ಮೂಲವ್ಯಾಧಿ ಸಮಸ್ಯೆಗೆ ಶಾಶ್ವತ ಪರಿಹಾರ

0 9

ಮೂಲವ್ಯಾಧಿ ಇದೊಂದು ಕೆಟ್ಟ ರೋಗ. ಇದು ಬಂದಮೇಲೆ ಅದನ್ನ ಪರಿಹರಿಸಿಕೊಳ್ಳುವುದು ತುಂಬಾಕಷ್ಟ. ಈಗ ಸಾಮನ್ಯವಾಗಿ ಎಲ್ಲರಿಗೂ ಕಂಡುಬರುತ್ತದೆ. ಮೊದಲೆಲ್ಲ ಐವತ್ತು ಮತ್ತು ಅರವತ್ತು ವರ್ಷ ವಯಸ್ಸಿನವರಿಗೆ ಕಾಣಿಸಿಕೊಳ್ಳುತ್ತಿತ್ತು. ಈಗ ಹಾಗಲ್ಲ ಚಿಕ್ಕ ವಯಸ್ಸಿನವರಿಗೂ ಸಹ ಮೂಲವ್ಯಾಧಿ ಕಾಣಿಸಿಕೊಳ್ಳುತ್ತಿದೆ. ಈ ಮೂಲವ್ಯಾಧಿ ಹೇಗೆ ಬರುತ್ತವೆ ಅದನ್ನು ಹೇಗೆ ಪರಿಹಾರ ಮಾಡಿಕೊಳ್ಳುವುದು ಎನ್ನುವುದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಮೂಲವ್ಯಾಧಿ ಹೇಗೆ ಪ್ರಾರಂಭವಾಗುತ್ತದೆ ಎಂದು ಎಲ್ಲರಿಗೂ ತಿಳಿದಿರುವುದಿಲ್ಲ. ಅದಕ್ಕೆ ಕಾರಣಗಳು ಯಾವುದು ಎಂದರೆ ಅತಿಯಾದ ಭಾರಹೊರುವುದು, ಹಾಗೆಯೇ ತುಂಬಾಹೊತ್ತು ಕುಳಿತುಕೊಂಡು  ಕೆಲಸಮಾಡುವುದು, ಮತ್ತು ನಾರಿನ ಪದಾರ್ಥಗಳನ್ನು ಸೇವನೆಮಾಡದೇ ಇರುವುದು. ಹಾಗೆಯೇ ಹೊರಗಿನ ತಿಂಡಿಗಳನ್ನು ತಿನ್ನುವುದು. ಇದರಿಂದ ದೇಹಕ್ಕೆ ತಂಪಿನ ಅಂಶ ಇರುವುದಿಲ್ಲ. ನಮ್ಮ ದೇಹದಲ್ಲಿ ಬೊಜ್ಜಿನಅಂಶ ಜಾಸ್ತಿ ಆಗುತ್ತದೆ. ಇದರಿಂದ ದೇಹದಲ್ಲಿನ ರೋಗ ನಿರೋಧಕ ಶಕ್ತಿ ಕಡಿಮೆ ಆಗಿ ರೋಗದಿಂದ ನರಳುವ ಪರಿಸ್ಥಿತಿ ಎದುರಾಗುತ್ತದೆ.

