ಚರ್ಮರೋಗ ಸೇರಿದಂತೆ ಹತ್ತಕ್ಕೂ ಹೆಚ್ಚು ಬೇನೆಗಳಿಗೆ ಮನೆಮದ್ದು ಈ ಸಸ್ಯ

0 127

ನಮ್ಮ ಸುತ್ತ ಮುತ್ತಲೂ ನಾವು ಹಲವಾರು ಚಿಕ್ಕ ಪುಟ್ಟ ಸಸ್ಯಗಳನ್ನು ನೋಡಿರುತ್ತೇವೆ. ನಮ್ಮ ಗಾರ್ಡನ್ ಗಳಲ್ಲಿ ಸಹ ನಾವು ಹಲವಾರು ಕಳೆ ರೀತಿಯಲ್ಲಿ ಇರುವಂತಹ ಗಿಡಗಳನ್ನು ನೋಡಿರುತ್ತೇವೆ. ಆದರೆ ಅದರಿಂದ ಆಗುವ ಉಪಯೋಗಗಳ ಬಗ್ಗೆ ನಮಗೆ ತಿಳಿದಿರುವುದಿಲ್ಲ. ಉದಾಹರಣೆಗೆ ತುಂಬೆ ಗಿಡ. ತುಂಬೆ ಗಿಡಗಳನ್ನ ನಾವು ಸಾಮಾನ್ಯವಾಗಿ ಗಾರ್ಡನ್, ರಸ್ತೆ ಬದಿಯಲ್ಲಿ ಕಳೆಯ ರೀತಿ ಬೆಳೆದಿರುವುದನ್ನ ನೋಡುತ್ತೇವೆ. ನಾವು ಅದನ್ನ ನೋಡಿದರೂ ಕೆಲವು ಸಲ ಅದರ ಬಗ್ಗೆ ಹೆಚ್ಚು ಯೋಚನೆ ಮಾಡುವುದಿಲ್ಲ. ಇದೆ ರೀತಿ ನಮಗೆ ತಿಳಿಯದೇ ಇರುವ ಎಷ್ಟೋ ಔಷಧೀಯ ಗುಣಗಳು ಇರುವ ಗಿಡಗಳು ಇವೆ. ಅಂತಹ ಗಿಡಗಳ ಬಗ್ಗೆ ಲೇಖನದ ಮೂಲಕ ತಿಳಿದುಕೊಳ್ಳೋಣ.

ತುಂಬೆ ಹೂವನ್ನು ರುದ್ರ ಪುಷ್ಪ, ದ್ರೋಣ ಪುಷ್ಪ ಎಂದೂ ಸಹ ಕರೆಯುತ್ತಾರೆ. ಇದು ಶಿವನಿಗೆ ಬಹಳಷ್ಟು ಪ್ರಿಯವಾದ ಹೂವು ಎಂದೇ ಹೇಳಬಹುದು. ಯಾಕೆಂದರೆ ಶಿವನು ವಿಷವನ್ನು ಕುಡಿದಾಗ ಆ ವಿಷವನ್ನು ಕಡಿಮೆ ಮಾಡುವ ಸಲುವಾಗಿ ಪಾರ್ವತಿದೇವಿ ಈ ತುಂಬೆ ಗಿಡದ ಹೂವನ್ನು ಬಳಸಿ ವಿಷವನ್ನು ಕಡಿಮೆ ಮಾಡಿರುತ್ತಾಳೆ. ಈ ಕಾರಣಕ್ಕೆ ಇದು ಔಷಧೀಯ ಗುಣಗಳನ್ನು ಹೊಂದಿದೆ. ತುಂಬೆ ಗಿಡದಲ್ಲಿ ಹಲವಾರು ಆಯುರ್ವೇದದ ನಾಟಿ ಅಂಶಗಳು ಸೇರಿವೆ. ಹಾಗಾಗಿ ಇದು ಬಹಳಷ್ಟು ಉಪಯೋಗಕಾರಿ. ತುಂಬೆ ಗಿಡದ ಉಪಯೋಗಗಳನ್ನು ನೋಡುವುದಾದರೆ, ಮೊದಲಿಗೆ ಕಾಲು ಅಥವಾ ಮೈ ಕೈ ಅಲ್ಲಿ ಊತ, ನೋವು ಇದ್ದರೆ ತುಂಬೆ ಗಿಡದ ಎಲೆಗಳನ್ನು ನೀರಿಗೆ ಹಾಕಿ ಕುದಿಸಿ ಅದರ ನೀರಿನಿಂದ ನೋವು ಊತ ಇದ್ದ ಜಾಗಕ್ಕೆ ಶಾಖ ಕೊಟ್ಟರೆ ನೋವು ಊತ ಕಡಿಮೆ ಆಗುತ್ತದೆ.

