ನಮ್ಮ ಸುತ್ತಮುತ್ತಲಿನಲ್ಲಿಯೇ ಇರುವಂತಹ ಈ ಹೂವಿನ ಬಗ್ಗೆ ಕೇಳಿದರೆ ಆಶ್ಚರ್ಯ ಪಡುವುದು ಖಚಿತ.. ಸದಾಪುಷ್ಪ ಅಥವಾ ನಿತ್ಯ ಪುಷ್ಪ ಎಂದು ಕರೆಯಲ್ಪಡುವ ಈ ಹೂವು ಒಂದು ಔಷಧೀಯ ಗುಣಗಳನ್ನು ಹೊಂದಿರುವ ಸಸ್ಯವಾಗಿದೆ. ಗುಲಾಬಿ ಮಿಶ್ರಿತ ಕೆಂಪು ,ಬಿಳಿ ಬಣ್ಣಗಳಲ್ಲಿ ಇದು ಕಾಣಿಸುತ್ತದೆ. ಎಲ್ಲಾ ಕಾಲಗಳಲ್ಲಿಯೂ ಹೂವು ಬಿಡುವ ಕಾರಣ ನಿತ್ಯ ಪುಷ್ಪವನ್ನು ಸದಾಪುಷ್ಪ ಎಂದೂ ಸಹ ಕರೆಯುತ್ತಾರೆ. ಈ ಗಿಡಮೂಲಿಕೆ ನಮ್ಮ ದೇಶದಲ್ಲ. ಮೇಡಗಾಸ್ಕರ್ ಎಂಬಲ್ಲಿ ಅಲಂಕಾರಿಕ ಪುಷ್ಪಗಳಾಗಿ ಇವುಗಳನ್ನು ಬಳಕೆ ಮಾಡಲಾಗುತ್ತಿತ್ತು. ಕೇವಲ ಅಲಂಕಾರಕ್ಕಾಗಿ ಬೆಳಸಲಾಗುತ್ತಿದ್ದ ಈ ಪುಟ್ಟ ಗಿಡ ಇಂದು ಇಡೀ ದೇಶದಲ್ಲಿ ಚಿರಪರಿಚಿತವಾಗಿದೆ. ಎಲೆಗಳ ಹಸಿರು, ಎದುರುಗಡೆ ತೆಲುಗು ಲಾಬಿ ಕೆಂಪು ಮಿಶ್ರಿತ ಬಿಳಿ ಬಣ್ಣವನ್ನು ಹೊಂದಿರುತ್ತದೆ. ಬಣ್ಣದಲ್ಲಿ ಬೇರೆ-ಬೇರೆ ರೀತಿ ಇದ್ದರು ಸಹ ಗುಣದಲ್ಲಿ ಎಲ್ಲಾ ಬಣ್ಣದ ಹೂವುಗಳು ಒಂದೇ ಆಗಿರುತ್ತದೆ. ಇದರ ಔಷಧೀಯ ಉಪಯೋಗಗಳು ಸಹ ಸಾಕಷ್ಟಿದೆ. ಸದಾಪುಷ್ಪ ಅಥವಾ ನಿತ್ಯಪುಷ್ಪ ಎಂದು ಕರೆಯಲ್ಪಡುವ ಈ ಹೂವಿನ ಗಿಡದ ಔಷಧೀಯ ಗುಣಗಳನ್ನು ಯಾವೆಲ್ಲ ಕಾಯಿಲೆಗಳಿಗೆ ಉಪಯೋಗವಾಗುತ್ತದೆ ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ನಿತ್ಯಪುಷ್ಪ ಗಿಡವು 88 ಬಗ್ಗೆ ಕ್ಷರ ಪದಾರ್ಥಗಳನ್ನು ಹೊಂದಿದೆ. ಸದಾ ಪುಷ್ಪವನ್ನು ಸಂಸ್ಕರಿಸಿ ಕ್ಯಾನ್ಸರ್ ರೋಗಕ್ಕೆ ಔಷಧಿಯಾಗಿ ಬಳಕೆ ಮಾಡಲಾಗುತ್ತದೆ. ನೆಲೆಗಳಲ್ಲಿ ದೊರಕುವ ವಿನ್ಕ್ರಿಸ್ಟಿನ್ ಮತ್ತು ವಿನ್ ಲಾಸ್ಟನಾನ್ ಎಂಬ ರಕ್ತದ ಕ್ಯಾನ್ಸರ್ ನಿವಾರಣೆ ಮಾಡುವ ಗುಣವನ್ನು ಹೊಂದಿರುತ್ತದೆ. ಮಧುಮೇಹ ರೋಗ ನಿಯಂತ್ರಣಕ್ಕಾಗಿ ಸಹ ಈ ಗಿಡ ಮತ್ತು ಹೂವನ್ನು ಬಳಕೆ ಮಾಡಲಾಗುತ್ತದೆ . ಚಿಕ್ಕ ಮಕ್ಕಳ ಹೊಟ್ಟೆ ನೋವು ನಿವಾರಣೆಗಾಗಿ ನಿತ್ಯಪುಷ್ಪ ಹೂವಿನ ಎಲೆಗಳ ರಸವನ್ನು ಬಳಕೆ ಮಾಡಲಾಗುತ್ತದೆ. ರಕ್ತದೊತ್ತಡ ಸಮಸ್ಯೆ ಇದ್ದರೂ ಸಹ ನಿತ್ಯಪುಷ್ಪ ಹೂವನ್ನು ಬಳಕೆ ಮಾಡಲಾಗುತ್ತದೆ. ರಕ್ತದ ಕ್ಯಾನ್ಸರ್ ವ್ಯಾಧಿಯಲ್ಲಿ ಒಂದು ಹಿಡಿ ಎಲೆಗಳನ್ನು ತಂದು ನೆರಳಿನಲ್ಲಿ ಒಣಗಿಸಿ ಚೂರ್ಣ ಮಾಡಿ ಇಟ್ಟುಕೊಂಡು ಅರ್ಧ ಟೀ ಚಮಚ ಚೂರ್ಣವನ್ನು ಒಂದು ಚೊಂಬು ನೀರಿಗೆ ಹಾಕಿ ಕಾಯಿಸಿ ದಿವಸಕ್ಕೆ ಮೂರು ಚಮಚದಷ್ಟು ಬೆಳಗ್ಗೆ ಮತ್ತು ಸಾಯಂಕಾಲ ಕುಡಿಯಬೇಕು. ಹಲವಾರು ರೀತಿಯ ಕ್ಯಾನ್ಸರ್ ಗಳಿಂದ ಮನುಷ್ಯನನ್ನು ಉಳಿಸುವ ಗುಣ ಈ ಗಿಡಕ್ಕೆ ಇದೆ ಎಂದರೆ ಅತಿಶಯೋಕ್ತಿ ಎನಿಸಲಾರದು.

