ಸೇವಿಸುವಂತ ಆಹಾರ ಸರಿಯಾಗಿ ಜೀರ್ಣ ಆಗದೆ ಉಂಟಾಗುವ ಸಮಸ್ಯೆಗಳಿಗೆ ಈ ಕಾಳು ಉತ್ತಮ ಔಷಧಿ

0 1

ಅಜೀರ್ಣದ ಸಮಸ್ಯೆ ಇರುವವರೂ ಅಥವಾ ತಿಂದಂತಹ ಆಹಾರ ಸರಿಯಾಗಿ ಜೀರ್ಣವಾಗದೇ ಇದ್ದಾಗ ನಾವು ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತೇವೆ. ಇದಕ್ಕೆ ಉತ್ತಮ ಪರಿಹಾರ ಎಂದರೆ ಅಜವಾನ ಅಥವಾ ಓಂಕಾಳು ಅತವಾ ವಾಮ ಎಂದು ಕರೆಯುವ ಈ ಕಾಳಿನಿಂದ ನಾವು ಅಜೀರ್ಣದ ಸಮಸ್ಯೆ ಯನ್ನು ಹೇಗೆ ಬಗೆಹರಿಸಿಕೊಳ್ಳಬಹುದು? ಇದನ್ನು ಬಳಸುವ ರೀತಿ ಹೇಗೆ ಹಾಗೂ ನಮಗೆ ಉಂಟಾಗುವ ಪ್ರಯೋಜನಗಳು ಏನು ಎನ್ನುವುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಅಜವಾನ ಅಥವಾ ಓಂಕಾಳು ಇದರಲ್ಲಿ ಇರುವಂತಹ ಔಷಧೀಯ ಗುಣಗಳ ಬಗ್ಗೆ ತಿಳಿದುಕೊಳ್ಳುವುದಕ್ಕಿಂತ ಮೊದಲು ಇದರ ಗುಣಧರ್ಮಗಳ ಬಗ್ಗೆ ಇದು ಯಾವ ರೀತಿ ಕೆಲಸ ಮಾಡುತ್ತದೆ ಎನ್ನುವುದರ ಬಗ್ಗೆ ತಿಳಿದುಕೊಳ್ಳೋಣ. ಓಂಕಾಳು ಇದು ತಿಂಪನಿಯ, ವಾಚನೀಯ ಮತ್ತು ಲೇಖನೀಯ ಈ ಮೂರು ರೀತಿಯ ಕೆಲಸಗಳನ್ನು ಮಾಡುತ್ತದೆ. ವಾತಹರ ಕೆಲಸವನ್ನು ಮಾಡುತ್ತದೆ. ಅಜವಾನ ಇದೊಂದು ಉಷ್ಣವೀರ್ಯ ದ್ರವ್ಯವಾಗಿದ್ದು, ನಮ್ಮ ದೇಹಕ್ಕೆ ಉಷ್ಣವನ್ನು ನೀಡುತ್ತದೆ. ನಮ್ಮ ದೇಹದಲ್ಲಿ ಯಾವಾಗ ಉಷ್ಣ ಉತ್ಪತ್ತಿ ಆಗುತ್ತದೆ ಆಗ ತನ್ನಿಂತಾನೇ ನಮ್ಮ ದೇಹದಲ್ಲಿ ಉತ್ಪತ್ತಿಯಾಗುತ್ತದೆ. ಅಂದರೆ ದೇಹಕ್ಕೆ ಆಹಾರವನ್ನು ಜೀರ್ಣ ಮಾಡುವ ಶಕ್ತಿ , ಜೀರ್ಣಿಸಿ ದೇಹಕ್ಕೆ ಆಹಾರವನ್ನು ಸಲ್ಲಿಸುವ ಶಕ್ತಿ , ಮತ್ತು ಯಾವಾಗ ನಮ್ಮ ದೇಹಕ್ಕೆ ಇದು ಉಷ್ಣಾಂಶವನ್ನು ನೀಡಿ ಶೋರಕ್ನವಾಗಿ ಕೆಲಸ ಮಾಡುತ್ತದೆ. ಅಂದರೆ ಇದು ನಮಗೆ ಕೈ ಕಾಲು ನೋವು ಬಂದಾಗ ನಾವು ಹೇಗೆ ಬಿಸಿಯಾದ ಶಾಖವನ್ನು ನೀಡುವುದರ ಮೂಲಕ ನೋವನ್ನು ಕಡಿಮೆ ಮಾಡಿಕೊಳ್ಳುತ್ತೇವೆ ಅದೇ ರೀತಿ ಇದು ಕೆಲಸ ನಿರ್ವಹಿಸುತ್ತದೆ.

ನಮ್ಮ ದೇಹದಲ್ಲಿ ಉಷ್ಣಾಂಶ ಹೆಚ್ಚಾದಾಗ ಉಷ್ಣತೆ ಪರಿಣಾಮವಾಗಿ ವಾತಹರ ಉಂಟಾಗುತ್ತದೆ. ವಾತ ಶಮನವಾಗುತ್ತದೆ ಹೀಗೆ ಈ ರೀತಿಯಾದಾಗ ನಮ್ಮ ದೇಹದಲ್ಲಿ ಇರುವಂತಹ ನೋವು ಕಡಿಮೆಯಾಗುತ್ತದೆ. ಅಂದರೆ ಅಜವಾನ ಆಹಾರವನ್ನು ಜೀರ್ಣ ಮಾಡಿ ಹಸಿವನ್ನು ಹೆಚ್ಚು ಮಾಡಿಸುತ್ತದೆ ಹಾಗೂ ಎಲ್ಲಾ ರೀತಿಯ ನೋವುಗಳಿಗೂ ಕೂಡ ಆಜವಾನ ರಾಮಬಾಣವಾಗಿ ಕಾರ್ಯನಿರ್ವಹಿಸುತ್ತದೆ. ಅಜವಾನವನ್ನು ಸಂಧಿವಾತ ಮತ್ತು ಗ್ರಾಮವಾದ ರಿಂದ ಬಳಲುತ್ತಿರುವ ಅಂತಹ ವ್ಯಕ್ತಿಗಳು ಮತ್ತು ಹೊಟ್ಟೆಯಲ್ಲಿ ಅಜೀರ್ಣದಿಂದ ಬಳಲುತ್ತಾ ಇರುವವರು ಈ ಅಜವಾನವನ್ನು ಬಳಕೆ ಮಾಡಲೇಬೇಕು. ಸಮಸ್ಯೆ ಇರುವವರು ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ತಿಂಡಿ ಊಟವಾದ ನಂತರ ಕಾಲು ಚಮಚದಷ್ಟು ಅಜವಾನವನ್ನು ಬಾಯಲ್ಲಿ ಹಾಕಿಕೊಂಡು ಜಗಿದು ತಿನ್ನಬೇಕು. ಹೀಗೆ ಮಾಡುತ್ತಾ ಬಂದಿದ್ದೆ ಆದಲ್ಲಿ ದೇಹದಲ್ಲಿರುವಂತಹ ವಾತ ಹಾಗೂ ನೋವು ಶಮನವಾಗುತ್ತದೆ. ಇದರಿಂದ ಚೆನ್ನಾಗಿ ಹಸಿವಾಗಿ, ಪೌಷ್ಟಿಕ ಆಹಾರ ಸೇವನೆ ಮಾಡುವ ಮೂಲಕ ದೇಹ ಸುದೃಢವಾಗುತ್ತದೆ.

Leave A Reply

Your email address will not be published.