ಧ್ರುವ ಸರ್ಜಾ ಸರ್ಜಾ ಕುಟುಂಬದ ಒಂದು ಕುಡಿ ಆಗಿದ್ದಾರೆ. ಇವರ ಪ್ರೀತಿಯ ಸಹೋದರ ಚಿರಂಜೀವಿ ಸರ್ಜಾ ಆಗಿದ್ದರು. ಆದರೆ ಈಗ ಅವರು ಇಲ್ಲ. ಇವರಿಬ್ಬರೂ ಬಹಳ ಅನ್ಯೋನ್ಯವಾಗಿ ಇದ್ದರು. ತಮ್ಮ ಪ್ರೀತಿಯ ಸಹೋದರನನ್ನು ಕಳೆದುಕೊಂಡು ತುಂಬಾ ನೋವು ಪಟ್ಟಿದ್ದಾರೆ. ಆದರೆ ಈಗ ಅವರಿಗೆ ಸ್ವಲ್ಪ ಸಂತೋಷವಿದೆ. ಅದೇನೆಂದರೆ ಚಿರಂಜೀವಿ ಸರ್ಜಾರ ಪುತ್ರ ಮೇಘನಾ ರಾಜ್ ಅವರ ಹೊಟ್ಟೆಯಲ್ಲಿ ಜನಿಸಿದ್ದಾರೆ. ಆದರೆ ಇಲ್ಲಿ ನಾವು ಧ್ರುವ ಸರ್ಜಾ ಅವರು ತಮ್ಮ ಪತ್ನಿಯ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಧ್ರುವ ಸರ್ಜಾ ಇವರು ಕನ್ನಡ ಚಿತ್ರರಂಗದಲ್ಲಿ ಒಬ್ಬ ನಾಯಕ ನಟನಾಗಿ ಹೊರ ಹೊಮ್ಮಿದ್ದಾರೆ. ತಮ್ಮ ಒಂದು ಅಮೋಘವಾದ ನಟನೆಯಿಂದ 2012ರಲ್ಲಿ ಒಂದು ಸಿನೆಮಾದಲ್ಲಿ ಕಾಣಿಸಿಕೊಂಡರು. ಆ ಸಿನೆಮಾ ಆಗ ಬಹಳ ಹೆಸರು ಮಾಡಿತ್ತು. ಅದರ ಹೆಸರು ಅದ್ದೂರಿ. ಇದರಲ್ಲಿ ಧ್ರುವ ಸರ್ಜಾ ರಾಧಿಕಾ ಪಂಡಿತ್ ಅವರ ಜೊತೆ ನಟಿಸಿದ್ದಾರೆ. ಈ ಸಿನಿಮಾಕ್ಕೆ ಪ್ರಶಸ್ತಿ ಸಹ ಸಂದಿದೆ. ಅರ್ಜುನ್ ಸರ್ಜಾ ಯಾರಿಗೆ ತಿಳಿದಿಲ್ಲ. ಅರ್ಜುನ್ ಸರ್ಜಾ ಅವರು ಕೂಡ ತುಂಬಾ ಒಳ್ಳೆಯ ನಟರಾಗಿದ್ದಾರೆ.

ಹಾಗೆಯೇ ಇವರು ಅರ್ಜುನ್ ಸರ್ಜಾ ಅವರ ಅಕ್ಕನ ಮಗನಾಗಿದ್ದಾರೆ. ಹಾಗೆಯೇ ಧ್ರುವ ಸರ್ಜಾ ಅವರು 2013ರಲ್ಲಿ ಬಹದ್ದೂರ್ ಎಂಬ ಸಿನಿಮಾಕ್ಕೆ ಸಹಿ ಹಾಕಿದರು. ಹಾಗೆಯೇ ಇದಕ್ಕೂ ಸಹ ರಾಧಿಕಾ ಪಂಡಿತ್ ಅವರೇ ನಾಯಕ ನಟಿಯಾಗಿ ಪಾತ್ರ ಮಾಡಿದ್ದಾರೆ. ಈ ಸಿನೆಮಾ 2014ರಲ್ಲಿ ತೆರೆಗೆ ಬಂದಿತು. ಹಾಗೆಯೇ ನಂತರದಲ್ಲಿ ಕೆಲವು ಸಿನೆಮಾಗಳನ್ನು ಮಾಡಿದರು. ಈಗ ಪೊಗರು ಎಂಬ ಸಿನಿಮಾಕ್ಕೆ ಸಹಿ ಹಾಕಿದ್ದಾರೆ. ಇದರ ಶೂಟಿಂಗ್ ಸಹ ಅಂತಿಮ ಹಂತದಲ್ಲಿ ಇದೆ. ಇದರಲ್ಲಿ ಚಂದನ್ ಶೆಟ್ಟಿಯ ಒಂದು ಹಾಡು ಬಹಳ ಹೆಸರು ಮಾಡುತ್ತಿದೆ.

ಹಾಗೆಯೇ ಧ್ರುವ ಸರ್ಜಾ ಅವರು ಪ್ರೇರಣಾ ಎನ್ನುವವರನ್ನು ವಿವಾಹವಾಗಿದ್ದಾರೆ. ಈಗ ಸ್ವಲ್ಪ ದಿನಗಳ ಹಿಂದೆ ಪ್ರೇರಣಾ ಅವರ ಹುಟ್ಟುಹಬ್ಬ ಇತ್ತು. ಧ್ರುವ ಸರ್ಜಾ ಅವರು ತುಂಬಾ ವಿಜೃಂಭಣೆಯಿಂದ ಆಚರಣೆ ಮಾಡಿದರು. ಅವರು ಮಾಡಿಸಿದ ಅಲಂಕಾರವನ್ನು ನೋಡಲು ಎರಡು ಕಣ್ಣು ಸಾಲದು. ಹಾಗೆಯೇ ಇಬ್ಬರೂ ಬಿಳಿ ಬಣ್ಣದ ಬಟ್ಟೆಯನ್ನು ಹಾಕಿದ್ದರು. ಇಬ್ಬರೇ ಸೇರಿ ಕೇಕ್ ಕಟ್ ಮಾಡಿದರು. ಈ ಜೋಡಿ ನೂರು ವರ್ಷ ಸುಖವಾಗಿ ಬಾಳಲಿ ಎಂದು ನಾವೆಲ್ಲರೂ ಹಾರೈಸೋಣ.

Leave a Reply

Your email address will not be published. Required fields are marked *