House constraction: ಇವತ್ತಿನ ದಿನ ಪ್ರತಿಯೊಂದು ಕ್ಷೇತ್ರದಲ್ಲಿಯೂ ನಾವು ಹೊಸತನವನ್ನು ಕಾಣುತ್ತಿದ್ದೇವೆ ಪ್ರತಿದಿನ ಪ್ರತಿಕ್ಷಣ ಹೊಸ ಹೊಸ ರೀತಿಯ ವಿಧಾನಗಳು ಬಳಕೆಗೆ ಬರುತ್ತಿವೆ ಅದೇ ರೀತಿಯಾಗಿ ನಾವಿಂದು ನಿಮಗೆ ಹೊಸ ಕಟ್ಟಡ ನಿರ್ಮಾಣ ವಿಧಾನದ ಬಗ್ಗೆ ತಿಳಿಸಿಕೊಡುತ್ತೇವೆ ಅದೇ ಇಪಿಎಸ್ ತಂತ್ರಜ್ಞಾನ. ಇಪಿಎಸ್ ತಂತ್ರಜ್ಞಾನ ಎಂದರೆ ಎಕ್ಸ್ಪಾಂಡೆಡ್ ಫಾಲೀಸ್ಟರ್ ಶೀಟ್ಸ್ ಇವುಗಳನ್ನು ಬಳಸಿ ಮನೆಯನ್ನು ಕಟ್ಟುವುದಕ್ಕೆ ಇಪಿಎಸ್ ತಂತ್ರಜ್ಞಾನ ಎಂದು ಹೇಳುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿ..

ಹಾಗಾದ್ರೆ ತಂತ್ರಜ್ಞಾನ ಎಲ್ಲಿಂದ ಪ್ರಾರಂಭವಾಯಿತು ನಮ್ಮ ದೇಶದಲ್ಲಿ ಎಲ್ಲೆಲ್ಲಿ ಈ ತಂತ್ರಜ್ಞಾನವನ್ನು ಕಾಣಬಹುದು ಜೊತೆಗೆ ಈ ತಂತ್ರಜ್ಞಾನವನ್ನು ಬಳಸಿಕೊಂಡು ಕಟ್ಟಡವನ್ನು ಕಟ್ಟುವುದರಿಂದ ನಮಗೆ ಯಾವ ರೀತಿಯಾದ ಉಪಯೋಗವಾಗುತ್ತದೆ ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಿಮಗೆ ತಿಳಿಸಿಕೊಡುತ್ತೇವೆ.

ಇಪಿಎಸ್ ತಂತ್ರಜ್ಞಾನ ಇದು ಮೂಲತಹ ಇಟಲಿ ದೇಶದ ತಂತ್ರಜ್ಞಾನ ಅದನ್ನ ಈಗ ಕರ್ನಾಟಕದಲ್ಲಿ ಪ್ರಾರಂಭಿಸಿದ್ದಾರೆ ಇದು ಒಂದು ಪರಿಸರ ಸ್ನೇಹಿ ತಂತ್ರಜ್ಞಾನ ಎಂದು ಹೇಳಬಹುದು. ಈ ತಂತ್ರಜ್ಞಾನದ ಮೂಲಕ ಮನೆಗಳನ್ನು ನಿರ್ಮಾಣ ಮಾಡಿದಾಗ ನಿಮಗೆ ಶೇಕಡಾ ಇಪ್ಪತ್ತರಿಂದ ಐವತ್ತರವರೆಗೆ ಉಳಿತಾಯ ಆಗುತ್ತದೆ ಎಂದು ಹೇಳಬಹುದು. ಮತ್ತು ಈ ತಂತ್ರಜ್ಞಾನವನ್ನು ಬಳಸಿ ಮನೆಯನ್ನು ಕಟ್ಟುವುದರಿಂದ ಬೇಗ ಮನೆ ಕಟ್ಟುವ ಕೆಲಸ ಮುಗಿಸಬಹುದು.

