ಬಡತನದಲ್ಲಿ ಹುಟ್ಟಿ ಬೆಳೆದ ಇವರು ಛಲಬಿಡದೆ ವೈದ್ಯರಾಗಿ, ತಾನು ದುಡಿದ ಹಣವನ್ನೆಲ್ಲ ವಿದ್ಯಾರ್ಥಿಗಳಿಗೆ ದಾನ ಮಾಡಿದ ಮಹಾನ್ ವ್ಯಕ್ತಿ

0 40

ಪ್ರತಿ ಮನುಷ್ಯನ ತನ್ನ ಜೀವನದಲ್ಲಿ ಯಶಸ್ಸು ಕಾಣಬೇಕು ಅನ್ನೋ ಛಲವನ್ನು ಹೊಂದಿರುತ್ತಾನೆ, ಆದ್ರೆ ಕೆಲವರಿಗೆ ಬಡತನ ಅಥವಾ ಆರ್ಥಿಕ ಸಮಸ್ಯೆ ಎಲ್ಲ ಇನ್ನಾವೋದೋ ಸಮಸ್ಯೆ ಎದುರಾಗಿ ಯಶಸ್ಸಿನ ಹಾದಿಗೆ ಅಡ್ಡಿಯಾಗಬಹುದು. ಅದೇ ರೀತಿಯಲ್ಲಿ ಈ ವ್ಯಕ್ತಿ ತಾನು ಬಡತನದಲ್ಲಿ ಹುಟ್ಟಿ ಬೆಳೆದು ತಾನು ವೈದ್ಯನಾಗಬೇಕು ಅನ್ನೋ ಕನಸನ್ನು ಕಂಡಿದ್ದರು, ಆದರೆ ಅಂದಿನ ದಿನಗಳಲ್ಲಿ ಕಾಲೇಜು ಶುಲ್ಕ ಪಾವತಿ ಮಾಡಲು 240 ರೂ ಗಳು ಸಹ ಇರಲಿಲ್ಲ ಅಂತಹ ವೇಳೆ ಸ್ನೇಹಿತರ ಬಳಿ ಸ್ವಲ್ಪ ಹಣ ಹೊಂದಿಸಿ ಇನ್ನು ಮಿಕ್ಕಿದ ಹಣವನ್ನು ಹೊಂದಿಸಲು ಕಷ್ಟವಾದಾಗ ಸಾರ್ವಜನಿಕವಾಗಿ ಭಿಕ್ಷೆ ಬೇಡಿ ಶುಲ್ಕವನ್ನು ಕಟ್ಟಿ ಸುಮಾರು 1965 ರ ವೇಳೆಗೆ ಎಂಬಿಬಿಎಸ್ ಮುಗಿಸಿದ್ದರು.

ಅಷ್ಟಕ್ಕೂ ಇವರು ಯಾರು ಇವರ ಕಾರ್ಯ ವೈಖರಿ ಹೇಗಿದೆ ಅನ್ನೋದನ್ನ ನೋಡಿದರೆ ನಿಜಕ್ಕೂ ಹೆಮ್ಮೆಯ ವಿಷಯವೇ ಆಗಿದೆ. ಬೆಂಗಳೂರಿನಲ್ಲಿ ಎಂಬಿಬಿಎಸ್ ಮಾಡಿ, ಲಂಡನ್ ನಲ್ಲಿ ವೈದ್ಯರಾಗಿ ಸೇವೆ ಮಾಡಿ ನಿವೃತ್ತರಾಗಿದ್ದಾರೆ. ಇವರು ದುಡಿದ ದುಡ್ಡಿನಲ್ಲಿ ರಾಯಲ್ ಲೈಫ್ ನಡಿಸಬಹುದಿತ್ತು ಕೊಟ್ಟಿಗಟ್ಟಲೆ ಅಸ್ತಿ ಹೊಂದಿದ್ದರು ಆದ್ರೆ ಅವರಿಗೆ ಇದೆಲ್ಲ ಇಷ್ಟವಾಗದೇ ತಾನು ಹುಟ್ಟಿ ಬೆಳೆದ ಜೀವನವನ್ನು ನೆನೆದು ಬಡ ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾಭ್ಯಾಸ ಸಿಗಬೇಕು ಅನ್ನೋ ಉದ್ದೇಶದಿಂದ ಲಂಡನ್ ನಲ್ಲಿದ್ದ ತಮ್ಮ 2 ಕೋಟಿ ಬೆಲೆ ಬಾಳುವ ಮನೆಯನ್ನು ಹಾಗೂ ಬೆಂಗಳೂರಿನಲ್ಲಿದ್ದ ಸುಮಾರು1.5ಕೋಟಿ ರೂ ಬೆಲೆಯ ಮನೆ ಮಾರಿ ಇದರ ಹಣವನ್ನು ವಿದ್ಯಾರ್ಥಿಗಳ ಸಹಾಯಕ್ಕೆ ನೀಡಿದ್ದಾರೆ ಇದೀಗ ಇವರು ಬಾಡಿಗೆ ಮನೆಯಲ್ಲಿದ್ದಾರೆ.

ಹೌದು 80 ವರ್ಷದ ಡಾ. ಪ್ರಭಾಕರ್ ರೆಡ್ಡಿಯವರು ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ವಳ್ಳೂರು ಗ್ರಾಮದಲ್ಲಿ ಜನಿಸಿದ್ದಾರೆ. ಬೆಂಗಳೂರಿನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡಿ ವೈದ್ಯ ವೃತ್ತಿಗಾಗಿ ಲಂಡನ್‍ಗೆ ಹೋಗಿರೋ ಇವರು ಸದ್ಯ ನಿವೃತ್ತಿಯಾಗಿದ್ದಾರೆ. ತಮ್ಮ ಹುಟ್ಟೂರಿನಲ್ಲಿ ವಿದ್ಯಾರ್ಥಿಗಳಿಗೆ ಸಹಾಯ ಆಗಲಿ ಅನ್ನೋ ಕಾರಣಕ್ಕೆ ತಮ್ಮ ಹೆಸರಿನಲ್ಲಿ ಎಜುಕೇಷನ್ ಟ್ರಸ್ಟ್ ಸ್ಥಾಪಿಸಿ ವಿದ್ಯಾರ್ಥಿಗಳಿಗೆ ಸಹಾಯ ಮಾಡ್ತಿದ್ದಾರೆ.‌ ವಿದ್ಯಾರ್ಥಿ ವೇತನ, ಶಾಲಾ-ಕಾಲೇಜುಗಳಿಗೆ ಕುಡಿಯುವ ನೀರು, ಸಮವಸ್ತ್ರ ಸೇರಿದಂತೆ ಅಗತ್ಯ ಸೌಕರ್ಯಗಳನ್ನು ಒದಗಿಸುತ್ತ ಬರುತ್ತಿದ್ದಾರೆ. ಸ್ವಾರ್ಥಿಗಳೇ ತುಂಬಿರುವಂತ ಈ ಸಮಾಜದಲ್ಲಿ ಯಾವುದೇ ಸ್ವಾರ್ಥವಿಲ್ಲದೆ ತಾನು ದುಡಿದ ಹಣವನ್ನೆಲ್ಲ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಒದಗಿಸುತ್ತಿರುವ ಈ ವ್ಯಕ್ತಿಯ ಕಾರ್ಯ ವೈಖರಿಗೆ ನಿಜಕ್ಕೂ ಮೆಚ್ಚಲೇಬೇಕು ಅಲ್ಲವೇ?

Leave A Reply

Your email address will not be published.