ಮೂಲವ್ಯಾಧಿಯಲ್ಲಿ ವಿಧಗಳಿವೆ. ಅವುಗಳೆಂದರೆ ರಕ್ತ ಮೂಲವ್ಯಾಧಿ ಮತ್ತು ಮೊಳೆ ಮೂಲವ್ಯಾಧಿ. ರಕ್ತ ಮೂಲವ್ಯಾಧಿ ಎಂದರೆ ಮಲವಿಸರ್ಜನೆಯನ್ನು ಮಾಡುವಾಗ ಅದರಜೊತೆ ರಕ್ತಸ್ರಾವ ಉಂಟಾಗುವುದು. ತುಂಬಾ ಉರಿ ಮತ್ತು ನೋವು ಕಾಣಿಸಿಕೊಳ್ಳುತ್ತದೆ. ಹಾಗೆಯೇ ಕುಳಿತು ಕೊಳ್ಳಲು ಸಾಧ್ಯವಾಗುವುದಿಲ್ಲ. ಅಷ್ಟು ಕಷ್ಟವಾಗುತ್ತದೆ. ಇನ್ನು ಮೊಳೆ ಮೂಲವ್ಯಾಧಿ ಇದು ಆದರೆ ರಕ್ತದ ಚಿಕ್ಕ ಚಿಕ್ಕ ತುಂಡುಗಳಾಗಿ ಹೋಗುತ್ತದೆ. ಇದರಿಂದಲೂ ಸಹ ತುಂಬಾ ಉರಿಯುವುದು ನೋವು ಉಂಟಾಗುತ್ತದೆ. ಒಂದು ಗ್ಲಾಸಿನಲ್ಲಿ ನೀರನ್ನು ತೆಗೆದುಕೊಂಡು ಅದಕ್ಕೆ ಒಂದು ಚಮಚ ಕಾಮಕಸ್ತೂರಿ ಬೀಜವನ್ನು ಹಾಕಿ  ಅದಕ್ಕೆ ಎರಡು ಚಮಚ ಕೆಂಪುಕಲ್ಲುಸಕ್ಕರೆ  ಹಾಕಿ ಸರಿಯಾಗಿ ಕಲಸಿ ರಾತ್ರಿ ನೆನೆಸಿಡಬೇಕು.

ಬೆಳಿಗ್ಗೆ ಎದ್ದು ಹಲ್ಲುಜ್ಜಿದನಂತರ ಖಾಲಿ ಹೊಟ್ಟೆಯಲ್ಲಿ ಅದನ್ನು ಕುಡಿಯಬೇಕು. ಇದರಿಂದ ದೇಹ ತಂಪಾಗಿರುತ್ತದೆ. ಇದರಿಂದ ಮೂಲವ್ಯಾಧಿ ಸಹ ಕಡಿಮೆಯಾಗುತ್ತದೆ. ಬೇಸಿಗೆಯಲ್ಲಿ ಇದನ್ನು ಮಾಡಿ ಕುಡಿದರೆ ದೇಹಕ್ಕೆ ತುಂಬಾ ಒಳ್ಳೆಯದು. ಹಾಗೆಯೇ ಇನ್ನೊಂದು ಮನೆಮದ್ದು ಎಂದರೆ ಗ್ಲಾಸಿನಲ್ಲಿ ನೀರನ್ನು ತೆಗೆದುಕೊಂಡು ಅದಕ್ಕೆ ಒಣದ್ರಾಕ್ಷಿ ಮತ್ತು ಎರಡು ಚಮಚ ಕೆಂಪುಕಲ್ಲುಸಕ್ಕರೆ ಹಾಕಿ ರಾತ್ರಿಯಿಡಿ ನೆನೆಸಿಟ್ಟು ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಕುಡಿಯಬೇಕು. ಹಾಗೆಯೇ ಮೂಲಂಗಿ ಸೊಪ್ಪಿನ ಪಲ್ಯ ತಿನ್ನಬೇಕು. ಮೂಲಂಗಿಯನ್ನು ಸಣ್ಣದಾಗಿ ಕಟ್ ಮಾಡಿ ಅದಕ್ಕೆ ಮೊಸರು ಸ್ವಲ್ಪ ಉಪ್ಪು, ಸಾಸಿವೆ, ಜೀರಿಗೆ ಹಾಕಿ ಒಗ್ಗರಣೆ ಮಾಡಿಕೊಂಡು ತಿಂದರೆ ಮೂಲವ್ಯಾಧಿ ನಿವಾರಣೆಗೆ ಸಹಾಯವಾಗುತ್ತದೆ.

Leave A Reply

Your email address will not be published.