ಸರ್ಕಾರಿ ಎಂಜಿನಿಯರ್ ಕೆಲಸ ಬಿಟ್ಟು ಕೃಷಿಯಲ್ಲಿ ಸಾಧನೆ ಮಾಡಿದ ಯುವಕ
ಈಗಿನ ಕಾಲದಲ್ಲಿ ಯಾರನ್ನೇ ನೋಡಿದರೂ ನಾನು ಮುಂದೆ ಡಾಕ್ಟರ್ ಎಂಜಿನಿಯರ್ ಆಗ್ತೀವಿ ಅಂತ ಹೇಳ್ತಾರೆ. ಹೀಗೆ ಹೇಳಿ ಹೇಳಿ ಮನೆಗೊಬ್ಬ ಡಾಕ್ಟರ್ ಎಂಜಿನಿಯರ್ ಆಗಿರ್ತಾರೆ. ಹೀಗಿರುವಾಗ ಇಲ್ಲೊಬ್ಬ ಹರೀಶ್ ಎಂಬ ಯುವಕ ತನ್ನ ಗವರ್ನಮೆಂಟ್ ಎಂಜಿನಿಯರ್ ಕೆಲಸಕ್ಕೆ ರಾಜೀನಾಮೆ ನೀಡಿ ಈಗ ವರ್ಷಕ್ಕೆ ಎರಡು ಕೋಟಿ ಆದಾಯ ಗಳಿಸುತ್ತಾರೆ ಇದ್ದಾರೆ. ಎಲ್ಲರೂ ಅಯ್ಯೋ ಗವರ್ನಮೆಂಟ್ ಎಂಜಿನಿಯರ್ ಕೆಲಸ ಬಿಡ್ತಾರಾ ಅಂತ ಎಷ್ಟೇ ಹೇಳಿದರೂ ಯಾರ ಮಾತನ್ನು ಕೇಳದೇ ನಾನು ನಂಗೆ ಇಷ್ಟ ಆದ ಕೆಲಸವನ್ನೇ ಮಾಡುತ್ತೇನೆ ಅಂತ ಹೇಳಿ ಹಠಕ್ಕೆ ಬಿದ್ದು ಪಕ್ಕಾ ಕೃಷಿಕನಾಗಿ ಅಲೋವೆರಾ ಮತ್ತು ಇತರೆ ಬೆಳೆಗಳನ್ನು ಬೆಳೆದು ವರ್ಷಕ್ಕೆ ಸುಮಾರು ಒಂದೂವರೆಯಿಂದ ಎರಡು ಕೋಟಿ ಆದಾಯ ಗಳಿಸುತ್ತಾರೆ .
ಹರೀಶ್ ಧಾಂಡೇವಿ ಮೂಲತಃ ರಾಜಸ್ಥಾನದವರು. ಇವರು ದೆಹಲಿಯಲ್ಲಿ ನಡೆದ ಕೃಷಿ ವಸ್ತು ಪ್ರದರ್ಶನದಲ್ಲಿ ಒಮ್ಮೆ ಭಾಗವಹಿಸುತ್ತಾರೆ. ಈ ಕೃಷಿ ವಸ್ತು ಪ್ರದರ್ಶನ ಅವರ ಬದುಕಿನ ದಿಕ್ಕನ್ನೇ ಬದಲಾಯಿಸಿತು. ಸರ್ಕಾರಿ ನೌಕರಿಗೆ ರಾಜೀನಾಮೆ ನೀಡಿದ ಹರೀಶ್ ಪಕ್ಕಾ ಕೃಷಿಕರಾಗಲು ಸಜ್ಜಾದರು. ಸುಮಾರು ನೂರಾ ಇಪ್ಪತ್ತು ಎಕರೆ ಜಮೀನಿನಲ್ಲಿ ಅಲೋವೆರಾ ಮತ್ತು ಇತರೆ ಬೆಳೆಗಳನ್ನು ಬೆಳೆದು ಸೈ ಎನಿಸಿಕೊಂಡಿದ್ದಾರೆ. ಹರೀಶ್ ಅವರು ಕೃಷಿಯಿಂದ ವರ್ಷಕ್ಕೆ ಸುಮಾರು ಎರಡು ಕೋಟಿಯಷ್ಟು ವಹಿವಾಟು ಮಾಡುತ್ತಾರೆ. ಅಷ್ಟೇ ಅಲ್ಲದೆ ಅವರು ತಮ್ಮದೇ ಸ್ವಂತ ಕಂಪನಿಯನ್ನು ಸಹ ಪ್ರಾರಂಭಿಸಿದರು. ರಾಜಸ್ಥಾನದ ಜೈಸಲ್ ಮೇರ್ ನಿಂದ ೪೫ ಕೆ. ಮೀ. ದೂರದಲ್ಲಿರುವ ಧೈಸರ್ ನಲ್ಲಿ ನ್ಯೂಟ್ರೇನೋ ಆಗ್ರೋ ಎಂಬ ಕಂಪನಿಯನ್ನು ಆರಂಭಿಸುತ್ತಾರೆ.

