ರತನ್ ಟಾಟಾ. ವಿಶ್ವದ ಅತೀ ನಿಪುಣರು ಹಾಗೂ ಶ್ರೀಮಂತರಲ್ಲಿ ಇವರೂ ಸಹ ಒಬ್ಬರು. ಯಾವುದೇ ಸಮಸ್ಯೆ ಬಂದರೂ ಸಹ ತಟ್ಟನೆ ಬಗೆಹರಿಸುವ ಚಾಣಾಕ್ಷ. ಇತ್ತೀಚಿಗೆ ದೇಶ ಕರೊನ ವಿರುದ್ಧ ಹೋರಾಡಲು 500ಕೋಟಿ ರೂಪಾಯಿ ಕೊಟ್ಟ ರತನ್ ಟಾಟಾ ಅವರು ದೇಶದ ವಿಷಯಕ್ಕೆ ಬಂದರೆ ಯಾವುದೇ ಕಾರಣಕ್ಕೂ ಹಿಂದೆ ಮುಂದೆ ನೋಡುವುದಿಲ್ಲ. ದೇಶಕ್ಕೆ ಯಾವುದೇ ಕೆಟ್ಟ ಸಂದರ್ಭ ಬಂದರೂ ಸಹ ದೇಶಕ್ಕಾಗಿ ತನ್ನ ಇಡೀ ಆಸ್ತಿಯನ್ನೇ ಕೊಡುತ್ತೆನೆ ಎಂದು ಎಲ್ಲರೂ ಶಾಕ್ ಆಗುವಂತೆ ಮಾಡಿದ ಮಹಾನ್ ವ್ಯಕ್ತಿ ಇವರು. ಈಗಾಗಲೇ ಎಲ್ಲರ ಮನದಲ್ಲೂ ಗೌರವ ಪಡೆದಿರುವ ರತನ್ ಟಾಟಾ ಅವರ ಬೆಸ್ಟ್ ಫ್ರೆಂಡ್ ಒಬ್ಬರ ಬಗ್ಗೆ ನಮಗೆ ತಿಳಿದರೆ ಟಾಟಾ ಅವರ ಮೇಲಿನ ಗೌರವ ಮತ್ತಷ್ಟು ಹೆಚ್ಚುತ್ತದೆ. ರತನ್ ಟಾಟಾ ಅವರ ಆ ಸ್ನೇಹಿತ ಯಾರು ಎಂಬುದರ ಬಗ್ಗೆ ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಈ ಒಬ್ಬ ಹುಡುಗನ ಹೆಸರು ಶಾಂತನು. ಇಂಜಿನಿಯರಿಂಗ್ ಮುಗಿಸಿದ ಈತ ಟಾಟಾ ಗ್ರೂಪ್ ನಲ್ಲಿ ಕೆಲಸಕ್ಕೆ ಸೇರಿದ. ಒಂದು ದಿನ ರಾತ್ರಿ ಕೆಲಸ ಮುಗಿಸಿ ಶಾಂತನು ರೋಡಿನ ಪಕ್ಕದಲ್ಲಿ ನಡೆದುಕೊಂಡು ಹೋಗುವಾಗ ಕಾರಿನ ಚಕ್ರಕ್ಕೆ ಸಿಕ್ಕ ಒಂದು ನಾಯಿ ಸಾವನ್ನಪ್ಪಿದ್ದನ್ನು ಕಂಡ. ಆಗ ಆಘಾತಗೊಂಡ ಶಾಂತನು ನಾಯಿಯನ್ನು ಪಕ್ಕಕ್ಕೆ ಸರಿಸಲು ಪ್ರಯತ್ನ ಪಟ್ಟ. ಅದೇ ಸಮಯದಲ್ಲಿ ಇವನ ಪಕ್ಕದಲ್ಲಿಯೇ ಇನ್ನೊಂದು ಕಾರ್ ಬಹಳ ವೇಗವಾಗಿ ಹೋಯಿತು. ನಾಯಿಗಳು ಹೀಗೆ ವಾಹನಗಳ ಚಕ್ರಕ್ಕೆ ಸಿಕ್ಕು ಸಾಯಬಾರದು ಇದಕ್ಕೆ ಏನಾದರೂ ಮಾಡಲೇಬೇಕು ಎಂದುಕೊಂಡ ಶಾಂತನು ತನ್ನ ಸ್ನೇಹಿತರ ಜೊತೆ ಇದರ ಬಗ್ಗೆ ಚರ್ಚಿಸಿದ. ತನ್ನ ಸ್ನೇಹಿತರ ಜೊತೆ ಚರ್ಚಿಸಿದ ನಂತರ ರಿಫ್ಲೆಕ್ಟರ್ ಕಾಲರ್ ಬೆಲ್ಟ್ ಅನ್ನು ತಯಾರಿಸಿ ಆ ಬೆಲ್ಟ್ ಅನ್ನು ಕಂಡ ಕಂಡ ನಾಯಿಗಳ ಕೊರಳಿಗೆ ಹಾಕಿದ. ಈ ಬೆಲ್ಟ್ ಅನ್ನು ನಾಯಿಯ ಕೊರಳಿಗೆ ಹಾಕುವುದರಿಂದ ನಾಯಿಗಳು ರಸ್ತೆ ದಾಟುವುತ್ತಿರುವಾಗ ಮಧ್ಯೆ ಬಂದರೆ ವಾಹನ ಸವಾರರಿಗೆ ಈ ಬೆಲ್ಟ್ ರಿಫ್ಲೆಕ್ಟ್ ಆಗುವ ಹಾಗೆ ತಯಾರಿಸಲಾಗಿತ್ತು. ಇದರಿಂದ ನಾಯಿಗಳ ಮೇಲೆ ವಾಹನಗಳು ಚಲಾಯಿಸದಂತೆ ಹೋಗಬಹುದು.

ಶಾಂತನು ಮಾಡಿದ ಈ ಬೆಲ್ಟ್ ಉಪಾಯ ಎಕಾ ಏಕೀ ಬಹಳಷ್ಟು ಸುದ್ಧಿ ಮಾಡಿತು. ಇದರಿಂದ ನುರಾರು ಜನರು ಶಾಂತನು ಬಳಿ ತಮಗೂ ಸಹ ಈ ರಿಫ್ಲೆಕ್ಟಿಂಗ್ ಬೆಲ್ಟ್ ಬೇಕು ಎಂದು ಕೇಳಲು ಆರಂಭಿಸಿದರು. ಆದರೆ ಆಗ ಅಷ್ಟೋಂದು ಬೆಲ್ಟ್ ತಯಾರಿಸಲು ಬೇಕಾದ ಬಂಡವಾಳ ಶಾಂತನು ಬಳಿ ಇರಲಿಲ್ಲ. ಇದನ್ನು ತಿಳಿದ ಶಾಂತನು ಅವರ ತಂದೆ ರತನ್ ಟಾಟಾ ಅವರಿಗೆ ಒಂದು ಪತ್ರ ಬರೆಯುವಂತೆ ಸೂಚಿಸಿದ್ದರು. ಆದರೆ ತನ್ನ ಪತ್ರವನ್ನು ಟಾಟಾ ಅವರು ಎಲ್ಲಿ ನೋಡುತ್ತಾರೆ ಎಂದು ಶಾಂತನು ಪತ್ರ ಬರೆಯಲು ಮುಂದಾಗಲಿಲ್ಲ. ಆದರೂ ಒಂದು ದಿನ ಹೀಗೆ ಇರಲಿ ಎಂದು ಒಂದು ಪತ್ರವನ್ನು ಬರೆದು ರತನ್ ಟಾಟಾ ಅವರಿಗೆ ಕಳುಹಿಸಿದ. ಎರಡು ತಿಂಗಳ ನಂತರ ಶಾಂತನು ಗೆ ದೊಡ್ಡ ಆಶ್ಚರ್ಯ ಕಾದಿತ್ತು. ಟಾಟಾ ಅವರು ಶಾಂತನುಗೆ ತನ್ನನ್ನು ಆಫೀಸ್ ನಲ್ಲಿ ಭೇಟಿ ಮಾಡಲು ಅವನ ಪಾತ್ರಕ್ಕೆ ಉತ್ತರವಾಗಿ ಬರೆದಿದ್ದರು. ಅವರ ಮಾತಿನಂತೆ ಒಂದು ದಿನ ಮುಂಬೈ ಆಫೀಸ್ ನಲ್ಲಿ ಟಾಟಾ ಅವರನ್ನು ಶಾಂತನು ಭೇಟಿ ಮಾಡಿದ. ಆಗ ಈ ಹುಡುಗನ ಕೆಲಸಕ್ಕೆ ಬಹಳಷ್ಟು ಮೆಚ್ಚುಗೆ ವ್ಯಕ್ತ ಪಡಿಸಿದ ಟಾಟಾ ಅವರು ನಿನ್ನ ಕೆಲಸಕ್ಕೆ ತಾನು ಬೆಂಬಲ ನೀಡುವುದಾಗಿ ಸೂಚಿಸಿದರು.

