ಪುರುಷರ ಸಮಸ್ಯೆ ಹೃದಯದ ಖಾಯಿಲೆ ಎಲ್ಲವನ್ನೂ ಉಪಶಮನ ಮಾಡುವ ಗಿಡ

0 14

ಈ ಒಂದು ಗಿಡ ಮನುಷ್ಯನ ನೂರು ರೋಗಗಳನ್ನು ಗುಣ ಮಾಡುತ್ತದೆ. ಕಳೆಗಿಡದಂತೆ ಕಂಡು ಬರುವ ಈ ಸಸ್ಯ ಬಯಲು ಸೀಮೆಯಲ್ಲಿ ಎಲ್ಲೆಂದರಲ್ಲಿ ಕಾಣಸಿಗುತ್ತವೆ. ಅಲ್ಲದೇ ಮಲ್ನಾಡಿನಲ್ಲಿಯೂ ಕಾಣಬಹುದು. ಇದರ ಬಗ್ಗೆ ರಾಮಾಯಣದಲ್ಲೂ ಉಲ್ಲೇಖವಿದೆ. ಹಾಗೆಯೇ ಮಹಾಭಾರತದಲ್ಲಿಯೂ ಕೂಡ. ಗಾಂಧಾರಿ ಎಣ್ಣೆಯಲ್ಲಿ ಈ ಗಿಡವನ್ನು ಬೆರೆಸಿ ಕುದಿಸಿ ಕುರು ಸಾರ್ವಭೌಮನಿಗೆ ಹಚ್ಚುತ್ತಿದ್ದಳಂತೆ ಆದ್ದರಿಂದಲೇ ಆತನ ಶರೀರ ವಜ್ರಕಾಯ ಆಯಿತು ಎಂಬ ನಂಬಿಕೆ ಇದೆ.ಇಷ್ಟಕ್ಕೂ ಈ ಗಿಡ ಯಾವುದು ಇದರ ಪ್ರಯೋಜನ ಏನೆಲ್ಲಾ ಇದೆ ಎಂದು ನೋಡೋಣ.

ರಾಮ ಹಾಗೂ ಲಕ್ಷ್ಮಣರಿಗೆ ಶಸ್ತ್ರ ಹಾಗೂ ಶಾಸ್ತ್ರವಿದ್ಯೆಯನ್ನು ಬೋಧನೆ ಮಾಡುವ ವಿಶ್ವಾಮಿತ್ರ ಮಹರ್ಷಿಗಳು ಬಲ ಮತ್ತು ಅತಿಬಲ ಎಂಬ ಮಂತ್ರವನ್ನು ಹೇಳಿಕೊಡುತ್ತಿರುತ್ತಾರೆ. ಇದನ್ನು ಯಾರು ಕೇಳಿಸಿಕೊಳ್ಳಬಾರದು ಎಂಬ ಉದ್ದೇಶಕ್ಕೆ ಅವರನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಬ್ರಾಹ್ಮಿ ಮಹೂರ್ತದಲ್ಲಿ ಮಂತ್ರೋಪದೇಶ ಮಾಡುತ್ತಾರೆ.ಅದೇ ಸಂದರ್ಭದಲ್ಲಿ ಅಲ್ಲಿ ಬೆಳೆದ 2ಸಸ್ಯಗಳು ಅದನ್ನು ಕೇಳಿಸಿಕೊಳ್ಳುತ್ತವೆ.ಅಲ್ಲದೆ ಕೇಳಿಸಿಕೊಂಡ ತಪ್ಪಿಗಾಗಿ ಕ್ಷಮೆ ಯಾಚಿಸುತ್ತವೆ. ವಿಶ್ವಾಮಿತ್ರರು ನೀವು ಜಗತ್ತಿನಲ್ಲಿ ಎಲ್ಲೇ ಹುಟ್ಟಿದರೂ ಜನಕ್ಕೆ ಬಲ ಹಾಗೂ ಆರೋಗ್ಯವನ್ನು ನೀಡಿ ಎಂದು ಆಶೀರ್ವದಿಸಿದರು.ಆ 2 ಗಿಡಗಳೇ ಬಲ ಮತ್ತು ಅತಿಬಲ.ಇಲ್ಲಿ ಪರಿಚಯಿಸುವ ಗಿಡದ ಹೆಸರೇ ಅತಿಬಲ.

