ಜಗತ್ತಿನಲ್ಲಿ ಏನು ನಿಂತರು ಸಮಯ ಎನ್ನುವುದು ಯಾರಿಗೂ ನಿಲ್ಲುವುದಿಲ್ಲ. ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎನ್ನುವುದು ಚಲ ಇದ್ದರೆ ಸಮಯ ಓಡಿದ ಹಾಗೆ ಸಮಯದ ಜೊತೆಗೆ ನಾವು ಕೂಡ ಓಡಲೇಬೇಕು. ಕೆಲವೊಮ್ಮೆ ನಾವು ನಮ್ಮ ಹೊಟ್ಟೆ ತುಂಬಿಸಿಕೊಳ್ಳುವ ಸಲುವಾಗಿ ಯಾವುದಾದರೂ ಒಂದು ಕೆಲಸವನ್ನು ಮಾಡಲೇಬೇಕಾಗುತ್ತದೆ. ಪರಿಸ್ಥಿತಿಗಳನ್ನು ಅರಿತುಕೊಂಡು ಅವುಗಳನ್ನು ಬದಿಗಿರಿಸಿ ತಾವು ದೊಡ್ಡ ದೊಡ್ಡ ಸ್ಟಾರ್ಗಳು ಎನ್ನುವ ಮನೋಭಾವವನ್ನು ಬದಿಗಿಟ್ಟು, ಹೆಚ್ಚಾಗಿ ಗಂಡಸರು ಓಡಿಸುವ ಆಟವನ್ನು ಒಬ್ಬ ಹೆಣ್ಣಾಗಿ ನಟಿಯೊಬ್ಬರು ಆಟೋ ಓಡಿಸುತ್ತಿದ್ದಾರೆ. ತಮ್ಮ ಜೀವನ ನಡೆಸುವುದರ ಸಲುವಾಗಿ ನಟಿಯ ರಾಗಿದ್ದು ಈಗ ಆಟೋ ಓಡಿಸುತ್ತಿರುವ ಅಂತಹ ನಟಿಯರು ಯಾರು ಎನ್ನುವುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಮಲಯಾಳಂ ಚಿತ್ರರಂಗದಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸಿರುವಂತಹ ನಟಿ ಅನೀಸ್ ಆಕ್ಟಿಂಗ್ ಇಲ್ಲದೆ ಇರುವ ಕಾಲಿ ದಿನಗಳಲ್ಲಿ ಆಟೋ ಚಲಾಯಿಸುವುದರ ಮೂಲಕ ತಮ್ಮ ಜೀವನ ನಡೆಸಲು ಸ್ವಲ್ಪ ಹಣವನ್ನು ಕೂಡಿಟ್ಟು ಕೊಳ್ಳುತ್ತಿದ್ದಾರೆ. ಇದರಿಂದ ತಮ್ಮ ಮಕ್ಕಳನ್ನು ಓದಿಸಲು , ಮಕ್ಕಳಿಗೆ ಉತ್ತಮ ಜೀವನವನ್ನು ರೂಪಿಸಲು ಎಲ್ಲದಕ್ಕೂ ಸಿನಿಮಾದಿಂದ ಬರುವ ಹಣ ಮಾತ್ರವೇ ಸಾಕಾಗುವುದಿಲ್ಲ ಎನ್ನುವುದನ್ನು ಅರಿತಈ ನಟಿ ಕೊಚ್ಚಿ ನಗರದಲ್ಲಿ ಆಟೋರಿಕ್ಷಾ ಓಡಿಸುತ್ತ ಮಕ್ಕಳಿಗೆ ಒಳ್ಳೆಯ ಕಡೆ ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ.

ತಮ್ಮ ಕುಟುಂಬದ ಪೋಷಣೆಯಲ್ಲಿ ಆರೋಗ್ಯದ ಸಮಸ್ಯೆಯಲ್ಲಿ ಸಿಲುಕಿರುವ ತನ್ನ ಅಕ್ಕನನ್ನು ನೋಡಿಕೊಳ್ಳುವ ಸಲುವಾಗಿ ಆಟೋ ಓಡಿಸುತ್ತಿರುವ ಈ ಮರಾಠಿ ನಟಿಯ ಹೆಸರು ಲಕ್ಷ್ಮಿ. ಸುಮಾರು ವರ್ಷಗಳಿಂದ ಹಲವಾರು ಸೀರಿಯಲ್ ಹಾಗೂ ಸಿನಿಮಾಗಳಲ್ಲಿ ನಟಿಸಿರುವ ಲಕ್ಷ್ಮಿಸಾಕಷ್ಟು ಹೆಸರು ಏನೋ ಗಳಿಸಿದರು ಆದರೆ ನಟನೆಯಿಂದ ಬರುತ್ತಿದ್ದ ಹಣ ಸಮಸ್ಯೆಯಲ್ಲಿರುವ ಸಂಸಾರವನ್ನೂ ನಿಭಾಯಿಸಲು ಸಾಕಾಗುತ್ತಿರಲಿಲ್ಲ. ಹಾಗಾಗಿ ನಟನೆಯ ಜೊತೆ ಆಟವನ್ನು ಕೂಡ ಚಲಾಯಿಸಲು ಆರಂಭಿಸಿದ ಲಕ್ಷ್ಮಿ ಅವರು ಸ್ವಾವಲಂಬನೆಯಿಂದ ತಾವು ಮಾತ್ರ ಜೀವಿಸುವುದಲ್ಲದೇ ತಮ್ಮ ಕುಟುಂಬವನ್ನು ಸಹ ನಿರ್ವಹಣೆ ಮಾಡುತ್ತಿದ್ದಾರೆ.

