ನಿದ್ರೆ ಕಾಯಿಲೆಗೆ ಪರಿಹಾರ ನೀಡುವ ಸುಲಭ ಮಾರ್ಗ ಒಮ್ಮೆ ಟ್ರೈ ಮಾಡಿ

0 9

ನಿದ್ರಾಹೀನತೆ ಸಮಸ್ಯೆ ಅನ್ನೋದು ಕೆಲವರಲ್ಲಿ ಹೆಚ್ಚಾಗಿ ಕಾಡುತ್ತಿರುತ್ತದೆ. ಈ ಸಮಸ್ಯೆಗೆ ನಾನಾ ರೀತಿಯ ಔಷಧಿ ಮಾತ್ರೆ ಮಾರುಕಟ್ಟೆಯಲ್ಲಿ ಸಿಗುತ್ತದೆ ಆದ್ರೆ, ಅವುಗಳಿಂದ ಶರೀರದ ಮೇಲೆ ಹಲವು ರೀತಿಯ ಅಡ್ಡ ಪರಿಣಾಮ ಬೀರಬಹುದು. ಹಾಗಾಗಿ ಮನೆಯಲ್ಲಿ ಸುಲಭವಾಗಿ ತಯಾರಿಸಿ ಈ ಮನೆಮದ್ದು ಹಾಗೂ ಈ ಸುಲಭ ಮಾರ್ಗವನ್ನು ಅನುಸರಿಸಿ ನಿದ್ರಾಹೀನತೆ ಸಮಸ್ಯೆಯಿಂದ ದೂರ ಇರಿ.

ಕೆಲವರಿಗೆ ಮಾನಸಿಕ ಒತ್ತಡ ಹಾಗೂ ದೈಹಿಕ ಒತ್ತಡ ಸಮಸ್ಯೆ ಇರೋದ್ರಿಂದ ರಾತ್ರಿ ಸಮಯದಲ್ಲಿ ಸರಿಯಾಗಿ ನಿದ್ರೆ ಬರೋದಿಲ್ಲ ಹಾಗಾಗಿ ಈ ಒತ್ತಡ ಸಮಸ್ಯೆ ನಿವಾರಿಸಲು ನೀವು ಮಲಗುವ ಮುನ್ನ ರಾತ್ರಿ ನೀವು ಮಲಗುವಾಗ ನಿದ್ರೆ ಚನ್ನಾಗಿ ಆಗುತ್ತದೆ. ನಿದ್ದೆ ಮಾಡುವುದಕ್ಕೂ ಎರಡು ಗಂಟೆ ಮುನ್ನ ಬೆಚ್ಚಗಿನ ನೀರಲ್ಲಿ ಸ್ನಾನ ಮಾಡಿದರೆ ಉತ್ತಮ.

ಮತ್ತೊಂದು ಸುಲಭ ವಿಧಾನ ಏನು ಅಂದ್ರೆ, ಮಲಗುವ ಮುನ್ನ ಕಾಲಿನ ಪಾದಗಳಿಗೆ ಕೊಬ್ಬರಿ ಎಣ್ಣೆ ಅಥವಾ ಎಳ್ಳೆಣ್ಣೆಯಿಂದ 10 ರಿಂದ 20 ನಿಮಿಷ ಮಸಾಜ್ ಮಾಡಿ ನಂತರ ಮಲಗುವುದರಿಂದ ಒತ್ತಡ ನಿವಾರಣೆಯಾಗಿ ದೇಹ ಹಾಗೂ ಮನಸ್ಸು ಎರಡು ಕೂಡ ಶಾಂತ ರೀತಿಯಲ್ಲಿರುತ್ತದೆ. ಇದರಿಂದ ನೀವು ಚನ್ನಾಗಿ ನಿದ್ರೆ ಮಾಡಬಹುದು.

ಎರಡನೇ ವಿಧಾನ: ನೀವು ಮಲಗುವ ಮುನ್ನ ಒಂದು ಗ್ಲಾಸ್ ಬೆಚ್ಚಗಿ ಹಾಲಿನಲ್ಲಿ ಒಂದು ಚಮಚ ಜೇನುತುಪ್ಪವನ್ನು ಹಾಕಿ ಸೇವನೆ ಮಾಡುವುದರಿಂದ ರಾತ್ರಿ ನಿದ್ರೆ ಉತ್ತಮ ರೀತಿಯಲ್ಲಿರುತ್ತದೆ. ಹಾಲಿನಲ್ಲಿರುವ ಟ್ರಿಪ್ಟೋಫಾನ್ ಅಮೈನೋ ಆ್ಯಸಿಡ್ ನೈಸರ್ಗಿಕವಾಗಿ ನಿದ್ದೆ ಬರಿಸುವ ಮದ್ದಾಗಿ ಕೆಲಸ ಮಾಡುತ್ತದೆ. ಆದ್ದರಿಂದ ಈ ಸುಲಭ ವಿಧಾನವನ್ನು ಮಾಡಿ ದೇಹಕ್ಕೆ ಉತ್ತಮ ಅರೋಗ್ಯ ವೃದ್ಧಿಸಿಕೊಳ್ಳಿ.

Leave A Reply

Your email address will not be published.