ಕೆಲವೊಮ್ಮೆ ಚರ್ಮರೋಗಗಳು ಉಂಟಾದಾಗ ಒಂದು ಕಡೆಯಿಂದ ಇನ್ನೊಂದು ಕಡೆಗೆ ಅದು ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಸಾಧ್ಯತೆಗಳು ಇರುತ್ತವೆ. ಇರಿದ ಚರ್ಮರೋಗಗಳಲ್ಲಿ ಗಜಕರ್ಣ ಅಥವಾ ರಿಂಗ್ವಾರ್ಮ್ ಕೂಡ ಒಂದಾಗಿರುತ್ತದೆ. ಗಜಕರ್ಣ ಹೋಗಲಾಡಿಸಲು ನಾವು ಮನೆಯಲ್ಲಿಯೇ ಯಾವ ರೀತಿಯ ಸುಲಭವಾಗಿ ಔಷಧಿಯನ್ನು ಅಥವಾ ಉಪಚಾರವನ್ನು ಮಾಡಿಕೊಳ್ಳಬೇಕು ಎನ್ನುವುದರ ಬಗ್ಗೆ ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಗಜಕರ್ಣ ಚರ್ಮದ ಮೇಲೆ ಉಂಟಾಗುವ ಕಾಯಿಲೆಯಾಗಿದ್ದು ಇದು ಬೆವರಿನ ಮೂಲಕ ಹೆಚ್ಚಾಗಿ ಉಂಟಾಗುತ್ತದೆ. ಗಜಕರ್ಣ ಉಂಟಾದ ಜಾಗದಲ್ಲಿ ಅತಿಯಾಗಿ ತುರಿಕೆ ಉಂಟಾಗುವುದು ಚರ್ಮ ಕೆಂಪಾಗುವುದು ಆಗುತ್ತದೆ. ಈ ಸಮಸ್ಯೆಗೆ ಸುಲಭವಾಗಿ ನಾವು ಮನೆಯಲ್ಲಿ ಯಾವ ರೀತಿ ಔಷಧೋಪಚಾರಗಳನ್ನು ಮಾಡಿಕೊಳ್ಳಬಹುದು ಎನ್ನುವುದನ್ನು ನೋಡುವುದಾದರೆ , ಒಂದು ಬೌಲಿನಲ್ಲಿ ಕಳಿತ ಬಾಳೆಹಣ್ಣನ್ನು ನಿಮಗೆ ಬೇಕಾದಷ್ಟು ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು. ನಂತರ ಇದಕ್ಕೆ ಸಮ ಪ್ರಮಾಣದಲ್ಲಿ ಅರಿಶಿನವನ್ನು ಸೇರಿಸಿ (ಅರಿಶಿನದಲ್ಲಿ ಇರುವಂತಹ ಆಂಟಿ ಬ್ಯಾಕ್ಟೀರಿಯಲ್ ಗುಣವು ಫಂಗಲ್ ಇನ್ಫೆಕ್ಷನ್ ಅನ್ನು ತಡೆಗಟ್ಟಲು ಸಹಾಯ ಮಾಡುತ್ತದೆ) ಅದರ ಜೊತೆಗೆ ಒಂದು ಟೀ ಸ್ಪೂನ್ ನಷ್ಟು ಗಟ್ಟಿ ಮೊಸರನ್ನು ಸೇರಿಸಿ ಈ ಮೂರು ಪದಾರ್ಥಗಳನ್ನು ಚೆನ್ನಾಗಿ ಮಿಕ್ಸ್ ಮಾಡಿ ಪೇಸ್ಟ್ ತರ ಮಾಡಿಕೊಳ್ಳಬೇಕು.

ಬಾಳೆಹಣ್ಣು ಅರಿಶಿನ ಹಾಲು ಮೊಸರು ಈ ಮೂರು ಪದಾರ್ಥಗಳ ಮಿಶ್ರಣದಿಂದ ಮಾಡಿಕೊಂಡ ಪೇಸ್ಟನ್ನು ನಮಗೆ ಗಜಕರ್ಣ ಅಥವಾ ಹುಳಕಡ್ಡಿ ಆಗಿರುವ ಜಾಗದಲ್ಲಿ ರಾತ್ರಿ ಮಲಗುವ ಸಂದರ್ಭದಲ್ಲಿ ಸತತವಾಗಿ ಮೂರು ದಿನಗಳ ಕಾಲ ಹಚ್ಚುವುದರಿಂದ ಗಜಕರ್ಣ ಕಡಿಮೆಯಾಗುವುದು. ಹೀಗೆ ಈ ರೀತಿಯಾಗಿ ಮಾಡುವುದರಿಂದ ಯಾವುದೇ ರೀತಿಯಲ್ಲಿ ನಾವು ಆಸ್ಪತ್ರೆಗೆ ಹೋಗುವ ಸಂದರ್ಭವೂ ಸಹ ಬರುವುದಿಲ್ಲ ಬೇರೆ ಯಾವುದೇ ಕ್ರೀಮ್ ಗಳ ಮೊರೆಹೋಗುವುದರ ಅವಶ್ಯಕತೆ ಕೂಡಾ ಇರುವುದಿಲ್ಲ. ಕೇವಲ ಮೂರು ದಿನದಲ್ಲಿ ಈ ಮೂರು ಪದಾರ್ಥಗಳ ಪೇಸ್ಟನ್ನು ರಾತ್ರಿ ಮಲಗುವ ಸಮಯದಲ್ಲಿ ಹಚ್ಚಿ ಬೆಳಗ್ಗೆ ತೊಳೆಯುವುದರಿಂದ ಗಜಕರ್ಣ ವನ್ನು ಸುಲಭವಾಗಿ ನಾವು ಮನೆಯಲ್ಲಿಯೇ ಕಡಿಮೆ ಮಾಡಿಕೊಳ್ಳಬಹುದು.

Leave a Reply

Your email address will not be published. Required fields are marked *