ಕಜ್ಜಿ, ತುರಿಕೆ, ಮೊಡವೆಗಳಂತಹ ಚರ್ಮಕ್ಕೆ ಸಂಬಂಧಿಸಿದ ರೋಗಗಳನ್ನು ನಿವಾರಣೆ ಮಾಡಲು ತುಂಬೆ ಗಿಡ ರಾಮ ಬಾಣ ಎನ್ನಬಹುದು. ಈ ಗಿಡದ ಎಲೆಗಳ ರಸವನ್ನು ಮೈಗೆ ಹಚ್ಚಿ ಸ್ನಾನ ಮಾಡಬಹುದು ಅಥವಾ ನೀರಿಗೆ ತುಂಬೆ ಎಲೆ ಮತ್ತು ಬೇವಿನ ಎಲೆ ಎರಡನ್ನೂ ಹಾಕಿ ಕಾಯಿಸಿ ಆ ನೀರಿನಿಂದ ಸ್ನಾನ ಮಾಡಿದರೆ ಚರ್ಮಕ್ಕೆ ಸಂಬಂಧಿಸಿದ ರೋಗಗಳು ಮಾಯ ಆಗುತ್ತವೆ.

ಒಂದು ಹಿಡಿ ತುಂಬೆ ರಸ ಹಾಗೂ ಒಂದು ಚಮಚ ಜೇನುತುಪ್ಪವನ್ನು ಬೆರೆಸಿ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಶ್ವಾಸಕೋಶ ಸಂಬಂಧಿತ ಕಾಯಿಲೆಗಳು ದೂರವಾಗುತ್ತದೆ. ಕಫ ಕಟ್ಟಿದ್ದರೆ ನಿವಾರಣೆ ಆಗುತ್ತದೆ. ಅಜೀರ್ಣದ ಸಮಸ್ಯೆ ಇದ್ದರೆ, ತುಂಬೆ ಎಲೆಯನ್ನ ನೀರಿಗೆ ಹಾಕಿ ಕುದಿಸಿ ಅದರ ನೀರನ್ನು ಬೆಳಿಗ್ಗೆ ಕುಡಿಯುವುದರಿಂದ ಜೀರ್ಣ ಶಕ್ತಿ ಹೆಚ್ಚಾಗಿ ಅಜೀರ್ಣ ಸಮಸ್ಯೆ ಒಂದು ವಾರದಲ್ಲಿ ಪರಿಹಾರ ಆಗುವುದು.

ಉರಿಗಣ್ಣು ಹಾಗೂ ಕಣ್ಣು ಸದಾ ಕಾಲ ಕೆಂಪು ಆಗಿಯೇ ಇದ್ದರೆ ಅದಕ್ಕೆ ತುಂಬೆ ಎಲೆಯಿಂದ ರಸವನ್ನು ತೆಗೆದು ನೀರು ಅಥವಾ ಹಾಲಿಗೆ ಬೆರೆಸಿ ಮುಖ ತೊಳೆಯುವುದರಿಂದ ಕಣ್ಣಿನ ಉರಿ ಹಾಗೂ ಕೆಂಪು ಕಣ್ಣು ಆಗುವುದರಿಂದ ಸಹ ಮುಕ್ತಿ ಪಡೆಯಬಹುದು. ಅಷ್ಟೇ ಅಲ್ಲದೇ ಮುಖ ಕಾಂತಿಯುತವಾಗಿ ಕಾಣುತ್ತದೆ.