ನೀವು ಒಂದು ಮನೆಯನ್ನು ಕಟ್ಟುವುದಕ್ಕೆ ಒಂದು ವರ್ಷ ತೆಗೆದುಕೊಳ್ಳುವುದಾದರೆ ಈ ತಂತ್ರಜ್ಞಾನದ ಮೂಲಕ ಆರು ತಿಂಗಳಿನಲ್ಲಿ ಕಟ್ಟಿ ಮುಗಿಸಬಹುದು. ಆರು ತಿಂಗಳಲ್ಲಿ ಕಟ್ಟುವಂತಹ ಮನೆಗಳನ್ನು ಮೂರು ತಿಂಗಳಲ್ಲಿ ಕಟ್ಟಿ ಮುಗಿಸಬಹುದು ಅಷ್ಟು ವೇಗವಾಗಿ ಈ ವಿಧಾನದ ಮೂಲಕ ಮನೆಗಳನ್ನು ನಿರ್ಮಾಣ ಮಾಡಬಹುದು.

ಇಪಿಎಸ್ ತಂತ್ರಜ್ಞಾನವನ್ನು ಬಳಸುವುದರಿಂದ ಯಾಕೆ ಕೆಲಸ ಬೇಗ ಬೇಗ ಮುಗಿಯುತ್ತದೆ ಎಂದರೆ ಇಲ್ಲಿ ಯಾವುದೇ ರೀತಿಯ ಕಲ್ಲುಗಳಾಗಲಿ ಇಟ್ಟಂಗಿಯಾಗಲಿ ಬಳಸುವುದಿಲ್ಲ. ಇವು ಫ್ಯಾನಲ್ ಗಳಾಗಿರುತ್ತವೆ ಜೊತೆಗೆ ತುಂಬಾ ಹಗುರವಾಗಿರುತ್ತದೆ ಒಂದು ಸ್ಕ್ವೇರ್ ಮೀಟರ್ ನಿಮಗೆ ಕೇವಲ ಹದಿನೈದು ಕೆಜಿ ತೂಗುತ್ತದೆ ಅಂದರೆ ಒಂದು ಕಲ್ಲಿಗಿಂತ ಒಂದು ಸ್ಕ್ವಾರ್ ಮೀಟರ್ ಪ್ಯಾನಲ್ ಕಡಿಮೆ ತೂಗುತ್ತದೆ. ಆದ್ದರಿಂದ ಇದನ್ನು ಒಬ್ಬ ವ್ಯಕ್ತಿ ತೆಗೆದುಕೊಂಡು ಹೋಗಬಹುದು. ಇಷ್ಟು ಹಗುರವಾಗಿರುವ ಪ್ಯಾನಲ್ ಗಳು ಗಟ್ಟಿಯಾಗಿ ಬಾಳಿಕೆ ಬರುತ್ತವೆ ಎಂದು ಕೇಳುವುದಾದರೆ ಈಗಾಗಲೇ ಬಹು ಅಂತಸ್ತಿನ ಕಟ್ಟಡಗಳನ್ನು ಇದನ್ನು ಬಳಸಿ ಕಟ್ಟಿದ್ದಾರೆ. ಹಾಗಾದರೆ ಇದರಿಂದ ಯಾವ ರೀತಿ ಪ್ರಯೋಜನವಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.

