ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಬಹಳಷ್ಟು ಜನ ಹಲವು ಕಸರತ್ತು ಮಾಡುತ್ತಾರೆ, ಆದ್ರೆ ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ವಿಚಾರ ಏನು ಅಂದ್ರೆ ದೇಹದ ತೂಕವನ್ನು ನಾವುಗಳು ತಿನ್ನುವಂತ ಆಹಾರದ ಮೂಲಕವೂ ಕೂಡ ಕಡಿಮೆ ಮಾಡಿಕೊಳ್ಳಬಹುದು. ಹೌದು ಹೆಚ್ಚಾಗಿ ಜಂಕ್ ಫುಡ್ ಸೇವನೆ ಮಾಡುವ ಬದಲು ಹಸಿ ತರಕಾರಿ ಹಾಗೂ ಕೆಲವೊಂದು ಮಸಾಲೆ ಪದಾರ್ಥ ಬಳಸಿ ಮನೆಮದ್ದಿನ ರೀತಿಯಲ್ಲಿ ತಯಾರಿಸಿ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಸಹಕಾರಿಯಾಗುತ್ತದೆ. ಇದರಿಂದ ದೇಹದ ಮೇಲೆ ಯಾವುದೇ ಅಡ್ಡ ಪರಿಣಾಮ ಇರೋದಿಲ್ಲ.

ಮಸಾಲೆ ಟೀ ಅನ್ನೋದು ಕೆಲವೊಂದು ಟೀ ಸ್ಟಾಲ್ ಗಳಲ್ಲಿ ಸಿಗುತ್ತೆ ಆದ್ರೆ, ನೀವುಗಳು ಮನೆಯಲ್ಲೇ ಇದನ್ನು ತಯಾರಿಸಬೇಕು ಎಂಬುದಾಗಿ ಬಯಸಿದರೆ ಅದನ್ನು ಹೇಗೆ ತಯಾರಿಸಬೇಕು ಅನ್ನೋದನ್ನ ಈ ಮೂಲಕ ತಿಳಿಯೋಣ. ಬೇಕಾಗುವ ಪದಾರ್ಥಗಳು ದಾಲ್ಚಿನ್ನಿ, ಲವಂಗ, ಕಾಳು ಮೆಣಸು, ಜೀರಿಗೆ, ಏಲಕ್ಕಿ, ಇವುಗಳನ್ನು ಬಳಸಿ ಮಸಾಲಾ ಟೀ ಮಾಡಬಹುದಾಗಿದೆ.

ಈ ಮಸಾಲಾ ಟೀ ಕುಡಿಯುವುದರಿಂದ ಅಜೀರ್ಣತೆ ಸಮಸ್ಯೆ ಹಾಗೂ ಶೀತ, ಗಂಟಲು ನೋವು ನಿವಾರಣೆಗೆ ಸಹಕಾರಿಯಾಗಿದೆ. ಆರೋಗ್ಯಕರ ಗುಣಗಳನ್ನು ಹೊಂದಿರುವಂತ ಟೀ ಮಾಡುವಾಗ ಅಗತ್ಯಕ್ಕೆ ತಕ್ಕಂತೆ ಸಕ್ಕರೆ ಅಥವಾ ಜೇನನ್ನು ಸೇರಿಸುವುದು ಇನ್ನೂ ಉತ್ತಮ. ಅದರಲ್ಲೂ ಸಕ್ಕರೆಯ ಬದಲು ಜೇನು ಉಪಯೋಗಿಸುವುದು ಇನ್ನಷ್ಟು ಒಳ್ಳಯದು ಎನ್ನಲಾಗುತ್ತದೆ. ಒಂದು ಚಮಚ ಜೇನು 64 ಕ್ಯಾಲೋರಿ ಹೊಂದಿರುತ್ತದೆ. ಸಕ್ಕರೆಯಲ್ಲಿ 49 ಕ್ಯಾಲೋರಿ ಇರುತ್ತದೆ.

ಮಸಾಲಾ ಟೀ ಮಾಡೋದು ಹೇಗೆ ಅನ್ನೋದನ್ನ ನೋಡುವುದಾದರೆ. ಸ್ವಲ್ಪ ಜೀರಿಗೆ, ಕರಿಮೆಣಸು, ಏಲಕ್ಕಿ, ದಾಲ್ಚಿನ್ನಿಯನ್ನು ಸಣ್ಣ ಬೆಂಕಿಯಲ್ಲಿ ಫ್ರೈ ಮಾಡಿಕೊಳ್ಳಬೇಕು. ನಂತರ ಎರಡು ನಿಮಿಷ ರೋಸ್ಟ್‌ ಮಾಡಿದ ಬಳಿಕ ದಾಲ್ಚಿನ್ನಿ ಸ್ಟಿಕ್‌ ಸೇರಿಸಿ, ಮತ್ತೆ ಕೆಲವು ನಿಮಿಷಗಳ ನಂತರ ರೋಸ್ಟ್‌ ಮಾಡಿ. ಇದಕ್ಕೆ ಸ್ವಲ್ಪ ಶುಂಠಿ ಪೌಡರ್‌ ಸೇರಿಸಿ. ಇದನ್ನು ಚೆನ್ನಾಗಿ ಬೆರೆಸಿ, ತಣ್ಣಗಾಗಲು ಬಿಟ್ಟು ಬಿಡಿ.

ಇದಾದ ಬಳಿಕ ಅರ್ಧ ಚಮಚದಷ್ಟು ಈ ಮಸಾಲ ಮಿಕ್ಸ್‌ನ್ನು ಟೀ ಗೆ ಸೇರಿಸಿ ಕುಡಿಯಬಹುದು ಆಗಾಗ ಮಸಾಲಾ ಟೀ ಮಾಡಿ ಕುಡಿಯುವುದರಿಂದ ದೇಹಕ್ಕೆ ಉತ್ತಮ ಪ್ರಯೋಜನವಿದೆ. ಒಮ್ಮೊಮ್ಮೆ ಇದನ್ನು ಮಾಡುತ್ತೀರಿ ಉತ್ತಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ ನಿಮಗೆ ಮಾಹಿತಿ ಇಷ್ಟವಾದಲ್ಲಿ ಷೇರ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.

By

Leave a Reply

Your email address will not be published. Required fields are marked *