ನಾಲಿಗೆ ಮೇಲಿನ ಗುಳ್ಳೆ ನಿವಾರಣೆಗೆ ಸುಲಭ ಪರಿಹಾರ

0 43

ನಾಲಿಗೆಯ ಮೇಲೆ ಕೆಲವೊಮ್ಮೆ ಗುಳ್ಳೆಗಳು ಆಗುತ್ತವೆ. ಇದು ದೇಹದಲ್ಲಿ ಉಷ್ಣತೆ ಹೆಚ್ಚಾಗುವುದರಿಂದ ಆಗುತ್ತದೆ. ಇದರಿಂದ ನಾಲಿಗೆಗೆ ಯಾವುದೇ ರೀತಿಯ ಉಪ್ಪು, ಹುಳಿ ಮತ್ತು ಖಾರಗಳನ್ನು ಸೇವನೆ ಮಾಡಲು ಆಗುವುದಿಲ್ಲ. ನಾಲಿಗೆಯು ಇವುಗಳು ತಾಗಿದಾಗ ಉರಿಯುತ್ತದೆ. ಇದಕ್ಕೆ ಅನೇಕ ಮನೆಮದ್ದುಗಳು ಇವೆ. ಅಂತಹ ಸುಲಭದ ಪರಿಹಾರದ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ನಾಲಿಗೆಯ ಮೇಲೆ ಗುಳ್ಳೆಗಳು ಬಿಸಿ ಬಿಸಿಯಾದ ಪದಾರ್ಥ ಸೇವನೆ ಮಾಡುವುದರಿಂದ ಕೂಡ ಆಗುತ್ತದೆ. ಕೆಲವರು ಯಾವುದಾದರೂ ಇಷ್ಟವಾದ ಆಹಾರ ಪದಾರ್ಥ ಎದುರಿಗೆ ಇದ್ದರೆ ಬಾಯಲ್ಲಿ ನೀರು ಬಂದು ಸೇವನೆ ಮಾಡುತ್ತಾರೆ. ಇದರಿಂದ ನಾಲಿಗೆ ಸುಟ್ಟು ಹೋಗುತ್ತದೆ. ಹಾಗೆಯೇ ನಾಲಿಗೆ ಕೆಲವೊಮ್ಮೆ ನಮಗೆ ತಿಳಿಯದೇ ಕಚ್ಚು ಬಿಡುತ್ತದೆ. ಇದರಿಂದ ಸಹ ನೋವಾಗುತ್ತದೆ. ಹಾಗೆಯೇ ಅಲರ್ಜಿ, ಆಹಾರದಲ್ಲಿ ಏರುಪೇರು, ಮಧುಮೇಹ ಇದ್ದಾಗ ಇಂಥ ಸಮಯದಲ್ಲಿ ಇವು ಆಗುತ್ತವೆ.

ನಾಲಿಗೆಯ ಮೇಲೆ ಗುಳ್ಳೆ ಆದರೆ ಅತ್ಯಂತ ಕಿರಿಕಿರಿ ಅನಿಸುತ್ತದೆ. ಇದು ಸುಮಾರು ಒಂದು ವಾರದವರೆಗೆ ಹಾಗೆಯೇ ಇರುತ್ತದೆ. ನಂತರದಲ್ಲಿ ಕಡಿಮೆಯಾಗುತ್ತಾ ಹೋಗುತ್ತದೆ. ಹಾಗೆಯೇ ನಮ್ಮ ದೇಹದಲ್ಲಿ ಅತಿ ಬೇಗ ಗುಣವಾಗುವ ಭಾಗ ಎಂದರೆ ಅದು ನಾಲಿಗೆ ಮಾತ್ರ. ಉಪ್ಪು ಎಲ್ಲರ ಮನೆಯಲ್ಲಿ ಇರುತ್ತದೆ. ಇದಿಲ್ಲದೆ ದಿನವೇ ಕಳೆಯುವುದಿಲ್ಲ. ಏಕೆಂದರೆ ಅಡುಗೆಗೆ ಉಪ್ಪು ಇಲ್ಲದಿದ್ದರೆ ರುಚಿಯೇ ಇರುವುದಿಲ್ಲ. ಹಾಗಾಗಿ ಒಂದು ಚಮಚ ಉಪ್ಪನ್ನು ತೆಗೆದುಕೊಂಡು ಒಂದು ಲೋಟ ಬಿಸಿನೀರಿಗೆ ಹಾಕಿ 30ಸೆಕೆಂಡ್ ಗಳ ಕಾಲ ಬಾಯಿ ಮುಕ್ಕಳಿಸಬೇಕು.

ದಿನಕ್ಕೆ ಐದು ಬಾರಿ ಇದನ್ನು ಮಾಡಿದರೆ ಒಳ್ಳೆಯ ಫಲಿತಾಂಶ ದೊರೆಯುತ್ತದೆ. ಹಾಗೆಯೇ ಅಡುಗೆ ಸೋಡಾ ಬಳಸಿ ಉಪ್ಪುನೀರಿನ ಹಾಗೆ ಮಾಡಬೇಕು. ಇದನ್ನು ಸಹ 30 ಸೆಕೆಂಡ್ ಗಳ ಕಾಲ ಬಾಯಿಯಲ್ಲಿ ಇಟ್ಟುಕೊಳ್ಳಬೇಕು. ಇದನ್ನು ಸಹ ದಿನಕ್ಕೆ 2 ಬಾರಿಯಾದರೂ ಮಾಡಬೇಕು. ಇದರಿಂದ ಕೂಡ ನಾಲಿಗೆಯ ಗುಳ್ಳೆ ಕಡಿಮೆಯಾಗುತ್ತದೆ. ಹಾಗೆಯೇ ದೇಹವನ್ನು ಸ್ವಲ್ಪ ತಂಪಾಗಿ ಇಟ್ಟುಕೊಳ್ಳಬೇಕು. ಊಟದ ಕೊನೆಯಲ್ಲಿ ಮಜ್ಜಿಗೆಯನ್ನು ಸೇವನೆ ಮಾಡಬೇಕು. ಏಕೆಂದರೆ ಇದು ದೇಹವನ್ನು ತಂಪಾಗಿಡುತ್ತದೆ.

Leave A Reply

Your email address will not be published.