ಇದು ಪುರುಷತ್ವ ಸಮಸ್ಯೆಯಿಂದ ಹೃದಯದ ಖಾಯಿಲೆವರೆಗೂ ಎಲ್ಲವನ್ನೂ ಉಪಶಮನ ಮಾಡುವ ಶಕ್ತಿ ಇದೆ. ಹಳದಿ ಅಥವಾ ಮಿಶ್ರ ಬಣ್ಣದ ಹೂವುಗಳು ಅಂಟು ಅಂಟಾದ ಸಣ್ಣ ರೋಮಗಳು, ಹೃದಯಾಕಾರದ ಎಲೆಗಳನ್ನು ಹೊಂದಿದೆ.ಕಣ್ಣಿನಲ್ಲಿ ಸಮಸ್ಯೆ ಇದ್ದರೆ ಇದರ ಎಲೆಗಳನ್ನು ತೊಳೆದು ನೀರಿನಲ್ಲಿ ಕುದಿಸಿ ಕಷಾಯ ಮಾಡಿ ಕುಡಿದರೆ ದ್ರಷ್ಟಿ ದೋಷ ನಿವಾರಣೆ ಆಗುತ್ತದೆ.ಹಾಗೆಯೇ ಈ ಕಷಾಯವನ್ನು ದಿನಕ್ಕೆ3ಬಾರಿ ಕುಡಿದರೆ ಕಿಡ್ನಿಯ ಕಲ್ಲು ಮೂತ್ರನಾಳದಿಂದ ಹೊರ ಹೋಗುತ್ತದೆ.ಗಾಯವಾಗಿ ರಕ್ತ ಸೋರುತ್ತಿದ್ದರೆ ಇದರ ಎಲೆಯಿಂದ ರಕ್ತ ಸೋರಿಕೆ ನಿಲ್ಲಿಸಬಹುದು.ವಾರಕ್ಕೆ ಎರಡು ಬಾರಿ ಇದನ್ನು ಸೇವಿಸಿದರೆ ಹೃದಯ ಆರೋಗ್ಯದಿಂದ ಕೆಲಸ ಮಾಡುತ್ತದೆ.

ನಾಯಿ ಕಚ್ಚಿದಾಗ ನಂಜು ಏರಿದ ಜಾಗಕ್ಕೆ ಇದನ್ನು ಜಜ್ಜಿ ಹಚ್ಚಿದರೆ ಗಾಯ ಬೇಗ ವಾಸಿಯಾಗುತ್ತದೆ.ಮಕ್ಕಳ ಜಂತುಹುಳುಗಳ ಸಮಸ್ಯೆಗೂ ಇದು ಉಪಶಮನ.ಜ್ವರ ಹಾಗೂ ವಿಷಮ ಶೀತ ಜ್ವರದವರು ಕಷಾಯ ಮಾಡಿ ಕಲ್ಲು ಸಕ್ಕರೆ ಸೇರಿಸಿ ಸೇವಿಸಿದರೆ ಬೇಗ ಉಪಶಮನ ಆಗುತ್ತದೆ.ಕ್ಯೆ ಕಾಲು ಸೆಳೆತ ಇರುವವರು ಇದರ ಸೊಪ್ಪನ್ನು ಅರೆದು ಲೇಪಿಸುವರು.ತುದಿಯಿಂದ ಬೆರಿನವರೆಗೂ ಇದು ಔಷಧಿಗೆ ಬಳಕೆಯಾಗುತ್ತದೆ.ಸಮೂಲಾಗ್ರ ಕಷಾಯವನ್ನು ಹೆಣ್ಣುಮಕ್ಕಳ ದೇಹಪುಷ್ಟಿಗಾಗಿ ನೀಡುವರು.ಉಯ್ಯಾಲೆ ಗೌರಿ ವ್ರತ ಮಾಡುವವರು ಈ ಹೂವುಗಳನ್ನು ಕಾದಿಟ್ಟು ಒಣಗಿಸಿ ಪೂಜೆಗೆ ಬಳಸುವರು.ಗೌರಿಗೆ ತುಂಬಾ ಪ್ರಿಯವಂತೆ ಈ ಹೂ. ಶ್ರೀಮುಡಿ, ತುರುಬೆ ಹೂ ಇತರ ಹೆಸರುಗಳು.ಇಷ್ಟೆಲ್ಲಾ ಪ್ರಯೋಜನ ಇರುವ ಈ ಗಿಡವನ್ನು ಬಳಸಿ ಪ್ರಯೋಜನ ಪಡೆದುಕೊಳ್ಳಿ.

Leave A Reply

Your email address will not be published.