ಈ ರೀತಿಯ ನಿರ್ಮಾಣ ಯಾಕೆ ಮಾಡಬೇಕು ಎಂದರೆ ಇದು ವೆದರ್ ಪ್ರೂಫ್ ಆಗಿದೆ ಕರಾವಳಿ ಭಾಗದಲ್ಲಿ ತುಂಬಾ ಹಿಟ್ ಇರುತ್ತದೆ ಅಲ್ಲಿ ಇಪಿಎಸ್ ತಂತ್ರಜ್ಞಾನ ಬಳಸಿದಾಗ ಅದು ಹಿಟ್ ಅನ್ನ ತನ್ನ ಒಳಗೆ ಬಿಟ್ಟುಕೊಳ್ಳುವುದಿಲ್ಲ. ತುಂಬಾ ಮಳೆ ಬರುವಂತಹ ಪ್ರದೇಶದಲ್ಲಿ ಚಳಿ ಇರುವಂತಹ ಜಗದಲ್ಲಿ ಇದನ್ನು ಬಳಸಿದರೆ ಚಳಿಯನ್ನು ಒಳಗೆ ತೆಗೆದುಕೊಳ್ಳುವುದಿಲ್ಲ ಅಲ್ಲದೆ ಇದು ಎರಡು ಗಂಟೆಗಳ ಫೈಯರ್ ಫ್ರೂಪ್ ಆಗಿದೆ. ಅಷ್ಟೇ ಅಲ್ಲದೆ ಇದು ಬುಲೆಟ್ ಪ್ರೂಫ್ ಕೂಡ ಆಗಿದೆ. ಉಪ್ಪುನೀರಿನ ವಾತಾವರಣಕ್ಕು ಇದನ್ನು ಬಳಸಬಹುದು ಯಾವುದೇ ರೀತಿಯ ತೊಂದರೆ ಆಗುವುದಿಲ್ಲ.

ಹಾಗಾದರೆ ಈ ರೀತಿಯ ಮನೆ ನಿರ್ಮಾಣವನ್ನು ಯಾರು ಮಾಡಿಕೊಡುತ್ತಾರೆ ಅದು ಎಲ್ಲಿದೆ ಎಂಬುದನ್ನು ತಿಳಿಯುವುದಾದರೆ ಭಾರತದಲ್ಲಿ ಈಗ ಎಲ್ಲ ಕಡೆ ಇದು ಜನಪ್ರಿಯತೆ ಗಳಿಸುತ್ತಿದೆ ಎಲ್ಲ ಕಡೆಗಳಲ್ಲಿಯೂ ಕಂಡುಬರುತ್ತಿದೆ. ನಮ್ಮ ಕರ್ನಾಟಕದಲ್ಲಿಯೂ ಕೂಡ ಅನೇಕ ಕಡೆಗಳಲ್ಲಿ ಇದು ಲಭ್ಯವಿದೆ. ಆದರೆ ಕರ್ನಾಟಕದಲ್ಲಿ ಉಡುಪಿಯಲ್ಲಿರುವ ಸೃಷ್ಟಿ ವೆಂಚರ್ಸ್ ಅವರು ಈ ತಂತ್ರಜ್ಞಾನವನ್ನು ಪರಿಚಯಿಸುತ್ತಿದ್ದಾರೆ ಇವರು ನೇರವಾಗಿ ಇಟಲಿಯಿಂದ ಇದನ್ನ ಖರೀದಿಸುತ್ತಾರೆ.

ಅವರು ತಮ್ಮ ಇಡೀ ಕಂಪನಿಯನ್ನು ಇಪಿಎಸ್ ತಂತ್ರಜ್ಞಾನದ ಮೂಲಕ ನಿರ್ಮಿಸಿದ್ದಾರೆ. ಈ ಪ್ಯಾನೆಲ್ ಗಳನ್ನು ಯಾವ ರೀತಿಯಾಗಿ ತಯಾರಿಸಲಾಗುತ್ತದೆ ಎಂಬುದನ್ನು ನೋಡುವುದಾದರೆ ಇಲ್ಲಿ ಎಕ್ಸ್ಪಾಂಡೆಬಲ್ ಪೋಲಿಮಸ್ ಹಾಗೂ ಹೊರಗಡೆ ರಿಎನ್ ಫೋರ್ ಸಿಬಲ್ ಸ್ಟೀಲ್ ಬಳಕೆ ಮಾಡಿರುತ್ತಾರೆ ಯಾಕೆ ಈ ಸ್ಟೀಲಿನ ಬಳಕೆ ಮಾಡುತ್ತಾರೆ ಎಂದರೆ ಇದರಿಂದ ಯಾವುದೇ ಕೆರೋಸಿನ್ ಬರುವುದಿಲ್ಲ ರಸ್ಟ್ ಬರುವುದಿಲ್ಲ. ಹಾಗೂ ಇದರ ಮೇಲೆ ಎರಡು ಬದಿಗಳಲ್ಲಿ ಕಾಂಕ್ರಿಟ್ ಕೋಟಿಂಗನ್ನ ಮಾಡಲಾಗಿರುತ್ತದೆ ಹಾಗೂ ಅದರ ಮೇಲೆ ಗಾರೆಯನ್ನು ಮಾಡಿ ಪುಟ್ಟಿಯನ್ನು ಮಾಡಿ ಅದಕ್ಕೆ ಬಣ್ಣವನ್ನು ಹಚ್ಚಲಾಗುತ್ತದೆ