ಥಾರ್ ಮರಭೂಮಿಯಲ್ಲಿ ಇವರು ಬೆಳೆದ ಅಲೋವೆರಾ ಇಂದು ಪ್ರಸಿದ್ಧ ಪತಂಜಲಿ ಕಂಪನಿಗೆ ಭಾರಿ ಪ್ರಮಾಣದಲ್ಲಿ ಪೂರೈಕೆ ಆಗುತ್ತಿದೆ. ಇದರಿಂದ ಪತಂಜಲಿ ಅಲೋವೆರಾ ಜ್ಯೂಸ್ ಅನ್ನು ತಯಾರಿಸುತ್ತಾ ಇದೆ. ಇಲ್ಲಿ ಬೆಳೆದ ಅಲೋವೆರಾ ಒಳ್ಳೆಯ ಗುಣಮಟ್ಟದ್ದಾಗಿರುವುದರಿಂದ ಇವುಗಳಿಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಊಟಣ ಬೇಡಿಕೆ ಇದೆ. ಹರೀಶ್ ಅವರು ಬೆಳೆದ ಅಲೋವೆರಾ ಉತ್ತಮ ಗುಣಮಟ್ಟದ್ದಾಗಿರುವುದರಿಂದ ಪತಂಜಲಿ ಕಂಪನಿ ಕೂಡಲೇ ಎಲೋವೆರ ಎಲೆಗಳಿಗೆ ಬೇಡಿಕೆ ಇಟ್ಟಿದ್ದು ಈಗ ಅಲ್ಲಿಂದಲೇ ಎಲೋವೆರಗಳನ್ನ ಖರೀದಿ ಮಾಡಲಾಗುತ್ತಿದೆ. ಹರೀಶ್ ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದರು. ಜೈಸಾಲ್ ಮೇರ್ ಮುನ್ಸಿಪಲ್ ಕೌನ್ಸಿಲನಲ್ಲಿ ಜ್ಯೂನಿಯರ್ ಇಂಜಿನಿಯರ್ ನೌಕರಿ ಕೂಡ ದೊರಕಿತ್ತು. ಆದರೆ ಸರ್ಕಾರಿ ನೌಕರಿ ಇದ್ದರೂ ಸಹ ಮಣ್ಣಿನ ಕಡೆ ಗಮನ ಸೆಳೆದಿತ್ತು. ಅವರಿಗೆ ಎಲ್ಲಾ ಸೌಕರ್ಯಗಳಿರುವ ಸ್ವಂತ ಜಮೀನು ಇತ್ತು ಆದರೆ ಯಾವುದೇ ಐಡಿಯಾ ಇರಲಿಲ್ಲ. ಕೊನೆಗೆ ದೆಹಲಿಯ ವಸ್ತು ಪ್ರದರ್ಶನ ವೀಕ್ಷಿಸಿ ಬಂದ ಬಳಿಕ ತಾನೂ ಸಹ ಅಲೋವೆರಾ ಮತ್ತು ನೆಲ್ಲಿಕಾಯಿಯನ್ನು ಬೆಳೆಯಬೇಕು ಎಂದು ನಿರ್ಧಾರ ಮಾಡಿದರು.
ಸಾಮಾನ್ಯವಾಗಿ ಮರುಭೂಮಿಯಲ್ಲಿ ಜೋಳ, ಗೋಧಿ, ಹೆಸರು ಬೆಳೆ , ಸಾಸಿವೆ ಮುಂತಾದ ಬೆಳೆಗಳನ್ನು ಬೆಳೆಯುತ್ತಾರೆ. ಆದರೆ ತಾವು ಹೊಸದನ್ನು ಏನನ್ನಾದರು ಬೆಳೆಯಬೇಕು ಎಂದು ತೀರ್ಮಾನ ಮಾಡಿದರು. ಇವರು ಬೇಬಿ ಡೆನಿಸ್ ಎಂಬ ಅಲೋವೆರಾ ಬೆಳೆದರು. ಇವು ಅತ್ಯಂತ ಗುಣ ಮಟ್ಟದ ಎಲೆಗಳಾಗಿದ್ದು ಬ್ರೆಜಿಲ್, ಅಮೆರಿಕಾದಲ್ಲಿ ಭಾರಿ ಬೇಡಿಕೆ ಇದೆ. ಆರಂಭದಲ್ಲಿ ಹರೀಶ್ ೮೦೦೦೦ ಅಲೋವೆರಾ ಗಳನ್ನು ಬೆಳೆಸಿದರು ಈಗ ಅವುಗಳ ಸಂಖ್ಯೆ ೭ ಲಕ್ಷದಷ್ಟು ಆಗಿದೆ. ಕಳೆದ ನಾಲ್ಕು ತಿಂಗಳಲ್ಲಿ ಸುಮಾರು ೧೨೫ ರಿಂದ ೧೫೦ ಟನ್ ಗಳಷ್ಟು ಅಲೋವೆರಾ ಗಳನ್ನೂ ಹರಿದ್ವಾರದಲ್ಲಿ ಇರುವ ಪತಂಜಲಿ ಕಾರ್ಖಾನೆಗೆ ಪೂರೈಸಿದ್ದಾರೆ. ಒಟ್ಟಾರೆ ಸರ್ಕಾರಿ ನೌಕರಿ ಬಿಟ್ಟು ಅಪ್ಪಟ ರೈತನಾದ ಹರೀಶ್ ಯಶಸ್ವಿ ರೈತ ಎನಿಸಿಕೊಂಡಿದ್ದಾರೆ. ಇವರ ಈ ಕೆಲಸ ಎಲ್ಲರಿಗೂ ಸ್ಫೂರ್ತಿಯಾಗಲಿ.