ಸಕ್ಕರೆ ಕಾಯಿಲೆಗೆ ಈ ಗಿಡದ 4 / 5 ಹಸಿರು ಎಲೆಗಳನ್ನು ತಂದು ಸ್ವಚ್ಛವಾಗಿ ತೊಳೆದು ಪ್ರತಿನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಎಲೆಗಳನ್ನು ತಿನ್ನುವುದು ಅಥವಾ ಪುಷ್ಪ ಹೂವುಗಳನ್ನು ಸಹ ಅಗೆದು ತಿಂದರೆ ಸಕ್ಕರೆ ಕಾಯಿಲೆ ನಿವಾರಣೆ ಹೊಂದುತ್ತದೆ. ಒಂದು ಹಿಡಿ ನಿತ್ಯಪುಷ್ಪ ಹೂವನ್ನು ಒಂದು ಬಟ್ಟಲು ನೀರಿಗೆ ಹಾಕಿ ಕಾಲು ಬಟ್ಟಲು ಆಗುವವರೆಗೂ ಕಾಯಿಸಿ ಕಷಾಯ ವನ್ನಾಗಿ ಮಾಡಿಕೊಂಡು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕಷಾಯವನ್ನು ಸೇವಿಸಬೇಕು. ಇದರಿಂದ ಸಹ ಸಕ್ಕರೆ ಕಾಯಿಲೆ ನಿವಾರಣೆ ಆಗುತ್ತದೆ. ನಿತ್ಯ ಪುಷ್ಪವನ್ನು ನೆರಳಿನಲ್ಲಿ ಒಣಗಿಸಿ ಚೂರ್ಣ ಮಾಡಿ ಇಟ್ಟುಕೊಳ್ಳಬೇಕು. 1 ಟೀಚಮಚ ಚೂರ್ಣವನ್ನು ಒಂದು ಬಟ್ಟಲು ನೀರಿಗೆ ಹಾಕಿ ಚೆನ್ನಾಗಿ ಕುದಿಸಿ ಕಷಾಯ ಮಾಡಿಕೊಂಡು ತಣ್ಣಗಾದ ಮೇಲೆ ಅರ್ಧ ಬಟ್ಟಲು ಕಷಾಯವನ್ನು ಸೇವನೆ ಮಾಡುವುದು.