ಜೊತೆಗೆ ಸ್ಯಾಂಡ್ವಿಚ್ ನ ತರಹ ಮಧ್ಯದಲ್ಲಿ ಕಾಂಕ್ರೀಟ್ ಲೆಯರ್ ಅನ್ನು ತುಂಬಲಾಗುತ್ತದೆ. ಫೌಂಡೇಶನ್ ಹಾಕುವುದಕ್ಕು ಕೂಡ ಇಪಿಎಸ್ ತಂತ್ರಜ್ಞಾನವನ್ನು ಬಳಸಬಹುದು ಫೌಂಡೇಶನನ್ನು ಹಾಕುವುದಕ್ಕೆ ಇವರು ಸ್ಯಾಂಡ್ವಿಚ್ ಪ್ಯಾನಲ್ ನನ್ನ ಬಳಕೆ ಮಾಡುತ್ತಾರೆ. ಇಪಿಎಸ್ ತಂತ್ರಜ್ಞಾನದಲ್ಲಿ ರೆಡಿಮೇಡ್ ಸ್ಟೇರ್ ಕೇಸ್ ಸಿಗುತ್ತದೆ ಹಾಗಾಗಿ ಇಲ್ಲಿ ಎಲ್ಲವನ್ನ ತಂದು ತಂದು ಜೋಡಿಸುವುದರಿಂದ ನಿರ್ಮಾಣಕಾರ್ಯ ಬೇಗ ಮುಗಿಯುತ್ತದೆ ಜೊತೆಗೆ ವೆಚ್ಚ ಕೂಡ ತುಂಬಾ ಕಡಿಮೆಯಾಗುತ್ತದೆ.

ಹಾಗಾದರೆ ಈ ತಂತ್ರಜ್ಞಾನವನ್ನು ಬಳಸಿ ಕಟ್ಟಿರುವಂತಹ ಮನೆಗಳು ಎಷ್ಟು ವರ್ಷ ಬಾಳಿಕೆ ಬರುತ್ತವೆ ಎಂಬುದನ್ನು ನೋಡುವುದಾದರೆ ಇದು ನೂರು ವರ್ಷ ಬಾಳಿಕೆ ಬರುತ್ತದೆ. ಹಾಗಾದರೆ ಎಷ್ಟು ಎತ್ತರದವರೆಗೆ ಈ ತಂತ್ರಜ್ಞಾನದಲ್ಲಿ ಮನೆ ಕಟ್ಟಬಹುದು ಎಂದರೆ ಇದರಲ್ಲಿ ಎರಡು ರೀತಿ ಟೆಕ್ನಾಲಜಿ ಬರುತ್ತದೆ ಒಂದು ಸಿಂಗಲ್ ಪ್ಯಾನಲ್ ಇನ್ನೊಂದು ಸ್ಯಾಂಡ್ವಿಚ್ ಪ್ಯಾನಲ್. ಸಿಂಗಲ್ ಪ್ಯಾನಲ್ ಬಳಸಿ ಮೂರು ಮಹಡಿಯ ವರೆಗೆ ಮನೆಯನ್ನು ಕಟ್ಟಬಹುದು. ಸ್ಯಾಂಡ್ವಿಚ್ ಪ್ಯಾನಲ್ ಬಳಸಿ ನೀವು ಹದಿನೈದರಿಂದ ಇಪ್ಪತ್ತು ಮಹಡಿಯ ವರೆಗೆ ಕಟ್ಟಡವನ್ನು ಕಟ್ಟಬಹುದು.

