Village in Marriage: ಭಾರತದಂತಹ ವಿವಿಧ ಸಂಸ್ಕೃತಿಗಳ ದೇಶದಲ್ಲಿ (young) ಯುವಜನತೆ ವೈವಾಹಿಕ ಸಂಬಂಧಕ್ಕೆ ಧುಮುಕುವ ಮುನ್ನ ತಮ್ಮ ಜೋಡಿ ಮುಂದಿನ ದಿನಗಳಲ್ಲಿ ಸಮರ್ಪಕವಾಗಬಹುದೆ ಎಂದು ಪ್ರಮಾಣಿಸಿ ನೋಡಿದ ಬಳಿಕವೇ ಮುಂದಡಿ ಇಡುವ ಪರಿಯನ್ನು ನಿಧಾನವಾಗಿ ಅನೆಯಿಸಿಕೊಳ್ಳುತ್ತಿದೆ.ಆದರೆ ರಾಜಸ್ಥಾನದ ಗರಾಸಿಯ ಜನಾಂಗದವರಲ್ಲಿ ಬಹಳ ಹಿಂದಿನಿಂದಲೂ ಈ ಪದ್ಧತಿ ನಡೆದು ಬಂದಿದೆ.

ತಮ್ಮ ವಿಶಿಷ್ಟ ಸಂಪ್ರದಾಯಗಳಿಂದ ಭಾರತದ ಸಂಸ್ಕೃತಿಯಲ್ಲಿ ವೈವಿಧ್ಯ ಸ್ಥಾನ ಪಡೆದಿದೆ ರಾಜಸ್ಥಾನದಲ್ಲಿನ ಗರಾಸಿಯಾ ಎಂಬ ಜನಾಂಗ. ಈ ಜನಾಂಗದವರ ವಿಶೇಷ ಏನೆಂದರೆ ಪುರುಷರು ತಮಗಿಷ್ಟ ಬಂದ ಹುಡುಗಿಯ ಜೊತೆ ಲಿವಿಂಗ್ ರಿಲೇಶನಶಿಪ್ ನಲ್ಲಿ ಇರುವುದಕ್ಕೆ ಯಾರದೇ ಅಭ್ಯಂತರವಿಲ್ಲ ಮಕ್ಕಳನ್ನು ಪಡೆಯಬಹುದಂತೆ

ಇಲ್ಲಿ ಹುಡುಗ ಹುಡುಗಿ ಮದುವೆ ಆಗದಿದ್ದರೂ ಸಂಸಾರ ನಡೆಸಬಹುದಂತೆ ಮದುವೆ ಒಂದು ಆಗಿಲ್ಲ ಅನ್ನುವುದು ಬಿಟ್ಟರೆ ಉಳಿದದ್ದೆಲ್ಲಾ ಗಂಡ ಹೆಂಡತಿ ಅಂತೆ ಇರಬಹುದಂತೆ. ಇದಕ್ಕೆ ಹಿರಿಯರ ಸಮ್ಮತಿಯೂ ಇಲ್ಲಿ ಇದೆಯಂತೆ ಈ ಸಂದರ್ಭದಲ್ಲಿ ಮಕ್ಕಳನ್ನು ಪಡೆಯುವ ಸ್ವಾತಂತ್ರ ಅವರಿಗೆ ಇದೆಯಂತೆ ಮದುವೆಯನ್ನು ಆಮೇಲೆ ಮಾಡಿಕೊಳ್ಳಬಹುದಂತ

ಗರಾಸಿಯಾ ಜನಾಂಗದ ಜನರ ಜೀವನ ಆಚಾರ ವಿಚಾರ ವೇಷಭೂಷಣ ಇತರರಿಗಿಂತ ವಿಭಿನ್ನವಾಗಿರುತ್ತದೆ ಅಂತೆ. ಪುರುಷರು ದೊತಿ ಧರಿಸುತ್ತಾರೆ ತಲೆಗೆ ಟವೆಲ್ ಕಟ್ಟಿಕೊಳ್ಳುತ್ತಾರೆ ಮತ್ತು ಮಹಿಳೆಯರು ಗಾಢ ಬಣ್ಣದ ಬಟ್ಟೆ ಲೆಹೆಂಗಾ ಧರಿಸುತ್ತಾರೆ. ಗರಾಸಿಯಾ ಜನಾಂಗದವರಲ್ಲಿ ಮೂರು ಪ್ರಕಾರದ ವಿವಾಹ ಚಾಲ್ತಿಯಲ್ಲಿದೆ.

