ಹಳ್ಳಿ ಮೇಷ್ಟ್ರು ಚಿತ್ರದ ನಟಿ ಈಗ ಹೇಗಿದ್ದಾರೆ ಏನ್ ಮಾಡ್ತಿದಾರೆ ಗೊತ್ತೇ

0 5

ಹಳ್ಳಿಮೇಷ್ಟ್ರು ಕನ್ನಡ ಚಿತ್ರವನ್ನು ಯಾರೂ ಮರೆಯಲು ಸಾಧ್ಯವಿಲ್ಲ ರವಿಚಂದ್ರನ್ ಮತ್ತು ನಟಿ ಫರೀನ್ ಅವರ ನಟನೆ ಅದ್ಭುತವಾಗಿದೆ ಹಾಗಿದ್ದರೆ ನಟಿ ಫರೀನ್ ಅವರು ಈಗ ಎಲ್ಲಿ ಮತ್ತು ಹೇಗಿದ್ದಾರೆ ಅವರ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.

ಜಾನ್ ತೇರೆ ನಾಮ ಎಂಬ ಬಾಲಿವುಡ್ ಚಿತ್ರದಿಂದ ಫೇಮಸ್ ಆದ ನಟಿ ಫರಿನ್. ಈ ನಟಿಯ ಇನ್ನೊಂದು ಹೆಸರು ಬಿಂದಿಯಾ ಇವರು ನೋಡಲು ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಅವರಂತೆ ಇದ್ದಾರೆ ಇವರನ್ನು ಕ್ರೇಜಿಸ್ಟಾರ್ ರವಿಚಂದ್ರನ್ ಅವರು ತಮ್ಮ ಹಳ್ಳಿ ಮೇಷ್ಟ್ರು ಚಿತ್ರಕ್ಕೆ ನಾಯಕಿ ಯಾಗಿ ಕರೆತಂದರು ಹಳ್ಳಿಮೇಷ್ಟ್ರು ಚಿತ್ರದಲ್ಲಿ ನ್ಯಾಚುರಲ್ ಆಗಿ ನಟಿಸಿದರು ಅಪ್ಪಟ ಹಳ್ಳಿ ಹುಡುಗಿಯಾಗಿ ನಟಿ ಬಿಂದಿಯಾ ಮಿಂಚಿದರು ಈ ಚಿತ್ರದ ನಂತರ ನಟಿ ಬಿಂದಿಯಾ ಶೂಟಿಂಗ್ ಸೆಟ್ ನಲ್ಲಿ ಕಿರಿಕ್ ಮಾಡುತ್ತಾರೆ ಎಂಬ ಮಾತುಗಳು ಕೇಳಿಬಂದವು ಬಿಂದಿಯಾ ಅವರು ರವಿಚಂದ್ರನ್ ಅವರ ಮೇಲೆ ಲೈಂ-ಗಿಕ ದೌರ್ಜನ್ಯ ಎಸಗಲು ಪ್ರಯತ್ನಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು ಇದರಿಂದ ರವಿಚಂದ್ರನ್ ಅವರು ನ್ಯಾಯಲಯದಲ್ಲಿ ಬಿಂದಿಯಾ ವಿರುದ್ದ ಮಾನನಷ್ಟ ಮೊಕದ್ದಮೆ ಹೂಡಿದರು. ನ್ಯಾಯಾಲಯದ ತೀರ್ಪು ರವಿಚಂದ್ರನ್ ಅವರ ಪರವಾಗಿ ಬಂತು ಬಿಂದಿಯಾ ಅವರು ಕೋರ್ಟ್ನಲ್ಲಿ ರವಿಚಂದ್ರನ್ ಬಳಿ ಎಲ್ಲರ ಮುಂದೆ ಕ್ಷಮೆ ಕೇಳಿದರು.

ನಂತರದ ದಿನಗಳಲ್ಲಿ ಬಿಂದಿಯಾ ಅವರಿಗೆ ಕನ್ನಡ ಚಿತ್ರಗಳಲ್ಲಿ ಅವಕಾಶಗಳು ಕಡಿಮೆಯಾಯಿತು ರಾಯರು ಬಂದರು ಮಾವನ ಮನೆಗೆ ಚಿತ್ರದಲ್ಲಿ ವಿಷ್ಣುವರ್ಧನ್ ಅವರ ಜೊತೆ ನಟಿಸಿದ್ದಾರೆ ಮತ್ತಾವ ಕನ್ನಡ ಚಿತ್ರದಲ್ಲಿ ನಟಿಸಲಿಲ್ಲ. ಅತ್ತ ಬಾಲಿವುಡ್ ನಲ್ಲಿಯೂ ಅವಕಾಶಗಳು ಕಡಿಮೆಯಾಯಿತು. ಈ ವೇಳೆಗೆ ಮದುವೆಯಾಗಿದ್ದ ಭಾರತೀಯ ಮಾಜಿ ಕ್ರಿಕೆಟಿಗ ಮನೋಜ ಪ್ರಭಾಕರ್ ಅವರನ್ನು ಪ್ರೀತಿಸಿದರು ಮನೋಜ ಪ್ರಭಾಕರ್ ಅವರು ತಮ್ಮ ಮೊದಲ ಪತ್ನಿಗೆ ವಿಚ್ಛೇದನ ನೀಡಿ ಬಿಂದಿಯಾ ಅವರನ್ನು ಮದುವೆಯಾದರು. ಈಗ ಬಿಂದಿಯಾ ಅವರು ತಮ್ಮ ಪತಿ ಹಾಗೂ ಇಬ್ಬರು ಮಕ್ಕಳೊಂದಿಗೆ ದೆಹಲಿಯಲ್ಲಿ ವಾಸವಾಗಿದ್ದು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಈ ರೀತಿಯಾಗಿ ನಟಿ ಫರೀನ್ ಅವರ ಬಗ್ಗೆ ಮಾಹಿತಿ ಪಡೆಯಬಹುದು.

Leave A Reply

Your email address will not be published.