Ultimate magazine theme for WordPress.

ಬಡ ಜನರಿಗೆ ಕೇವಲ 1 ರೂಪಾಯಿಗೆ ವೈದ್ಯಕೀಯ ಚಿಕಿತ್ಸೆ ನೀಡೋ ವೈದ್ಯ ದಂಪತಿಗಳು

0 4,281

ವೈದ್ಯರು ಆಸ್ಪತ್ರೆ ಅಂದ್ರೆ ಸಾವಿರಾರು ರೂಗಳನ್ನು ಕೀಳುವ ವೃತ್ತಿ ಅನ್ನೋ ಮನೋಭಾವ ಇರುವ ಈ ದಿನಗಳಲ್ಲಿ, ಇಲ್ಲೊಬ್ಬ ವೈದ್ಯ ದಂಪತಿ ಬಡಜನರಿಗಾಗಿ ಬರಿ ೨ ರುಪಾಯಿಗೆ ವೈದ್ಯಕೀಯ ಚಿಕಿತ್ಸೆ ನೀಡುತ್ತಿದ್ದಾರೆ. ಅಷ್ಟಕ್ಕೂ ಇವರು ಯಾರು ಇವರ ಸೇವೆ ಹೇಗಿದೆ ಅನ್ನೋ ಒಂದು ಚಿಕ್ಕ ಸ್ಟ್ರೋರಿಯನ್ನೊಮ್ಮೆ ಓದಿ, ಇವರ ಕಾರ್ಯ ವೈಖರಿ ಇಷ್ಟವಾದರೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ ಹಂಚಿಕೊಳ್ಳಿ ಇದರಿಂದ ಬೇರೆಯವರಿಗೂ ಸ್ಪೋರ್ತಿಯಾಗಬಹುದು.

ಇವರ ಹೆಸರು ರವೀಂದ್ರ ಕೋಹ್ಲೆ ಇವರ ಪತ್ನಿ ಸ್ಮಿತಾ ಎಂಬುದಾಗಿ ಮೂಲತಃ ಮಹಾರಾಷ್ಟ್ರದವರು ಈ ದಂಪತಿ ಬಡವರ ಆರೋಗ್ಯಕ್ಕಾಗಿ ಸೇವೆ ಸಲ್ಲಿಸುತ್ತಿದ್ದಾರೆ, ಬುಡಕಟ್ಟು ಜನಾಂಗಕ್ಕಾಗಿ ಹಾಗೂ ಬಡ ಜನಗಳಿಗಾಗಿ ಬರಿ ೨ ರುಪಾಯಿಗೆ ವೈದ್ಯಕೀಯ ಚಿಕಿತ್ಸೆ ಕೊಡುವುದರ ಜೊತೆಗೆ, ಸರ್ಕಾರ ಬಡವರಿಗಾಗಿ ಅರೋಗ್ಯ ಕಾಳಜಿವಹಿಸಬೇಕು ಅನ್ನೋ ಕಳಕಳಿ ಇವರದ್ದಾಗಿದೆ.

ಬುಡಕಟ್ಟು ಜನಾಂಗದವರಿಗೆ ಸರಿಯಾದ ರೀತಿಯಲ್ಲಿ ಪೌಷ್ಟಿಕಾಂಶ ಭರಿತವಾದ ಆಹಾರ ಸಿಗೋದಿಲ್ಲ ಹಾಗೂ ಆ ಪೌಷ್ಟಿಕತೆಯ ಸಮಸ್ಯೆ ಕಾಡುತ್ತದೆ ಆದ್ದರಿಂದ ಈ ಸಮಸ್ಯೆಯಿಂದ ಸಾವಿರಾರು ಮಕ್ಕಳು ಸಾವನ್ನಪ್ಪುತ್ತಾರೆ ಇದರಿಂದ ಪಾರಾಗಬೇಕು ಅನ್ನೋ ಉದ್ದೇಶ ಇವರದ್ದಾಗಿದೆ. ಹೌದು ಮಹಾರಾಷ್ಟ್ರದ ಮೆಲ್ಘಾಟ್ ಅತಿ ಹೆಚ್ಚು ಅಪೌಷ್ಠಿಕತೆಯುಳ್ಳ ಪ್ರದೇಶ. ಅಪೌಷ್ಠಿಕತೆ ಇಲ್ಲಿನ ಮಕ್ಕಳನ್ನಂತೂ ಬೆಂಬಿಡದೆ ಕಾಡುತ್ತಿದೆ. 1989ರಲ್ಲಿ ಈ ಬುಡಕಟ್ಟು ಪ್ರದೇಶಕ್ಕೆ ಡಾ. ರವೀಂದ್ರ ಕೋಹ್ಲೆ ಬಂದಿದ್ದರು, ಆ ದಿನಗಳಿಂದ ಇಂದಿನವರೆಗೆ ಈ ವೈದ್ಯ ದಂಪತಿ ಆ ಪೌಷ್ಟಿಕತೆಯ ವಿರುದ್ಧ ಶ್ರಮಿಸುತ್ತಿದೆ.

