ. ಆದರೆ ಅದ್ಯಾಕೋ ಏನೋ? ಚಿತ್ರ ರಂಗದ ವ್ಯಕ್ತಿಗಳಿಗೂ ಹಾಗೂ ವಿವಾಹಕ್ಕೂ ಆಗಿಬರುವುದೇ ಇಲ್ಲವೇನೋ ಏನೋ? ದಶಕಗಳ ಕಾಲ ಸಿನಿಮಾ ರಂಗದಲ್ಲಿ ನಟಿಸಿ, ಜನರನ್ನು ಮನರಂಜಿಸಿದ ಕೆಲವು ನಟ ನಟಿಯರು ಅವರ ದಾಂಪತ್ಯ ಜೀವನದಲ್ಲಿ. ಎಡವಿ ಬೀಳುತ್ತಾರೆ. ಅಂತೆಯ ಮೀರಾ ಜಾಸ್ಮಿನ್ ಕೂಡಾ ದಕ್ಷಿಣ ಭಾರತದ ಜನಪ್ರಿಯ ಹಾಗೂ ಬಹುಬೇಡಿಕೆಯ ನಟಿ ಆಗಿದ್ದಾಗ ಸಂಗೀತ ವಿದ್ವಾಂಸರಾದ ರಾಜೇಶ್ ಅವರನ್ನು ವಿವಾಹ ಆಗುತ್ತೇನೆ ಎಂದು ಹೇಳಿಕೊಂಡಿದ್ದರು. ಆದರೆ ನಂತರ ಕೆಲವು ವೈಯಕ್ತಿಕ ಕಾರಣಗಳಿಂದ ರಾಜೇಶ್ ಅವರನ್ನು ವಿವಾಹ ಆಗಲು ಆಗಲಿಲ್ಲ. ನಂತರ ದುಬೈನಲ್ಲಿ ಇದ್ದ ಸಾಫ್ಟವೇರ್ ಉದ್ಯಮಿ ಅನಿಲ್ ಜಾನ್ ಅವರನ್ನು ವಿವಾಹ ಆಗುತ್ತಾರೆ. ಆದರೆ ದುರಾದೃಷ್ಟ ಎಂದರೆ ಮೀರಾ ಜಾಸ್ಮಿನ್ ಅವರನ್ನು ವಿವಾಹ ಆಗುವ ಮುನ್ನವೇ ಅನಿಲ್ ಅವರಿಗೆ ಮೊದಲೇ ಇನ್ನೊಂದು ಮದುವೆ ಆಗಿರುತ್ತದೆ. ಮೀರಾ ಅವರು ಈ ವಿಚಾರ ತಿಳಿದಿದ್ದರೂ ಸಹ ಅವರನ್ನು ವಿವಾಹ ಆಗಲು ಒಪ್ಪಿಕೊಳ್ಳುತ್ತಾರೆ. ಆದರೆ ಅನಿಲ್ ತಮ್ಮ ಮೊದಲ ಹೆಂಡತಿಗೆ ವಿಚ್ಛೇದನ ನೀಡುವುದಾಗಿ ಹೇಳಿ , ನಂತರ ಇಬ್ಬರೂ ಸುಸೂತ್ರವಾಗಿ ದುಬೈನಲ್ಲಿ ವಿವಾಹ ಆಗಿ ಅಲ್ಲಿಯೇ ನೆಲೆಯೂರುತ್ತಾರೆ.

