ಕೆಲವು ದಿನಗಳಿಂದ ಮೇಘನಾ ಅವರು ವಿಷ್ಣುವರ್ಧನ್ ಜೊತೆಗಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ ಫೋಟೋಗಳಲ್ಲಿ ವಿಷ್ಣುವರ್ಧನ್ ಅವರು ಮೇಘನಾ ಜೊತೆ ಬಹಳ ಆತ್ಮೀಯವಾಗಿರುವುದನ್ನು ನಾವು ನೋಡಬಹುದು ಅಲ್ಲದೆ ವಿಷ್ಣುವರ್ಧನ್ ಅವರು ಬಳಸುತ್ತಿದ್ದ ವಸ್ತು ಈಗಲೂ ಮೇಘನಾ ಬಳಿಯೆ ಇದೆ ಹಾಗಿದ್ದರೆ ಅದು ಯಾವುದು ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ

ವಿಷ್ಣುವರ್ಧನ್ ಕುಟುಂಬಕ್ಕೆ ಸುಂದರರಾಜ್ ಕುಟುಂಬ ಬಹಳ ಆಪ್ತ. ಒಂದೇ ಕುಟುಂಬದಂತೆ ಇದ್ದರು ವಿಷ್ಣುವರ್ಧನ್ ಮತ್ತು ಭಾರತಿಯವರಿಗೆ ಸುಂದರರಾಜ್ ಕುಟುಂಬವೆಂದರೆ ಬಹಳ ಪ್ರೀತಿ ಈ ಎರಡು ಕುಟುಂಬದವರ ಸ್ನೇಹ ಮೊದಲಿನಿಂದಲೂ ಆತ್ಮೀಯವಾಗಿದ್ದರೂ. ಸುಂದರರಾಜ್ ಮತ್ತು ಪ್ರಮೀಳವರನ್ನು ಮೊದಲಿನಿಂದಲೂ ನೋಡಿಕೊಂಡು ಬಂದ ವಿಷ್ಣುವರ್ಧನ್ ಅವರಿಗೆ ಸುಂದರರಾಜ್ ಮಗಳಾದ ಮೇಘನಾ ಕಂಡರೆ ಬಹಳ ಪ್ರೀತಿ ಸಣ್ಣ ವಯಸ್ಸಿನಿಂದಲೂ ಎತ್ತಿ ಆಡಿಸಿದ್ದಾರೆ ತಿಂಗಳಿಗೊಮ್ಮೆಯಾದರೂ ಈ ಎರಡು ಕುಟುಂಬ ಒಟ್ಟಿಗೆ ಸೇರುತಿತ್ತು.

ಮೇಘನಾ ಅವರಿಗೂ ವಿಷ್ಣುವರ್ಧನ್ ಅಂದ್ರೆ ಬಹಳ ಪ್ರೀತಿ ಎಂಬುದು ಮನೆಯವರಿಗೆಲ್ಲ ಗೊತ್ತಿತ್ತು ಹಾಗಾಗಿ ವಿಷ್ಣುವರ್ಧನ್ ಮಗಳು ಕೀರ್ತಿ ಅವರು ತಮ್ಮ ತಂದೆ ಬಳಸುತ್ತಿದ್ದ ಬೆಲೆಬಾಳುವ ವಾಚ್ ನ್ನು ತಾವು ಇಟ್ಟುಕೊಳ್ಳದೆ ಮೇಘನಾ ಅವರಿಗೆ ಕೊಟ್ಟರು. ಯಾರ ಬಳಿಯೂ ಇರದ ವಿಷ್ಣುವರ್ಧನ್ ಅವರ ಅಪರೂಪದ ನೆನಪು ಈಗಲೂ ಮೇಘನಾ ಬಳಿಯೆ ಇದೆ ಆಗಾಗ ವಿಷ್ಣುವರ್ಧನ್ ಅವರೊಂದಿಗಿನ ತಮ್ಮ ಫೋಟೋವನ್ನು ಹಂಚಿಕೊಳ್ಳುತ್ತಾರೆ. ವಾಚ್ ವಿಚಾರವನ್ನು ಮೇಘನಾ ಅವರೆ ಹೇಳಿಕೊಂಡಿದ್ದರು ಮನುಷ್ಯರು ಇಲ್ಲದಿದ್ದರೂ ಅವರು ತೋರಿಸಿದ ಪ್ರೀತಿ ಎಂದೆಂದಿಗೂ ಶಾಶ್ವತ. ಈ ರೀತಿಯಾಗಿ ವಿಷ್ಣುವರ್ಧನ್ ಮತ್ತು ಸುಂದರರಾಜ್ ಕುಟುಂಬ ಆತ್ಮೀಯವಾಗಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!