ಉಡುಪಿಯ ಸೃಷ್ಟಿ ವೆಂಚರ್ಸ್ ನವರು ಈಗಾಗಲೇ ಬಹುಮಹಡಿಯ ಕಟ್ಟಡವನ್ನು ಕಟ್ಟಿ ಅದರಲ್ಲಿ ಕೆಲವನ್ನು ಪ್ರಾಜೆಕ್ಟ್ ಮಾಡುತ್ತಿದ್ದಾರೆ. ಜೊತೆಗೆ ಇವರು ಬೆಂಗಳೂರಿನಲ್ಲಿ ದೇವಿದಾಸ್ ಎನ್ನುವ ಕಮರ್ಷಿಯಲ್ ಕಂಪ್ಲೆಕ್ಸ್ ಅನ್ನ ಕಟ್ಟಿದ್ದಾರೆ ನಲವತ್ತು ಸಾವಿರ ಸ್ಕ್ವೇರ್ ಫೀಟ್ ಇರುವ ಮೂರು ಮಹಡಿಯ ಕಟ್ಟಡವನ್ನು ಕಟ್ಟಿದ್ದಾರೆ. ಅಷ್ಟೇ ಅಲ್ಲದೆ ಕಾರ್ಕಳದ ಒಬ್ಬ ಎಂಎಲ್ಎ ಅವರ ಆಫೀಸ್ ನಲ್ಲಿ ಇಪಿಎಸ್ ತಂತ್ರಜ್ಞಾನವನ್ನು ಬಳಸಿ ಕಚೇರಿಯನ್ನು ಕಟ್ಟಿ ಕೊಟ್ಟಿದ್ದೇವೆ ಎಂದು ಹೇಳಿದ್ದಾರೆ.

ಈ ರೀತಿಯಾಗಿ ಪರಿಸರಸ್ನೇಹಿ ಆಗಿರುವಂತಹ ತಂತ್ರಜ್ಞಾನವನ್ನು ಬಳಸಿಕೊಂಡು ನೀವು ಮನೆಯನ್ನು ಕಟ್ಟಿಕೊಳ್ಳುವುದು ಉತ್ತಮ ಎಂದು ಹೇಳಬಹುದು. ಇದರಿಂದ ನಿಮಗೆ ಉಳಿತಾಯವಾಗುತ್ತದೆ. ಕೇವಲ ಉಡುಪಿಯಲ್ಲಿ ಮಾತ್ರವಲ್ಲದೇ ಬೆಂಗಳೂರಿನಲ್ಲಿ ಮುಂತಾದ ಕಡೆಗಳಲ್ಲಿ ಹೊರರಾಜ್ಯಗಳಲ್ಲಿಯೂ ಇದು ಸಿಗುತ್ತದೆ. ನೀವು ಕೂಡ ಹೊಸದಾಗಿ ಮನೆ ಅಥವಾ ಆಫೀಸನ್ನು ಕಟ್ಟದಿದ್ದರೆ ಇಪಿಎಸ್ ತಂತ್ರಜ್ಞಾನದ ಮೂಲಕ ಬಹಳ ಕಡಿಮೆ ಖರ್ಚಿನಲ್ಲಿ ವೇಗವಾಗಿ ಕಟ್ಟಡವನ್ನು ಕಟ್ಟಿಕೊಳ್ಳಬಹುದು ನೀವು ಈ ಮಾಹಿತಿಯನ್ನು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಪರಿಚಿತರಿಗೂ ಇದರ ಬಗ್ಗೆ ತಿಳಿಸಿಕೊಡಿ. Video Credit For ಕನ್ನಡ ಕುವರ

Leave a Reply

Your email address will not be published. Required fields are marked *