ರಂಗ್ ಬದಲ್ತೆ ಓದನಿ, ಚಂದ್ರಗುಪ್ತ ಮೌರ್ಯ ಅಂತ ದೊಡ್ಡ ದೊಡ್ಡ ಪ್ರಾಜೆಕ್ಟ್ ಗಳಲ್ಲಿ ಕೆಲಸ ಮಾಡಿದ ನಟಿ ಯಶಸ್ರೀ ಮುಸುರುಕರ್ ಕಾರ್ ಸಹವಾಸ ಬೇಡ ಎಂದು ಕಾರ್ ಮಾರಾಟ ಮಾಡಿ ಆಟೋ ರಿಕ್ಷಾ ತೆಗೆದುಕೊಂಡಿದ್ದಾರೆ. ಶೂಟಿಂಗ್ ಸೆಟ್ ಗೆ ಕೂಡಾ ಹಾಗೂ ಇತರ ಸ್ಥಳಗಳಿಗೂ ಆಟೋದಲ್ಲಿಯೆ ಹೋಗುವ ಈ ನಟಿ ಮಧ್ಯದಲ್ಲಿ ಯಾರಾದರೂ ಡ್ರಾಪ್ ಕೇಳಿದರೆ ಕರೆದುಕೊಂಡು ಹೋಗುತ್ತಾರೆ. ಆಟೋ ಓಡಿಸುವಾಗ ಜನರು ಈ ನಟಿಯನ್ನು ವಿಚಿತ್ರವಾಗಿ ನೋಡುತ್ತಾರಂತೆ. ಆದರೆ ಅದ್ಯಾವುದನ್ನೂ ಲೆಕ್ಕಿಸದೆ ಮುಂಬೈ ನಲ್ಲಿ ಎಲ್ಲಿಗೇ ಹೋಗಬೇಕಿದ್ದರೂ ಸಹ ಆಟೋ ಓಡಿಸಿಕೊಂಡೆ ಹೋಗುತ್ತಾರಂತೆ. ಈ ನಟಿ ದುಡಿಯುವುದಕ್ಕಾಗಿ ಆಟೋ ಓಡಿಸದೆ ಇದ್ದರೂ ದುಡಿಯುವ ಸ್ಥಳಕ್ಕೆ ಆಟೋ ಓಡಿಸಿಕೊಂಡು ಹೋಗಿ ಕಾರ್ ಮತ್ತು ಕಾರ್ ಡ್ರೈವರ್ ವೆಚ್ಚ ಇಲ್ಲದಂತೆ ಮಾಡಿಕೊಂಡಿದ್ದಾರೆ.

ಒಂದು ಕಡೆ ನಾಟಕ ಇನ್ನೊಂದು ಕಡೆ ಸಿನಿಮಾ ಎಂದು ಸದಾ ಕಾಲ ಬ್ಯುಸಿ ಆಗಿರುತ್ತಿದ್ದ ಮಲಯಾಳಂ ನಟಿ ಮಂಜು ಇವರಿಗೆ ಆಕಸ್ಮಿಕವಾಗಿ ಬಂದ ಕೋರೋನ ದಿಂದ ಆರ್ಥಿಕ ಕಷ್ಟ ಎದುರಾಯಿತು. ಹಿಂದೆ ಮುಂದೆ ನೋಡದೆ ಒಂದು ಆಟೋ ರಿಕ್ಷಾ ತೆಗೆದುಕೊಂಡು ಓಡಿಸಿ ಕೈ ತುಂಬಾ ಹಣ ಗಳಿಸುತ್ತಾ ಇದ್ದಾರೆ. ಅಷ್ಟೇ ಅಲ್ಲದೇ ಕಷ್ಟದಲ್ಲಿ ಇರುವ ಇತರ ಕಲಾವಿದರಿಗೂ ಸಹ ಸಹಾಯ ಮಾಡುತ್ತ ಇದ್ದಾರೆ. ತಾನೊಬ್ಬ ನಟಿಯಾಗಿದ್ದೂ , ತಾನು ಆಟೋ ಓಡಿಸಿದರೆ ತನ್ನ ಸ್ಟೇಟಸ್ ಏನಾಗಬಹುದು ಎನ್ನುವುದನ್ನು ಯೋಚಿಸದೆ ಸ್ವಾವಲಂಬಿಯಾಗಿ ಬದುಕುತ್ತಿರುವ ನಟಿ ಮಂಜು ಅವರ ಧೈರ್ಯವನ್ನು ಮೆಚ್ಚಲೇಬೇಕು. ಕಷ್ಟ ಎಂದು ಕೈ ಕಟ್ಟಿ ಕೂರದೆ ಆಟೋ ಓಡಿಸಿ ಆದರೂ ಜೀವನದ ಇನ್ನೊಂದು ಬದುಕಿನ ದಾರಿಯನ್ನು ಕಂಡುಕೊಂಡ ಈ ನಟಿಯರ ಆತ್ಮಸ್ಥೈರ್ಯವನ್ನು ಮೆಚ್ಚಲೇಬೇಕು.

By

Leave a Reply

Your email address will not be published. Required fields are marked *