ಆದರೆ ಮೀರಾ ಅವರಿಗೆ ಕಲೆ ಎನ್ನುವುದು ಕರಗತವಾಗಿದ್ದರಿಂದ ಮತ್ತೆ ತಾನು ಸಿನಿಮಾದಲ್ಲಿ ನಟನೆ ಮಾಡಬೇಕು ಎಂದು ತಮ್ಮ ಈ ಆಸೆಯನ್ನು ಪತಿಯ ಬಳಿ ಹೇಳಿಕೊಂಡಿದ್ದರು. ಆದರೆ ತಮ್ಮ ಹೆಂಡತಿ ಮತ್ತೆ ಬಣ್ಣ ಹಚ್ಚಿ ಸಿನಿಮಾಗಳಲ್ಲಿ ನಟನೆ ಮಾಡುವುದು ಅನಿಲ್ ಅವರಿಗೆ ಇಷ್ಟ ಇರಲಿಲ್ಲ. ಹಾಗಾಗಿ ಸಿನಿಮಾದಲ್ಲಿ ನಟಿಸುವುದು ಬೇಡವೇ ಬೇಡ ಎಂದು ಹೇಳುತ್ತಾರೆ ಇದೆ ವಿಷಯಕ್ಕೆ ಪ್ರತೀ ದಿನ ಗಂಡ ಹೆಂಡತಿ ಇಬ್ಬರಲ್ಲೂ ಪ್ರತೀ ದಿನ ಜಗಳ ನಡೆಯುತ್ತಲೇ ಇರುತ್ತಿತ್ತು. ಇದರಿಂದ ಬೇಸತ್ತ ಅನಿಲ್ ಮೀರಾ ಅವರನ್ನು ಬಿಟ್ಟು, ತನ್ನ ಮೊದಲ ಹೆಂಡತಿಯ ಬಳಿ ಹೋಗುತ್ತಾರೆ. ಇದಕ್ಕೆ ಕೋಪಗೊಂಡ ಮೀರಾ ಜಾಸ್ಮಿನ್ ದುಬೈ ಬಿಟ್ಟು ಭಾರತಕ್ಕೆ ಹಿಂದಿರುಗಿ ಬರುತ್ತಾರೆ.

ಈ ಎಲ್ಲಾ ವಿಚಾರವನ್ನೂ ತಿಳಿದ ಮೀರಾ ಜಾಸ್ಮಿನ್ ಅವರ ತಂದೆ ಮತ್ತು ತಾಯಿ ಇಬ್ಬರೂ ಇವರನ್ನು ಮನೆಗೆ ಸೇರಿಸದೆ ಮಾತನಾಡುವುದನ್ನು ಕೂಡಾ ಬಿಡುತ್ತಾರೆ. ನಂತರ ಬರು ಬರುತ್ತಾ ಚಿತ್ರಗಳಲ್ಲಿ ನಟಿಸಲು ಅವಕಾಶಗಳು ಕೂಡಾ ಕಡಿಮೆ ಆಗುತ್ತದೆ. ದಶಕಗಳ ಕಾಲ ನಮ್ಮನ್ನೆಲ್ಲ ತಮ್ಮ ನಟನೆಯ ಮೂಲಕ ರಂಜಿಸಿದ ಮೀರಾ ಜಾಸ್ಮಿನ್ ಇತ್ತ ಪೋಷಕರ ಜೊತೆಗೂ ಇರಲಾಗದೇ ಅತ್ತ ಪತಿಯ ಜೊತೆಗೂ ಇರದೇ ಇನ್ನೊಂದು ಕಡೆ ಚಿತ್ರ ರಂಗದಲ್ಲಿ ಅವಕಾಶ ಕೂಡಾ ದೊರಕದೆ ಪತಿಗೆ ವಿಚ್ಛೇದನ ನೀಡಿ ಒಂಟಿ ಜೀವನ ನಡೆಸುತ್ತಾ ಇದ್ದಾರೆ. ಮದುವೆ ಮಾಡಿಕೊಳ್ಳುವ ಮುನ್ನ ಒಮ್ಮೆ ಸರಿಯಾಗಿ ಯೋಚಿಸಿದ್ದರೆ ಇವರ ಜೀವನ ಎಷ್ಟೋ ಸುಂದರವಾಗಿ ಇರುತ್ತಿತ್ತು.

Leave a Reply

Your email address will not be published. Required fields are marked *