ಜಗತ್ತಿನ ಅತಿ ದೊಡ್ಡ ದೇವಾಲಯ ಯಾವುದು ಎಂದು ಯಾರನ್ನಾದರೂ ಕೇಳಿದರೆ ಅವರು ಹೇಳುವುದು ಒಂದೇ ಆಂಕೂರ್ವಾಟ್ನ ಹೆಸರು. ಆಂಕೂರ್ವಾಟ್ ಜಗತ್ತಿನ ಅತಿ ದೊಡ್ಡ ದೇವಾಲಯ ಆಗಿದೆ. ಆದರೆ ಅಲ್ಲಿ ಪೂಜೆ ನಡೆಯೋದಿಲ್ಲ. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ.

ಕಾಂಬೋಡಿಯಾದಲ್ಲಿರೋ ಈ ದೇವಾಲಯವನ್ನು ಜಗತ್ತಿನ ಅತಿ ದೊಡ್ದ ದೇವಾಲಯ ಎಂದು ಹೇಳುತ್ತಾರೆ. ಈ ದೇವಾಲಯ ಐತಿಹಾಸಿಕ ಸ್ಮಾರಕ ಆಗಿದೆ ಹೊರತು ಅಲ್ಲಿ ಪೂಜೆ ಪುನಸ್ಕಾರ
ನಡೆಯೋದಿಲ್ಲ. 2ನೇ ಸೂರ್ಯವರ್ಮ ಇದನ್ನು ಕಟ್ಟಿಸಿದನು. ಹಿಂದೂ ಹಾಗೂ ಬೌದ್ಧ ಧರ್ಮದ ಅತಿ ದೊಡ್ಡ ಸ್ಮಾರಕ. ಇದನ್ನು ಬಿಟ್ಟರೆ ಪ್ರಪಂಚದಲ್ಲಿ ಅತಿ ದೊಡ್ಡ ದೇವಾಲಯ ಕಾವೇರಿ ತೀರದಲ್ಲಿ ಇದೆ. ಅದೇ ಶ್ರೀರಂಗಂ ದೇವಾಲಯ. ಇದು 155ಎಕರೆ ವಿಸ್ತೀರ್ಣ ಹೊಂದಿದೆ. 21ಗೋಪುರಗಳಿವೆ, 39 ಮಂಟಪಗಳು ಇಲ್ಲಿಯ ಪ್ರಾಕಾರದಲ್ಲಿ ಸ್ಥಾನವನ್ನು ಪಡೆದುಕೊಂಡಿದೆ. 7ಪವಿತ್ರ ಜಲ ಮೂಲಗಳನ್ನು ಹೊಂದಿದೆ.

ಶ್ರೀರಂಗಂ ತಮಿಳುನಾಡಿನ ತಿರುಚಿನಾಪಳ್ಳಿಯ ಒಂದು ದ್ವೀಪ. ಕಾವೇರಿ ಮತ್ತು ಕೊಲ್ಲಿ ನದಿ ಇಬ್ಭಾಗವಾದಾಗ ಆದ ದ್ವೀಪದಲ್ಲಿ ಇದು ಇದೆ. ಈ ದೇವಾಲಯದ ಬಗ್ಗೆ ತಮಿಳುಸಂಗಮನದಿಗಳ ಗ್ರಂಥದಲ್ಲಿ ಹಾಗೂ ಶಿಲ -ಪ್ಪಾದಿಗಾರಮ ಗ್ರಂಥದಲ್ಲಿ ಉಲ್ಲೇಖಿತವಾಗಿದೆ.

ಶ್ರೀರಂಗಂ ದೇವಾಲಯ ಒಂದನೇ ಶತಮಾನದಲ್ಲಿ ಅಸ್ತಿತ್ವದಲ್ಲಿ ಇತ್ತು ಎಂದು ಹೇಳಲಾಗಿದೆ. ಇಲ್ಲಿಯ
ಶಾಸನಗಳು ಸಹ ಅದನ್ನೇ ಹೇಳುತ್ತವೆ. ಇಲ್ಲಿಯ ಶಿಲಾಶಾಸನಗಳು ಈ ಆಲಯದ ನಿರ್ಮಾಣದಲ್ಲಿ ಚೋಳ, ಪಾಂಡ್ಯ, ಹೊಯ್ಸಳ, ವಿಜಯನಗರದವರ ಪಾತ್ರದ ಬಗ್ಗೆ ಸಾಕ್ಷಿಗಳನ್ನು ಒದಗಿಸುತ್ತದೆ.

ಈ ದೇವಾಲಯ ಒಂದನೇ ಶತಮಾನದಿಂದ 21ನೇ ಶತಮಾನದ ತನಕ ಹಂತ ಹಂತವಾಗಿ ನಿರ್ಮಾಣ ಆಗಿತ್ತು ಎಂದು ಶಿಲಾಶಾಸನಗಳು ಹೇಳುತ್ತದೆ. ಇದಕ್ಕೆ ಒಂದು ಉದಾಹರಣೆ ಎಂದರೆ ಇಲ್ಲಿರುವ 20ಅಡಿ ಎತ್ತರದ ಗೋಪುರ ನಿರ್ಮಾಣ ಕಾರ್ಯ ಮುಗಿದಿದ್ದು 1987ರಲ್ಲಿ. ಹೀಗೆ ಅವತ್ತಿಂದ ಇವತ್ತಿನವರೆಗೂ ಪೂಜೆ ನಿಂತಿಲ್ಲ. ಇಂತಹ ಅದ್ಭುತ ದೇವಾಲಯ ದೆಹಲಿ ಸುಲ್ತಾನರ ಕೆಂಗಣ್ಣಿಗೆ ಬಲಿಯಾಗಿತ್ತು. ಅವತ್ತಿನ ಆ ದಾಳಿಯಲ್ಲಿ ಶ್ರೀರಂಗನಾಥನ ದೇವಾಲಯ ಕೂಡ ಲೂಟಿ ಆಯಿತು. ಹಾಗೆಯೇ 1311ರಲ್ಲಿ ಮಲ್ಲಿಕಾಫರ್ ದಾಳಿಗೆ ಈ ದೇವಾಲಯ ಬಲಿಯಾಗಿ ಹೋಯಿತು. ಆಗ ನಡೆದದ್ದು ಅಮಾನುಷವಾದ ದಾಳಿ.

ಇಂತಹ ಅಮಾನುಷವಾದ ದಾಳಿಯಾದರೂ ಅದು ಮತ್ತೆ ಪುನರ್ರಚನೆ ಆಗಿದ್ದು ಮಾತ್ರ ಅದ್ಭುತಗಳಲ್ಲಿ ಒಂದು. ಪುನರ್ ನಿರ್ಮಾಣದ ನಂತರ ಕೂಡ 1335ರಲ್ಲಿ ಮೊಹಮ್ಮದ್ ಬಿನ್ ತುಘಲಕ್ ದಾಳಿ ಮಾಡುತ್ತಾನೆ. ಅದನ್ನು ರಕ್ಷಿಸಲು ಕಾದಾಟ ಮಾಡಿದ 13000 ನಿರಾಯುಧ ಶ್ರೀಯುತ ವೈಷ್ಣವರು ಬಲಿಯಾದರು. ಅದಾದ ನಂತರ ಅದರ ನಿರ್ಮಾಣಕ್ಕೆ ತೆಗೆದುಕೊಂಡ ಸಮಯ ಸುಮಾರು ಆರು ದಶಕಗಳು. ಇಲ್ಲಿ ನಡೆಯುವ ವೈಕುಂಠ ಸಂಭ್ರಮಾಚರಣೆಯನ್ನ ಹೇಳಲು ಸಾಧ್ಯವಿಲ್ಲ. ಸಾಧ್ಯವಿದ್ದರೆ ಒಂದು ಬಾರಿ ಹೋಗಿ ನೋಡಿಕೊಂಡು ಬನ್ನಿ. ಈ ದೇವಾಲಯವನ್ನು ನೋಡಿ ನಿಮ್ಮ ಕಣ್ಣುಗಳನ್ನು ತುಂಬಿಕೊಳ್ಳಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!