ಮೌರ್ ಬಾದಿಯಾ ಈ ವಿವಾಹ ಪದ್ಧತಿಯಲ್ಲಿ ಸಪ್ತ ಪದ್ಧತಿ ಇರುತ್ತದೆ. ಪಹಾರಾವನ ವಿವಾಹ ಈ ಪದ್ಧತಿಯಲ್ಲಿ ನಾಮ ಮಾತ್ರಕ್ಕಷ್ಟೆ ವಿಧಿ ವಿಧಾನಗಳು ನಡೆಯುತ್ತವೆ.ಇನ್ನು ತಣಾನ ವಿವಾಹ ಈ ಪದ್ಧತಿಯಲ್ಲಿ ವರನ ಕಡೆಯವರು ವಧುವಿನ ಕಡೆಯವರಿಗೆ ಕೇವಲ ಕನ್ಯೆಯ ಮೌಲ್ಯದ ರೂಪದಲ್ಲಿ ಉಡುಗೊರೆಯಾಗಿ ನೀಡುತ್ತಾರೆ

ಇಲ್ಲಿ ವಿಧವಾ ವಿವಾಹ ಚಾಲ್ತಿಯಲ್ಲಿದೆ. ತಮ್ಮ ವಿಶಿಷ್ಟ ಸಂಪ್ರದಾಯದಿಂದಲೇ ಭಾರತೀಯ ಸಂಸ್ಕೃತಿಯ ವೈವಿಧ್ಯದಲ್ಲಿ ಸ್ಥಾನ ಪಡೆದಿರುವ ಈ ಜನಾಂಗವು ಎಲ್ಲ ಜನಾಂಗಕ್ಕಿಂತ ವಿಭಿನ್ನವಾಗಿದೆ ಎಂದು ಹೇಳಬಹುದು. ಈ ಜನಾಂಗದವರು ಮನೆಯನ್ನು ಗೇರ್ ಅಂತಾ ಕರೆಯುತ್ತಾರೆ. ಇವರ ಹಳ್ಳಿಯಲ್ಲಿ ಸಾಮಾನ್ಯವಾಗಿ ಒಂದೇ ಗೋತ್ರದ ಜನರು ವಾಸವಿರುತ್ತಾರೆ ಗುಜರಾತಿ ಬಿಲ್ ಮಾರವಾಡಿ ಭಾಷೆಯ ಮಿಶ್ರಣವನ್ನು ಇವರ ಭಾಷೆಯಲ್ಲಿ ಕಾಣಬಹುದು. ಗರಾಸಿಯ ಜನಾಂಗದವರು ಮಹಿಳೆಯರಿಗೆ ಗೌರವ ಕೊಡುತ್ತಾರೆ. ಇಲ್ಲಿ ಅ ತ್ಯಾಚಾ ರ ವರದಕ್ಷಿಣೆಯಂತಹ ಪ್ರಕರಣಗಳು ಕಾಣುವುದಿಲ್ಲ.

ಇಲ್ಲಿ ಯಾವುದೇ ವ್ಯಕ್ತಿ ವಿವಾಹವಾಗಬೇಕಾದರೆ ಆ ವ್ಯಕ್ತಿ ಕುಟುಂಬ ನಿರ್ವಹಣೆಗೆ ಸಾಕಷ್ಟು ಆದಾಯ ಜಮಾ ಮಾಡಬೇಕಂತೆ. ಆ ನಂತರವೇ ಮದುವೆಯಾಗಬೇಕಂತೆ ಇಲ್ಲಿ ತಮಗಿಷ್ಟವಾದ ವಧುವನ್ನು ವರ ಆಯ್ಕೆ ಮಾಡಲು ಸಮ್ಮೇಳನಗಳನ್ನು ನಡೆಸುತ್ತಾರೆ ಆ ಮೇಳದಲ್ಲಿ ಕುಟುಂಬದವರು ತಮ್ಮ ಹೆಣ್ಣು ಮಕ್ಕಳನ್ನು ಮೇಳದಲ್ಲಿ ಬಿಟ್ಟು ಹೋಗುತ್ತಾರೆ ಪುರುಷರು ತಮಗಿಷ್ಟವಾದ ಹೆಣ್ಣುಮಕ್ಕಳನ್ನು ಆಯ್ಕೆ ಮಾಡಿ ಅವರೊಂದಿಗೆ ಮನೆಗೆ ತೆರಳುತ್ತಾರೆ ಎರಡು ದಿನಗಳ ಕಾಲ ಈ ಮೇಳ ನಡೆಯುತ್ತದೆ. ರಾಜಸ್ಥಾನ ಮತ್ತು ಗುಜರಾತಿನ ಕೆಲವು ಸ್ಥಳಗಳಲ್ಲಿ ಈ ಮೇಳ ನಡೆಯುತ್ತದೆ.

ಪ್ರಪಂಚದಲ್ಲಿ ಇನ್ನು ವಿಚಿತ್ರವಾದಂತಹ ಹಳ್ಳಿಗಳಿವೆ ವಿಚಿತ್ರ ಆಚಾರಗಳಿವೆ ಭಾರತೀಯ ಸಂಸ್ಕೃತಿಯಲ್ಲಿ ಈ ಗರಾಸಿಯ ಜನಾಂಗದವರು ತಮ್ಮ ವಿಶಿಷ್ಟ ಸಂಪ್ರದಾಯಗಳಿಂದ ಇತರ ಜನಾಂಗಗಳಿಗಿಂತ ತುಂಬಾ ವಿಭಿನ್ನ ಎನಿಸಿಕೊಂಡಿದ್ದಾರೆ ಅವರ ಆಚಾರ ವಿಚಾರ ಜೀವನ ಪದ್ದತಿ ಎಲ್ಲವೂ ಬೇರೆ ರೀತಿಯದ್ದಾಗಿದೆ ತಮ್ಮ ವಿಶಿಷ್ಟ ಸಂಪ್ರದಾಯಗಳಿಂದಲೆ ಇವರು ತಮ್ಮನ್ನು ಗುರುತಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *