ಸಾಸಿವೆ ಅನ್ನೋದು ಹಿಂದಿನ ಕಾಲದಿಂದಲೂ ಕೂಡ ಇದು ಬಳಕೆಯಲ್ಲಿದೆ, ಸಾಸಿವೆ ಅಡುಗೆಗೆ ಹಾಗೂ ಹಲವು ಬೇನೆಗಳ ನಿವಾರಣೆಗೆ ಮನೆಮದ್ದಾಗಿ ಬಳಸಲಾಗುತ್ತದೆ. ಸಾಸಿವೆ ಕೆಲವ ಅಡುಗೆ ಪದಾರ್ಥವಾಗದೆ. ಹಲವು ದೈಹಿಕ ಸಮಸ್ಯೆಗಳಿಗೆ ಪರಿಹಾರ ನೀಡುವಂತ ಕೆಲಸ ಮಾಡುತ್ತದೆ. ಸಾಸಿವೆ ಅಷ್ಟೇ ಅಲ್ದೆ ಇದರ ಎಣ್ಣೆ ಕೂಡ ಬಳಕೆಯಲ್ಲಿದೆ.

ಶೀತದಿಂದ ಕಫ ಆಗಿ ಉಸಿರಾಡಲು ತೊಂದರೆ ಆಗುತ್ತಿದ್ರೆ ಸಾಸಿವೆ ಎಣ್ಣೆಯನ್ನು ಬಳಸಿ ಪರಿಹಾರ ಕಂಡುಕೊಳ್ಳಬಹುದಾಗಿದೆ. ಹೌದು ಕಫ ಹೆಚ್ಚಾದ್ರೆ ಎದೆಯಲ್ಲಿ ಉಸಿರಾಡೋದು ಕಷ್ಟವಾಗುತ್ತದೆ. ಇದಕ್ಕೆ ಸಾಸಿವೆ ಎಣ್ಣೆಯನ್ನು ಬಿಸಿ ಮಾಡಿ ಎದೆ ಮತ್ತು ಬೆನ್ನಿಗೆ ಮಸಾಜ್‌ ಮಾಡಿದರೆ ಕಫ ಕರಗಿ ದಮ್ಮು, ಕೆಮ್ಮು ಶಮನವಾಗುತ್ತದೆ. ಇದರಿಂದ ಸುಲಭವಾಗಿ ಉಸಿರಾಡಬಹುದು.

ಸ್ನಾಯು ಸೆಳೆತ ನಿವಾರಣೆಗೆ : ಒಂದು ಚಮಚ ಹಳದಿ ಸಾಸಿವೆ ಪೇಸ್ಟ್‌ ಅನ್ನು ಸೇವಿಸಿ ಆಮೇಲೆ ಬಿಸಿ ನೀರು ಕುಡಿದರೆ ಸ್ನಾಯು ಸೆಳೆತ ನಿವಾರಣೆಯಾಗುತ್ತದೆ. ಅಲ್ಲದೆ ಕಾಲಿನ ಪಾದಗಳು ಏನಾದ್ರು ನೋವು ಆಗುತಿದ್ರೆ ಸಾಸಿವೆ ಪುಡಿಯನ್ನು ಬಿಸಿ ನೀರಲ್ಲಿ ಕಲಸಿ ಆ ನೀರಲ್ಲಿ ಎರಡು ಕಾಲುಗಳನ್ನು ಇಟ್ಟುಕೊಂಡರೆ ನೋವು ಬೇಗ ಕಡಿಮೆಯಾಗುತ್ತದೆ.

ಕೆಲವರಲ್ಲಿ ಮಂಡಿ ನೋವು ತುಂಬಾನೇ ನೋವು ಕೊಡುತ್ತಿರುತ್ತದೆ ಅಂತವರಿಗೆ ಈ ಮನೆಮದ್ದು ಉಪಯೋಗಕಾರಿ ಮಂಡಿ ನೋವಿಗೆ ಈ ರೀತಿಯಾಗಿ ಮಾಡಿದ್ರೆ ಉತ್ತಮ. ಒಂದು ಕಪ್‌ ಸಾಸಿವೆಯನ್ನು ಬಿಸಿ ನೀರಲ್ಲಿ ಕಲಸಿ ಬಟ್ಟೆ ಮೇಲೆ ಲೇಪಿಸಿ ಅದನ್ನು ನೋವಿರುವ ಮಂಡಿಗಳಿಗೆ ಕಟ್ಟಿದರೆ ನೋವು ಬೇಗ ಕಡಿಮೆಯಾಗುವುದು.

ಇನ್ನು ಕೆಲವರಲ್ಲಿ ಚರ್ಮ ಅಲರ್ಜಿಯಾಗಿ ಹುಳುಕಡ್ಡಿ ಸಮಸ್ಯೆ ಕಾಡುತ್ತದೆ ಅಂತವರು ಕರಿ ಸಾಸಿವೆ ಬೀಜವನ್ನು ನೀರಿನೊಂದಿಗೆ ಪೇಸ್ಟ್‌ ಮಾಡಿ ಹುಳುಕಡ್ಡಿ ಆದ ಚರ್ಮದ ಮೇಲೆ ದಿನಕ್ಕೆ 3 ರಿಂದ 4 ಬಾರಿ ಲೇಪಿಸಿದರೆ ಹುಳುಕಡ್ಡಿ ಸಮಸ್ಯೆ ನಿವಾರಣೆಯಾಗುತ್ತದೆ. ನಿಮಗೆ ಈ ಮೇಲೆ ತಿಳಿಸಿದಂತ ಆರೋಗ್ಯಕಾರಿ ಮನೆಮದ್ದುಗಳು ಇಷ್ಟವಾದಲ್ಲಿ ಷೇರ್ ಹಾಕು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ ಬೇರೆಯವರಿಗೂ ಉಪಯೋಗವಾಗಲಿ

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!