ಬಿಸಿಲಿಗೆ ಹೆಚ್ಚಾಗಿ ಓಡಾಡುವುದರಿಂದ ಹಾಗೂ ಚಳಿಗಾಲದಲ್ಲಿ ನಮ್ಮ ತುಟಿ ಒಡೆಯುವುದು , ಕಪ್ಪಾಗುವುದು ಹೆಚ್ಚಾಗಿ ಕಂಡುಬರುತ್ತದೆ. ಇದಕ್ಕಾಗಿ ನಮಗೆ ಮಾರ್ಕೆಟ್ ನಲ್ಲಿ ಸಾಕಷ್ಟು ಲಿಪ್ ಬಾಮ್ ಗಳು ಲಭ್ಯ ಇರುತ್ತವೆ. ಆದರೆ ಇವುಗಳಿಂದ ಕೆಲವೊಮ್ಮೆ ಯಾವುದೇ ರೀತಿಯ ಉಪಯೋಗಗಳು ಸಹ ಇರುವುದಿಲ್ಲ. ಅಲ್ಲದೆ ಇವುಗಳಿಂದ ಕೆಲವರಿಗೆ ಬೇರೆ ಏನಾದರೂ ಅಡ್ಡ ಪರಿಣಾಮಗಳೂ ಸಹ ಉಂಟಾಗಬಹುದು. ಹಾಗಾಗಿ ನಾವು ಮನೆಯಲ್ಲಿಯೇ ಸಿಗುವಂತಹ ಪದಾರ್ಥಗಳನ್ನು ಬಳಕೆ ಮಾಡಿಕೊಂಡು ಯಾವುದೇ ಕೆಮಿಕಲ್ಸ್ ಬಳಕೆ ಮಾಡದೆಯೇ ನೈಸರ್ಗಿಕವಾಗಿ ಮನೆಯಲ್ಲಿಯೇ ಲಿಪ್ ಬಾಮ್ ತಯಾರಿಸಿಕೊಳ್ಳಬಹುದು.

ನಾವು ಈ ಲಿಪ್ ಬಾಮ್ ತಯಾರಿಸಲು ಕೇವಲ ಎರಡು ಪದಾರ್ಥಗಳು ಇದ್ದರೆ ಸಾಕು. ನಮಗೆ ಈ ಲಿಪ್ ಬಾಮ್ ತಯಾರಿಸಲು ಮುಖ್ಯವಾಗಿ ಬೇಕಾಗಿರುವುದು ಬೀಟ್ರೂಟ್. ಬೀಟ್ರೂಟ್ ಸಿಪ್ಪೆ ತೆಗೆದು ಚಿಕ್ಕದಾಗಿ ಕಟ್ ಮಾಡಿಕೊಂಡು ಮಿಕ್ಸಿ ಜಾರಿಗೆ ಹಾಕಿ ನೀರು ಸೇರಿಸದೆ ಪೇಸ್ಟ್ ಮಾಡಿಕೊಳ್ಳಬೇಕು. ನಂತರ ಇದನ್ನು ಒಂದು ಚಿಕ್ಕ ಬೌಲ್ ಗೆ ಸೋಸಿಕೊಳ್ಳಬೇಕು. ನಂತರ ಸ್ಟೋವ್ ಮೇಲೆ ಒಂದು ಪ್ಯಾನ್ ಇಟ್ಟು ಬೀಟ್ರೂಟ್ ರಸವನ್ನು ಅದಕ್ಕೆ ಹಾಕಿ ಸಣ್ಣ ಉರಿಯಲ್ಲಿ ಗಟ್ಟಿಯಾಗುವವರೆಗೂ ಕುದಿಸಬೇಕು. ಒಂದು ಟೀ ಚಮಚ ಬೀಟ್ರೂಟ್ ರಸಕ್ಕೆ ಒಂದು ಟೀ ಚಮಚ ಕರಗಿಸಿದ ತುಪ್ಪವನ್ನು ಸೇರಿಸಿ ಎರಡೂ ಚೆನ್ನಾಗಿ ಮಿಕ್ಸ್ ಆಗುವವರೆಗೂ ಮಿಶ್ರಣ ಮಾಡಬೇಕು.

ನಂತರ ಒಂದು ಪುಟ್ಟದಾದ ಗಾಳಿ ಆಡದ ಡಬ್ಬದಲ್ಲಿ ಈ ಮಿಶ್ರಣವನ್ನು ಹಾಕಿ ಮುಚ್ಚಳ ಮುಚ್ಚಿ ಅರ್ಧ ಗಂಟೆ ಅಥವಾ ಒಂದು ಗಂಟೆಯ ಕಾಲ ಫ್ರಿಡ್ಜ್ ನಲ್ಲಿ ಇಡಬೇಕು. ಒಂದು ಗಂಟೆಯ ನಂತರ ನಮ್ಮ ನೈಸರ್ಗಿಕವಾಗಿ ಮನೆಯಲ್ಲಿಯೇ ಮಾಡಿಕೊಂಡ ಲಿಪ್ ಬಾಮ್ ರೆಡಿ ಆಗಿರುತ್ತೆ. ಇದನ್ನು ಮಕ್ಕಳಿಗೂ ಸಹ ಹಚ್ಚಬಹುದು. ಇದನ್ನು ಪ್ರತೀ ದಿನ ಬಳಕೆ ಮಾಡುವುದರಿಂದ ತುಟಿಗಳು ಕೋಮಲವಾಗಿ ಹಾಗೂ ಗುಲಾಬಿ ಬಣ್ಣದಲ್ಲಿ ಇರುತ್ತದೆ.

Leave a Reply

Your email address will not be published. Required fields are marked *