ಇನ್ನು ಹೆಣ್ಣುಮಕ್ಕಳಿಗೆ ತುಂಬೆ ಗಿಡದ ಎಲೆಯನ್ನು ಪೇಸ್ಟ್ ಮಾಡಿ ಅದಕ್ಕೆ ನಿಂಬೆ ಹಣ್ಣಿನ ರಸ ಮತ್ತು ಎಳ್ಳೆಣ್ಣೆಯನ್ನು ಬೆರೆಸಿ ಕುಡಿಯುವುದರಿಂದ ಹೆಣ್ಣುಮಕ್ಕಳಿಗೆ ಹೊಟ್ಟೆನೋವು ಕಡಿಮೆ ಆಗುತ್ತದೆ. ಬೇಸಿಗೆಯಲ್ಲಿ ಅತಿಯಾಗಿ ಬಾಯರಿಕೆಯಿಂದ ಬಳಲುತ್ತಾ ಇದ್ದರೆ ತುಂಬೆ ಹೂವಿನ ಕಷಾಯ ಮಾಡಿ ಕುಡಿದರೆ ದಾಹ ನಿವಾರಣೆ ಆಗುತ್ತದೆ.

ತುಂಬೆ ಹೂವನ್ನು ನೆರಳಿನಲ್ಲಿ ಒಣಗಿಸಿ ಪುಡಿ ಮಾಡಿ ಆಗಾಗ ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ನಮ್ಮ ದೇಹದಲ್ಲಿ ಇರುವಂತಹ ಕೆಟ್ಟ ರಕ್ತ ಕಣಗಳು ಮಾಯವಾಗಿ ಒಳ್ಳೆಯ ರಕ್ತ ಕಣಗಳು ಹುಟ್ಟಿಕೊಳ್ಳುತ್ತವೆ. ಜ್ವರ ಇದ್ದಾಗ ತುಂಬೆ ಹೂವು, ಒಂದೆರಡು ಕಾಳುಮೆಣಸು, ಸೈನ್ದವ ಲವಣ ಹಾಕಿ ಕಷಾಯ ಮಾಡಿ ಕುಡಿಯುವುದರಿಂದ ಜ್ವರ ಕಡಿಮೆ ಆಗುತ್ತದೆ. ಇನ್ನೂ ಹಾವು ಕಚ್ಚಿದ ಜಾಗಕ್ಕೆ ತುಂಬೆ ರಸವನ್ನು ಹಾಕಿ ಕಟ್ಟುವುದರಿಂದ ವಿಷ ಮೇಲಕ್ಕೆ ಏರದಂತೇ ಮಾಡುತ್ತದೆ. ಮನೆಯಲ್ಲಿ ಸೊಳ್ಳೆಗಳ ಕಾಟ ಹೆಚ್ಚಿದ್ದರೆ ತುಂಬೆ ಗಿಡದ ಎಲೆಗಳನ್ನು ಒಣಗಿಸಿ ಅದರಿಂದ ಹೊಗೆ ಹಾಕುವುದರಿಂದ ಸೊಳ್ಳೆಗಳು , ಕೆಟ್ಟ ಕೀಟಗಳು ಮನೆಯ ಬಳಿ ಸುಳಿಯುವುದಿಲ್ಲ. ಇವಿಷ್ಟು ತುಂಬೆ ಗಿಡದ ಉಪಯೋಗಗಗಳು.

Leave A Reply

Your email address will not be published.