ಒಂದು ಕಾಲದಲ್ಲಿ ದಕ್ಷಿಣ ಭಾರತದ ಚಿತ್ರರಂಗವನ್ನು ನಟನೆಯ ಮೂಲಕ ಆಳಿದ ಬಹುಭಾಷಾ ನಟಿ ಮೀನಾ. ಕನ್ನಡ ಚಿತ್ರರಂಗದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಜೊತೆ ನಟನೆ ಮಾಡುವ ಮೂಲಕ ಬಹಳಷ್ಟು ಖ್ಯಾತಿ ಹೊಂದಿದ್ದಾರೆ. ನಟಿ ಮೀನಾ ಅವರು ಈಗ ಎಲ್ಲಿದ್ದಾರೆ ಹೇಗಿದ್ದಾರೆ ಏನು ಮಾಡುತ್ತಿದ್ದಾರೆ ಎನ್ನುವ ಕುತೂಹಲ ಎಲ್ಲರಿಗೂ ಇದೆ. ಇಷ್ಟೇ ಅಲ್ಲದೇ ನಟಿ ಮೀನಾ ಅವರಿಗೆ ಒಬ್ಬ ಮುದ್ದಾದ ಮಗಳು ಕೂಡ ಇದ್ದಾಳೆ ಅವರ ಮಗಳು ಹೇಗಿದ್ದಾಳೆ ಅನ್ನೋದನ್ನ ನಾವಿಲ್ಲಿ ನೋಡೋಣ.

ಬಹುಭಾಷಾ ನಟಿ ಮೀನಾ ಅವರು ತಾವು 8ನೇ ತರಗತಿಯಲ್ಲಿ ಓದುತ್ತಿರುವಾಗಲೇ ಓದಿಗೆ ಗುಡ್ ಬೈ ಹೇಳಿ ನಟನೆ ಬಗ್ಗೆ ಆಸಕ್ತಿ ಇರುವುದರಿಂದ ನಟನೆಗೆ ಇಳಿದರು. ಚಿತ್ರರಂಗದಲ್ಲಿ ಅವಕಾಶ ಕಡಿಮೆಯಾದಾಗ 10ನೇ ತರಗತಿಯ ಪರೀಕ್ಷೆ ಬರೆದು ಪಾಸಾದರೂ ಕೂಡ ಇವರಿಗೆ ನಟನೆಯ ಕುರಿತಾದ ಆಸಕ್ತಿ ಕಡಿಮೆ ಏನು ಆಗಲಿಲ್ಲ. 10ನೇ ತರಗತಿ ಪರೀಕ್ಷೆ ಮುಗಿಸಿದ ನಂತರವೂ ಮತ್ತೆ ಚಿತ್ರರಂಗದ ಕಡೆಗೆ ಒಲವು ತೋರಿ ಚಿತ್ರರಂಗಕ್ಕೆ ಕಾಲಿಟ್ಟ ಮೀನಾ ಅವರು ಇಡೀ ದಕ್ಷಿಣ ಭಾರತದ ಚಿತ್ರರಂಗದಲ್ಲಿ ತಮ್ಮ ನಟನೆಯನ್ನು ತೋರಿಸಿ ದಕ್ಷಿಣ ಭಾರತದ ಚಿತ್ರರಂಗವನ್ನು ಆಳಿ ಟಾಪ್ ನಟಿ ಅನ್ನಿಸಿಕೊಂಡರು. ನಟಿ ಮೀನಾ ಅವರು 2009ರಲ್ಲಿ ಸಾಫ್ಟ್ವೇರ್ ಉದ್ಯಮಿ ವಿದ್ಯಾಸಾಗರ ಎಂಬುವವರನ್ನು ವಿವಾಹವಾದರು. ನಂತರದ ದಿನಗಳಲ್ಲಿ ಒಂದು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದರು. ನಟಿ ಮೀನಾ ಅವರು ತಮ್ಮ ಮುದ್ದಾದ ಹೆಣ್ಣು ಮಗಳಿಗೆ ನೈನಿಕ ಎಂಬ ವಿಶೇಷವಾದ ಹೆಸರನ್ನು ಇಟ್ಟಿದ್ದಾರೆ. ನೈನಿಕ ಎಂದರೆ ಈ ಹೆಸರಿನ ಅರ್ಥ ಕಣ್ಣಿನ ರೆಪ್ಪೆ ಎಂಬುದಾಗಿ ಅರ್ಥವನ್ನು ನೀಡುತ್ತದೆ.

ನಂತರದ ದಿನಗಳಲ್ಲಿ ಮೀನ ಅವರು ಮಗು ಆದ ಕಾರಣ ನಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲಿಲ್ಲ. ಈಗ ಮಗಳು ಮತ್ತು ಗಂಡನ ಬಗ್ಗೆ ಹೆಚ್ಚಿನ ಒಲವು ತೋರುವ ನಟಿ ಮೀನಾ ತಾವೇ ಅಡುಗೆ ಮಾಡಿ ಬಡಿಸುತ್ತಾ ಮಗಳ ಜೊತೆ ಆಟ ಆಡುತ್ತ ತಮ್ಮ ಹೆಚ್ಚು ಸಮಯವನ್ನು ಮಗಳಿಗಾಗಿ ಮೀಸಲು ಇಟ್ಟು ಮಗಳ ಜೊತೆ ಹೆಚ್ಚಿನ ಸಮಯ ಕಳೆಯುತ್ತಾರೆ. ಮೀನಾ ಅವರ ಪತಿ ವಿದ್ಯಾ ಸಾಗರ್ ಅವರು ಸಾಫ್ಟ್ವೇರ್ ಉದ್ಯಮಿ ಆಗಿರುವುದರಿಂದ ನಟಿ ಮೀನಾ ಅವರೇ ಮಗಳ ಬಗ್ಗೆ ಹೆಚ್ಚು ಗಮನ ಕೊಡಬೇಕಾಗಿರುವುದರಿಂದ ಮೀನಾ ಅವರು ನಟನೆಯನ್ನು ಬಿಟ್ಟು ಮಗಳ ಜೊತೆ ಹಾಯಾಗಿ ಕಾಲ ಕಳೆಯುತ್ತಾ ಇದ್ದಾರೆ. ತಮ್ಮ ಮಗಳಿಗೂ ಕೂಡಾ ಉತ್ತಮ ವಿದ್ಯಾಭ್ಯಾಸ ನೀಡಿ ಮಗಳಿಗೂ ಕೂಡಾ ನಟನೆಯನ್ನು ಕಲಿಸಬೇಕು ಎನ್ನುವುದು ನಟಿ ಮೀನಾ ಅವರ ಆಸೆಯಂತೆ. ಒಂದು ಕಾಲದಲ್ಲಿ ಟಾಪ್ ನಟಿಯಾಗಿ ಮಿಂಚಿ, ಐಷಾರಾಮಿ ಜೀವನ ನಡೆಸಿದ ನಟಿ ಮೀನಾ ಅವರು ಈಗ ಸಾಮಾನ್ಯ ಗೃಹಿಣಿಯಂತೇ ಜೇವನ ನಡೆಸುತ್ತಾ ಇದ್ದಾರೆ. ನಟಿ ಮೀನಾ ಅವರ ಮಗಳು ನೈನಿಕಾ ವಿಜಯ್ ಅಭಿನಯದ ಥೆರಿ ಚಿತ್ರದಲ್ಲಿ ವಿಜಯ್ ಮಗಳಾಗಿ ಬಾಲನಟಿಯಾಗಿ ಅಭಿನಯ ಮಾಡಿದ್ದಾಳೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!