ದೇಹಕ್ಕೆ ಅಗತ್ಯವಾಗಿ ಪ್ರೊಟೀನ್ ಹಾಗು ಪೋಷಕಾಂಶ ಭರಿತವಾದ ಆಹಾರಗಳನ್ನು ಸೇವಿಸುವುದು ಸೂಕ್ತವಾಗಿದೆ. ಇನ್ನು ದೇಹದ ಪ್ರತಿ ಅಂಗಾಂಗಗಳು ತುಂಬಾನೇ ಮಹತ್ವವಾಗಿದೆ ಮೆದುಳಿನ ಅರೋಗ್ಯ ವೃದ್ಧಿಸಿಕೊಳ್ಳಲು ಹಾಗು ಚುರುಕಾಗಿರಲು ಇಂತಹ ಆಹಾರಗಳನ್ನು ಸೇವನೆ ಮಾಡುವುದು ಸೂಕ್ತ ಅನ್ನೋದನ್ನ ತಜ್ಞರು ಹೇಳುತ್ತಾರೆ

ಅಷ್ಟಕ್ಕೂ ಮೆದುಳಿನ ಆರೋಗ್ಯಕ್ಕೆ ಸೂಕ್ತವಾದ ಆಹಾರಗಳು ಯಾವುವು ಅನ್ನೋದನ್ನ ಈ ಮೂಲಕ ತಿಳಿಯೋಣ ಮೊದಲನೆಯದಾಗಿ ಹಸಿರು ಸೊಪ್ಪು ತರಕಾರಿಗಳು, ಮೀನು ಮತ್ತು ಮೀನಿನ ಪದಾರ್ಥಗಳು, ಅವಕಾಡೋ, ಕೋಸು ಗಡ್ಡೆ, ಎಣ್ಣೆ ಬೀಜಗಳಾದ – ಅಕ್ರೋಡು, ಬಾದಾಮಿ, ಗೋಡಂಬಿ, ಬೀಟ್‍ರೂಟಗಳು, ಕೊಬ್ಬರಿ ಎಣ್ಣೆ, ನೇರಳೆ ಹಣ್ಣು, ಡಾರ್ಕ ಚಾಕಲೇಟ್‍ಗಳು,

ಅಷ್ಟೇ ಅಲ್ದೆ ಮೊಟ್ಟೆಯ ಹಳದಿ ಭಾಗ, ಅರಿಶಿಣ ಮತ್ತು ಇತರೆ ಪದಾರ್ಥಗಳನ್ನು ಸೇವಿಸುವುದರಿಂದ ಇವುಗಳಲ್ಲಿರುವ ಆರೋಗ್ಯಕರ ಕೊಬ್ಬಿನಾಂಶ, ಪೋಷಕಾಂಶಗಳು, ಜೀವಸತ್ವಗಳು, ಖನಿಜಾಂಶಗಳು ಹಾಗೂ ಇತರೆ ಆಂಟಿ ಆಕ್ಸಿಡಂಟ್‍ಗಳು ನೇರವಾಗಿ ಅಥವಾ ಪರೋಕ್ಷವಾಗಿ ಮೆದುಳಿನ ಬೆಳವಣಿಗೆಗೆ ಸಹಾಯ ಮಾಡುತ್ತವೆ. ಆದ್ದರಿಂದ ನಾನಾ ರೀತಿಯ ಜಂಕ್ ಫುಡ್ ಸೇವನೆ ಬದಲು ಇಂತಹ ಆಹಾರ ಸೇವನೆ ಮಾಡುವುದು ಸೂಕ್ತ. ಹಸಿರು ತರಕಾರಿ, ಮೀನು ಸೇವನೆ ಹಾಗು ಹಣ್ಣು ಡ್ರೈ ಪ್ರೂಟ್ಸ್ ಮುಂತಾದವುಗಳನ್ನು ತಿಂದು ಶರೀರದ ಆರೋಗ್ಯದ ಜೊತೆಗೆ ಮೆದುಳಿನ ಆರೋಗ್ಯವನ್ನು ವೃದ್ಧಿಸಿಕೊಳ್ಳಿ.

Leave a Reply

Your email address will not be published. Required fields are marked *