ನಟಿ ಸುಮಿತ್ರಾ ಅವರು ಒಂದು ಕಾಲದಲ್ಲಿ ದಕ್ಷಿಣ ಭಾರತದ ಜನಪ್ರಿಯ ನಟಿ ಆಗಿ ಮೆರೆದವರು. 1972 ರಲ್ಲಿ ತೆರೆಕಂಡ ಮಲಯಾಳಂ ಚಿತ್ರ ನರ್ತನ ಸಾಲ ಎಂಬ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ ಕನ್ನಡ, ತೆಲುಗು, ತಮಿಳು ಎಲ್ಲ ಭಾಷೆಯ ಚಿತ್ರಗಳಲ್ಲಿ ನಟಿ ಸುಮಿತ್ರಾ ಅವರು ನಟಿಸಿದ್ದಾರೆ. ಇನ್ನು ನಟಿ ಸುಮಿತ್ರಾ ಅವರಿಗೆ ಇಬ್ಬರು ಹೆಣ್ಣುಮಕ್ಕಳು ಇದ್ದಾರೆ. ಅವರು ಕೂಡ ಈಗ ಕನ್ನಡ ಚಿತ್ರರಂಗದಲ್ಲಿ ಟಾಪ್ ನಟಿಯರಲ್ಲಿ ಒಬ್ಬರಾಗಿದ್ದಾರೆ ಅವರು ಯಾರು ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ನಟಿ ಸುಮಿತ್ರಾ ಅವರು ಕನ್ನಡದಲ್ಲಿ ಮಾತ್ರವಲ್ಲದೆ ತಮಿಳು ನಲ್ಲಿ ಕೂಡ ರಜನಿಕಾಂತ್, ಶಿವಾಜಿ ಗಣೇಶನ್, ಕಮಲ್ ಹಾಸನ್ ಹಾಗೂ ಇನ್ನೂ ಮುಂತಾದ ನಾಯಕ ನಟರ ಜೊತೆ ನಟನೆ ಮಾಡಿ ದಕ್ಷಿಣ ಭಾರತದ ಖ್ಯಾತ ನಟಿ ಎಂದು ಪ್ರಸಿದ್ಧರಾದರು. ತದನಂತರ ಕಾಲಂತರದಲ್ಲಿ ಪೋಷಕ ನಟಿಯಾಗಿ ನಟನೆ ಮಾಡುವುದರ ಮೂಲಕ ತಮ್ಮನ್ನು ಗುರುತಿಸಿಕೊಂಡರು. ಕನ್ನಡ, ತೆಲುಗು, ತಮಿಳು, ಮಲಯಾಳಂ ಎಲ್ಲಾ ಭಾಷೆಗಳಲ್ಲಿ ಕೂಡ ಪೋಷಕ ನಟಿಯಾಗಿ ಅಭಿನಯ ಮಾಡಿದ್ದಾರೆ. ಕರ್ನಾಟಕದ ಕನಸುಗಾರ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಚಿತ್ರದಲ್ಲಿ ಕೂಡಾ ಹಲವು ಪಾತ್ರಗಳಲ್ಲಿ ನಟಿಸಿ, ಅದರಲ್ಲೂ ರಾಮಾಚಾರಿ ಚಿತ್ರದಲ್ಲಿ ರವಿಚಂದ್ರನ್ ಅವರಿಗೆ ತಾಯಿಯ ಪಾತ್ರದಲ್ಲಿ ನಟಿಸಿ ತಮ್ಮ ಅಮೋಘ ನಟನೆಯನ್ನು ಕರುನಾಡಿನ ಜನತೆಗೆ ತೋರಿಸಿದರು. ಕನ್ನಡದ ಖ್ಯಾತ ನಿರ್ದೇಶಕ ಡಿ ರಾಜೇಂದ್ರ ಬಾಬು ಅವರು ಸುಮಿತ್ರ ಅವರ ಪತಿ. ಡಿ ರಾಜೇಂದ್ರ ಬಾಬು 2013 ರಲ್ಲಿ ನಿಧನರಾಗಿದ್ದಾರೆ.