ಈ ಮೂಲಕ ನಿತ್ಯಪುಷ್ಪ ಗಿಡ ಮತ್ತು ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ಸುಟ್ಟ ಗಾಯ ಮತ್ತು ಅದರ ಕಲೆಗಳಿಗೂ ಸಹ ಇದು ಉತ್ತಮ ಔಷಧಿ. ನಿತ್ಯಪುಷ್ಪ ಎಲೆಗಳನ್ನು ತಂದು ಸ್ವಚ್ಛವಾಗಿ ತೊಳೆದು ಅದರ ರಸ ತೆಗೆದು ಅದಕ್ಕೆ ಸ್ವಲ್ಪ ಹಸಿ ಅಕ್ಕಿ ಹಿಟ್ಟನ್ನು ಸೇರಿಸಿ ಮಿಶ್ರಣ ಮಾಡಿ ಗಾಯದಮೇಲೆ ಮಂದವಾಗಿ ಲೇಪಿಸಬೇಕು. ಹೀಗೆ ಮಾಡುವುದರಿಂದ ಸುಟ್ಟಗಾಯ ಹಾಗೂ ಕಲೆಗಳು ಮಾಯವಾಗುವುದು. ಬೇಧಿ ಉಂಟಾಗಿದ್ದಲ್ಲಿ 10ಗ್ರಾಂ ನಿತ್ಯಪುಷ್ಪ ಎಲೆಗಳನ್ನು ಮತ್ತು ಹೂವುಗಳನ್ನು ಸಂಗ್ರಹಿಸಿ ಕಷಾಯಮಾಡಿ ತಣ್ಣಗಾದ ಮೇಲೆ ಕಷಾಯವನ್ನು ಎರಡು ಭಾಗ ಮಾಡಿ ಬೆಳಗ್ಗೆ ಹಾಗೂ ಸಾಯಂಕಾಲ ಸೇವಿಸಬೇಕು.

ಈ ರೀತಿಯಾಗಿ ಐದರಿಂದ ಏಳು ದಿನಗಳ ಕಾಲ ಮಾಡಿದರೆ ಬೇಧಿ ಕಡಿಮೆಯಾಗುವುದು. ಮಲಬದ್ಧತೆಯನ್ನು ನಿವಾರಣೆ ಮಾಡುವ ಗುಣ ಸಹ ಗಿಡಮೂಲಿಕೆಗೆ ಇದೆ. ಏನಾದರೂ ಗಾಯವಾಗಿದ್ದರೆ ಅದರಿಂದ ರಕ್ತಸ್ರಾವವಾಗುತ್ತದೆ ನಿತ್ಯಪುಷ್ಪ ಎಲೆಗಳನ್ನು ತೆಗೆದು ಅದರಿಂದ ರಸತೆಗೆದು ಗಾಯಗಳ ಮೇಲೆ ಹಾಕುವುದರಿಂದ ರಕ್ತಸ್ರಾವ ಕಡಿಮೆಯಾಗಿ ಗಾಯಗಳು ಸಹ ಬೇಗ ನಿವಾರಣೆಯಾಗುತ್ತದೆ. ಪ್ರತಿಯೊಬ್ಬರ ಶರೀರವು ಸಹ ಭಿನ್ನ ಭಿನ್ನವಾಗಿರುತ್ತದೆ ಆದ್ದರಿಂದ ಎಲ್ಲ ಮನೆಮದ್ದುಗಳನ್ನು ಬೆಳಕೆ ಮಾಡುವುದಕ್ಕಿಂತ ಮೊದಲು ಒಮ್ಮೆ ವೈದ್ಯರ ಸಲಹೆಯನ್ನು ಪಡೆದು ಬಳಕೆ ಮಾಡುವುದು ಉತ್ತಮ.

By

Leave a Reply

Your email address will not be published. Required fields are marked *