ಆ ದಿನಗಳಲ್ಲಿ ಅಂದರೆ ೧೯೮೯ ರ ಸಮಯದಲ್ಲಿ ಮೆಲ್ಘಾಟ್ನಲ್ಲಿಆ ಪೌಷ್ಟಿಕಾಂಶದ ಕೊರತೆಯಿಂದ ೧೦೦೦ ಮಕ್ಕಳಲ್ಲಿ ೨೦೦ ಮಕ್ಕಳು ಸಾವನ್ನಪ್ಪುತ್ತಿದ್ದರು ಆದ್ರೆ ಇದೀಗ ಇದರ ಸಂಖ್ಯೆ ಇಳಿಕೆಯಾಗಿದೆ ಇಂದಿನ ದಿನಗಳಲ್ಲಿ ೬೦ ಕ್ಕೆ ಇಳಿದಿದೆ ಎಂಬುದಾಗಿ ಹೇಳಲಾಗುತ್ತದೆ. ಮಹಾತ್ಮಾ ಗಾಂಧಿ ಅವರ ಆದರ್ಶವೇ ಡಾ.ರವೀಂದ್ರ ಅವರಿಗೆ ಪ್ರೇರಣೆ. ಕಳೆದ ಮೂರು ದಶಕಗಳಿಂದ ಅವರು ಗಾಂಧಿ ಹಾಕಿಕೊಟ್ಟ ಹಾದಿಯಲ್ಲೇ ಸಾಗುತ್ತಿದ್ದಾರೆ ಅನ್ನೋದನ್ನ ತಿಳಿಯಲಾಗುತ್ತದೆ.

ಭಾರತದಲ್ಲಿ ಹುಟ್ಟುವಂತ ಮಕ್ಕಳಲ್ಲಿ ಆ ಪೌಷ್ಟಿಕಾಂಶದ ಕೊರತೆ ಹೆಚ್ಚಾಗಿ ಇರುತ್ತದೆ ಇದರ ಸಲುವಾಗಿ ಸರ್ಕಾರ ಒಳ್ಳೆಯ ಯೋಜನೆಗಳನ್ನು ರೂಪಿಸಿ ಇದರ ಅಡಿಯಲ್ಲಿ ಬಡ ಜನರಿಗೆ ಹಾಗೂ ಬುಡಕಟ್ಟು ಜನರಿಗೆ ಪೌಷ್ಟಿಕಾಂಶ ಒದಗಿಸುವ ಕೆಲಸ ಮಾಡಬೇಕು ಅನ್ನೋದು ಈ ವೈದ್ಯ ದಂಪತಿಯ ಮಾತು. ಇವರ ಕಾರ್ಯ ವೈಖರಿಗೆ ಹಾಗೂ ಇವರ ಸೇವೆಗೆ ಗೌರವಿಸಿ ಹಲವು ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿ ಗೌರವವನ್ನು ನೀಡಲಾಗಿದೆ. ಅದೇನೇ ಇರಲಿ ಇವರ ಈ ಕಾಳಜಿಗೆ ನಿಜಕ್ಕೂ ಮೆಚ್ಚಲೇಬೇಕು ಇನ್ನು ನಮ್ಮ ದೇಶದಲ್ಲಿ ಸಾಮಾಜಿಕ ಕಾರ್ಯಕ್ಕೆ ಕೈ ಜೋಡಿಸೋ ವೈದ್ಯರುಗಳು ಹೆಚ್ಚಾಗಲಿ ಅನ್ನೋ ಆಶಯ ನಮ್ಮದು.

Leave A Reply

Your email address will not be published.