ಈ ಸಮಯದಲ್ಲೇ ಶಾಂತನು ಹಾಗೂ ರತನ್ ಟಾಟಾ ಅವರ ಮಧ್ಯೆ ಒಂದು ಸ್ನೇಹ ಸಂಬಂಧ ಬೆಳೆಯಿತು. ಶಾಂತನು ಉನ್ನತ ವಿದ್ಯಾಭ್ಯಾಸಕ್ಕಾಗಿ ಹೋಗಬೇಕಾದ ಕಾರಣ ರತನ್ ಟಾಟಾ ಅವರಿಂದ ದೂರ ಇರಬೇಕಾಯಿತು. ಇಲ್ಲಿ ಇನ್ನೊಂದು ಆಶ್ಚರ್ಯದ ವಿಷಯ ಎಂದರೆ ಶಾಂತನು ಓದುತ್ತಿದ್ದಲ್ಲಿ ಬಂದು ಭೇಟಿ ಕೊಟ್ಟಿದ್ದು ಟಾಟಾ ಅವರು ಶಾಂತನು ಗೆ ಕೊಟ್ಟ ಮರೆಯಲಾಗದ ಕಾಣಿಕೆಯಂತೆ ಆಗಿತ್ತು. ವಿದ್ಯಾಭ್ಯಾಸ ಮುಗಿಸಿ ಬಂದ ಶಾಂತನುನನ್ನು ತನ್ನ ಆಫೀಸ್ ಗೆ ಕರೆಸಿಕೊಂಡ ಟಾಟಾ ಅವರು ತನಗೆ ತುಂಬಾ ಕೆಲಸಗಳು ಇವೆ ಹಾಗಾಗಿ ನೀನು ತನ್ನ ಅಸ್ಸಿಸ್ಟಂಟ್ ಆಗಿ ಕೆಲಸಕ್ಕೆ ಸೇರುವುದಾಗಿ ಕೇಳಿದರು. ಸಂತೋಷ ತಾಳದ ಶಾಂತನು ಇದಕ್ಕಿಂತ ದೊಡ್ಡ ಅದೃಷ್ಟ ಬೇರೆ ಏನಿದೆ ಎಂದು ತಿಳಿದು ರತನ್ ಟಾಟಾ ಅವರ ಬಳಿ ಅವರ ಅಸ್ಸಿಸ್ಟಂಟ್ ಆಗಿ ಕೆಲಸಕ್ಕೆ ಸೇರಿಕೊಳ್ಳುತ್ತಾನೆ. ಅಲ್ಲಿಂದ ಇವರ ಸ್ನೇಹ ಮತ್ತಷ್ಟು ಬೆಳೆಯಿತು. ಈಗ ರತನ್ ಟಾಟಾ ಅವರ ಮೀಟಿಂಗ್ ಎಲ್ಲವನ್ನೂ ಫಿಕ್ಸ್ ಮಾಡುವ ಶಾಂತನು ಈಗ ಅವರು ಮಾಡಬೇಕಾದ ಕೆಲಸವನ್ನು ಸಹ ನಿರ್ಧಾರ ಮಾಡುತ್ತಾನೆ.

ಕೆಲಸ ಮುಗಿದ ನಂತರ ಇಬ್ಬರೂ ಉತ್ತಮ ಸ್ನೇಹಿತರ ಹಾಗೆಯೇ ಒಟ್ಟಿಗೇ ಕುಳಿತು ಟಿವಿ ಶೋಗಳನ್ನು ನೋಡುತ್ತಾರೆ. ಇಬ್ಬರೂ ಸಾಕಷ್ಟು ವಿಷಯಗಳ ಬಗ್ಗೆ ಚರ್ಚೆ ಮಾಡುತ್ತಾರೆ. ಶಾಂತನು ರತನ್ ಟಾಟಾ ಅವರನ್ನು ತನ್ನ ಸುಪರ್ ಮ್ಯಾನ್ ಎಂದು ಹೇಳುತ್ತಾನೆ. ಹೀಗೆ ಒಬ್ಬ ಸಾಮಾನ್ಯ ಹುಡುಗನ ಜೀವನವನ್ನೇ ರತನ್ ಟಾಟಾ ಅವರು ಬದಲಾಯಿಸಿದ್ದಾರೆ. ಇಲ್ಲಿ ರತನ್ ಟಾಟಾ ಅವರ ನಿಷ್ಕಲ್ಮಶ ಹಾಗೂ ಒಳ್ಳೆಯ ಹೃದಯ ಶ್ರೀಮಂತಿಕೆ ನಮಗೆ ತಿಳಿಯುತ್ತದೆ. ಜೀವನದಲ್ಲಿ ಒಂದು ಚಿಕ್ಕ ಆಲೋಚನೆ ಹೇಗೆ ತಿರುವು ತಂದು ನಮ್ಮ ಜೀವನವನ್ನೇ ಬದಲಿಸಬಹುದು ಎಂಬುದಕ್ಕೆ ಶಾಂತನು ಒಂದು ಉದಾಹರಣೆ ಆಗಿದ್ದಾನೆ.

By

Leave a Reply

Your email address will not be published. Required fields are marked *