ಸೀಬೆಹಣ್ಣು ತಿಂದು ಈ ಸಮಸ್ಯೆಯಿಂದ ದೂರವಿರಿ

0 1

ಆರೋಗ್ಯಕ್ಕೆ ಹಣ್ಣುಗಳು ಅತಿ ಹೆಚ್ಚು ಉಪಯೋಗಕಾರಿಯಾಗಿದೆ, ಅಂತಹ ಹಣ್ಣುಗಳ ಸಾಲಿನಲ್ಲಿ ಈ ಸೀಬೆಹಣ್ಣು ಕೂಡ ಒಂದಾಗಿದೆ. ಸೀಬೆ ಹಣ್ಣು ಹಲವು ಆರೋಗ್ಯಕಾರಿ ಗುಣಗಳನ್ನು ಹೊಂದಿದ್ದು ಅದರಲ್ಲಿ ಔಷದಿಯ ಗುಣಗಳನ್ನು ಸಹ ಕಾಣಬಹುದಾಗಿದೆ. ಸೀಬೆಹಣ್ಣು ಅನ್ನೋದು ನೈಸರ್ಗಿಕ ಗುಣಗಳನ್ನು ಹೊಂದಿದ್ದು ಇದರಲ್ಲಿ ಆರೋಗ್ಯಕಾರಿ ಅಂಶಗಳು ಹೇರಳವಾಗಿದೆ.

ಇನ್ನು ಈ ಹಣ್ಣು ಸೇವನೆಯಿಂದ ಎಷ್ಟೆಲ್ಲ ಲಾಭವಿದೆ ಹಾಗೂ ಯಾವ ಸಮಸ್ಯೆಯಿಂದ ದೂರ ಉಳಿಯಬಹುದು ಅನ್ನೋದನ್ನ ನೋಡುವುದಾದರೆ, ಇದು ರಕ್ತ ಹೀನತೆ ಸಮಸ್ಯೆಗೆ ಒಳ್ಳೆಯ ಹಣ್ಣು ಅನಿಸಿಕೊಂಡಿದೆ ದೇಹದಲ್ಲಿ ರಕ್ತ ಹೀನತೆ ಇದ್ರೆ ಈ ಹಣ್ಣು ಸೇವನೆ ಮಾಡುವುದರಿಂದ ದೇಹದಲ್ಲಿ ರಕ್ತವನ್ನು ವೃದ್ಧಿಸಿಕೊಳ್ಳಬಹುದಾಗಿದೆ. ಇನ್ನು ಈ ಹಣ್ಣು ಸೇವನೆಯಿಂದ ಹಲವು ಆರೋಗ್ಯಕಾರಿ ಲಾಭಗಳನ್ನು ಪಡೆಯಬಹುದಾಗಿದೆ.

ಹೌದು ಪ್ರತಿದಿನ ಸೀಬೆಹಣ್ಣನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ದೇಹದಲ್ಲಿ ರಕ್ತದ ಉತ್ಪಾದನೆ ಹೆಚ್ಚಾಗಿ ರಕ್ತಹೀನತೆ ಸಮಸ್ಯೆ ದೂರವಾಗುತ್ತದೆ. ಅಷ್ಟೇ ಅಲ್ಲದೆ ಮಧುಮೇಹಿಗಳಿಗೂ ಹಾಗೂ ಮಲಬದ್ಧತೆ ಸಮಸ್ಯೆ ಇರೋರಿಗೂ ಕೂಡ ಈ ಹಣ್ಣು ಉಪಯೋಗಕಾರಿಯಾಗಿದೆ.

ಇನ್ನು ಅತಿಯಾದ ಹೊಟ್ಟೆನೋವು ಉಂಟಾದರೆ ಸೀಬೆಹಣ್ಣನ್ನು ಉಪ್ಪು ಮತ್ತು ಕುಟ್ಟಿದ ಕಾಲು ಮೆಣಸಿನ ಪುಡಿಯೊಂದಿಗೆ ತಿಂದರೆ ನೋವು ಹೊಟ್ಟೆ ನೋವು ಕಡಿಮೆಯಾಗುವುದು. ಅಲ್ಲದೆ ಬಾಯಿ ಹುಣ್ಣು ಸಮಸ್ಯೆಗೆ ಕೂಡ ಸೀಬೆ ಹಣ್ಣು ಸಹಕಾರಿ ಹೇಗೆ ಅನ್ನೋದನ್ನ ನೋಡುವುದಾರೆ ಸೀಬೆಹಣ್ಣಿನ ಗಿಡದ ಚಿಗುರನ್ನು ನುಣ್ಣಗೆ ಅರೆದು ಕಷಾಯ ತಯಾರಿಸಿ ರುಚಿಗೆ ತಕ್ಕಸ್ಟು ಉಪ್ಪು ಸೇರಿಸಿ ದಿನಕ್ಕೆ ಮೂರೂ ಬಾರಿ ಬಾಯಿ ಮುಕ್ಕಳಿಸಿದರೆ ಬಾಯಿ ಹುಣ್ಣು ನಿವಾರಣೆ ಕಾಣಬಹುದು.

Leave A Reply

Your email address will not be published.