ಇನ್ನು ನಟಿ ಸುಮಿತ್ರಾ ಹಾಗೂ ಖ್ಯಾತ ನಿರ್ದೇಶಕ ಡಿ ರಾಜೇಂದ್ರ ಬಾಬು ಈ ದಂಪತಿಗಳಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಇವರ ಹೆಣ್ಣುಮಕ್ಕಳು ಕೂಡ ಸಿನಿಮಾರಂಗಕ್ಕೆ ಕಾಲಿಟ್ಟಿದ್ದು ಉಮಾಶಂಕರಿ ಹಾಗೂ ನಕ್ಷತ್ರ ಎನ್ನುವುದು ನಟಿ ಸುಮಿತ್ರಾ ಅವರ ಇಬ್ಬರು ಹೆಣ್ಣುಮಕ್ಕಳ ಹೆಸರಾಗಿದೆ. ಸುಮಿತ್ರ ಅವರ ಇಬ್ಬರು ಹೆಣ್ಣು ಮಕ್ಕಳು ಕೂಡ ಕನ್ನಡ, ತೆಲುಗು, ತಮಿಳು, ಮಲಯಾಳಂ ಚಿತ್ರಗಳಲ್ಲಿ ನಾಯಕಿ ಹಾಗೂ ಪೋಷಕ ಪಾತ್ರಗಳಲ್ಲಿ ನಟನೆ ಮಾಡಿದ್ದಾರೆ.

ಸುಮಿತ್ರಾ ಅವರ ಒಬ್ಬಳು ಮಗಳು ಉಮಾಶಂಕರಿ ಇವರು ಉಪೇಂದ್ರ ಅಭಿನಯದ ಉಪ್ಪಿದಾದ ಎಂಬಿಬಿಎಸ್ ಚಿತ್ರದಲ್ಲಿ ನಾಯಕ ನಟಿಯಾಗಿ ಅಭಿನಯ ಮಾಡಿರುವುದು ಇವರ ಮುಖ್ಯ ಚಿತ್ರವಾಗಿದೆ. ಹಾಗೆ ಇನ್ನು ಸುಮಿತ್ರ ಅವರ ಇನ್ನೊಂದು ಮಗಳು ನಕ್ಷತ್ರ ಅವರು ಗೋಕುಲ, ಹರೇ ರಾಮ ಹರೇ ಕೃಷ್ಣ, ಫೇರ್ ಅಂಡ್ ಲವ್ಲಿ ಹಾಗೂ ಇನ್ನೂ ಹಲವಾರು ಚಿತ್ರಗಳಲ್ಲಿ ಹಾಗೂ ಕೆಲವು ನಾಟಕಗಳಲ್ಲಿ ಕೂಡಾ ಅಭಿನಯ ಮಾಡಿದ್ದಾರೆ. ಈ ಮೂಲಕ ಸುಮಿತ್ರಾ ಅವರ ಕುಟುಂಬ ತಮ್ಮನ್ನು ತಾವು ಚಿತ್ರರಂಗಕ್ಕೆ ಸಮರ್ಪಿಸಿಕೊಂಡಿದ್ದ ಎಂದರೆ ತಪ್ಪಾಗಲಾರದು. ಸುಮಿತ್ರಾ ಅವರ ಇಬ್ಬರು ಹೆಣ್ಣು ಮಕ್ಕಳಿಗೂ ಕನ್ನಡ ಚಿತ್ರರಂಗದಲ್ಲಿ ಇನ್ನೂ ಹೆಚ್ಚಿನ ಅವಕಾಶಗಳು ದೊರೆಯಲೀ ಎಂದು ಆಶಿಸೋಣ.

Leave a Reply

Your email address will not be published. Required fields are marked *