ಸರ್ವೆ ಎಂದರೆ ಏನು?. ಲ್ಯಾಂಡ್ ಸರ್ವೇ ಎಂದರೆ ಏನು ಅದರಲ್ಲಿ ಎಷ್ಟು ವಿಧಗಳು ಇವೆಸರ್ವೆಯನ್ನು ಯಾರಿಂದ ಮಾಡಿಸಬೇಕು ಮತ್ತು ಯಾವ ವಿಧವಾಗಿ ಮಾಡಿಸಬೇಕು?.
ಸರ್ವೆಎಂದರೆ ಏನು :-ಆಸ್ತಿಗೆ ಅಥವಾ ಜಮೀನಿಗೆ ಅಳತೆ ಮಾಡುವ ಮೂಲಕ ಅದರ ಆಕಾರ ಮತ್ತು ವಿಸ್ತೀರ್ಣ ತಿಳಿಯುತ್ತದೆ. ಪ್ರತಿಯೊಂದು ಆಸ್ತಿಗೆ ನಕ್ಷೆ ಆಕಾರ ವಿಸ್ತೀರ್ಣ ಎನ್ನುವುದು ಇದ್ದೇ ಇರುತ್ತದೆ. ಅದನ್ನು, ಕಂಡು ಹಿಡಿಯಲು ಅಳತೆ ಮಾಡುವ ಪ್ರಕ್ರಿಯೆಗೆ ಸರ್ವೆ ಎಂದು ಕರೆಯಲಾಗುತ್ತದೆ.
ಭೂಮಿಯನ್ನು ಯಾರಿಂದ ಸರ್ವೆ ಮಾಡಿಸಬೇಕು?.
ರಾಜ್ಯದಲ್ಲಿ ಗಡಿ ಮಟ್ಟವನ್ನು ತಿಳಿದುಕೊಳ್ಳಲು ಸರ್ವೆ ಆಫ್ ಇಂಡಿಯಾ (survey of India ) ಇಲಾಖೆಯಿಂದ ಅಳತೆ ಮಾಡಿಸಲಾಗುತ್ತದೆ. ಅಳತೆ ಮಾಡುವ ಸಮಯದಲ್ಲಿ ರಾಜ್ಯದ ಪ್ರತಿನಿಧಿಗಳು ಇರಬೇಕು ಮತ್ತು ಸಹಕಾರವನ್ನು ಸಹ ನೀಡಬೇಕು.
ರೈತರ ಜಮೀನಿನ ಅಳತೆಯನ್ನು ಮಾಡಲು ಮುಜರಾಯಿ ಇಲಾಖೆ ಇದೆ. ಇದಕ್ಕೆ, ಲ್ಯಾಂಡ್ ರೆಕಾರ್ಡ್ ಮತ್ತು ಸರ್ವೇ ಸೆಟಲ್ಮೆಂಟ್ (land record and survey settlement) ಎಂದು ಕೂಡ ಕರೆಯಲಾಗುತ್ತದೆ. ಈ ಇಲಾಖೆಯ ಕೆಲಸ ಏನು ಎಂದರೆ ರೈತರ ಜಮೀನನ್ನು ಅಳತೆ ಮಾಡುವುದು ಹಾಗೂ ಪೋಡಿ ಅಳತೆ ಮಾಡುವುದು ಮತ್ತು ಪ್ರತ್ಯೇಕ ದಾಖಲೆ ತಯಾರು ಮಾಡುವುದು.
ನಮ್ಮ ರಾಜ್ಯದಲ್ಲಿ ಎಷ್ಟು ರೀತಿಯಲ್ಲಿ ಸರ್ವೇ ನಡೆಸಲಾಗುತ್ತದೆ ಎಂದು ತಿಳಿಯೋಣ :-
ಹದ್ದುಬಸ್ತು :- ಗಡಿ ರೇಖೆಯನ್ನು ಬಂದೋಬಸ್ತು ಮಾಡುವುದಕ್ಕೆ ಸುತ್ತಳತೆಯನ್ನು ಸೂಕ್ತವಾಗಿ ಅಳೆಯುವುದನ್ನು ಹದ್ದುಬಸ್ತು ಎಂದು ಕರೆಯಲಾಗುತ್ತದೆ.
ಪೋಡಿ ಸರ್ವೆ :– ಪೂರ್ಣ ಜಮೀನನ್ನು ಭಾಗ ಮಾಡಿ ಪ್ರತ್ಯೇಕ ನಕ್ಷೆ ತಯಾರಿಸುವುದಕ್ಕೆ ನೂತನವಾಗಿ ದಾಖಲೆ ತಯಾರಿಸುವುದಕ್ಕೆ ಪೋಡಿ ಸರ್ವೆ ಎಂದು ಕರೆಯಲಾಗುತ್ತದೆ. ಇದನ್ನು, ರೆವೆನ್ಯೂ ಸರ್ವೇ (revenue survey) ಎಂದು ಕೂಡ ಕರೆಯಲಾಗುತ್ತದೆ.
ಜಮೀನಿಗೆ ಸಂಬಂಧಪಟ್ಟ ಕೆಲವು ಮುಖ್ಯ ಅಂಶಗಳನ್ನು ತಿಳಿದುಕೊಳ್ಳೋಣ ;
ಖಾಸಗಿ ವ್ಯಕ್ತಿಗಳಿಂದ ಜಮೀನನ್ನು ಅಳತೆ ಮಾಡಿಸುವುದು ಅಷ್ಟೊಂದು ಸಮಂಜಸವಲ್ಲ. ಆದಷ್ಟು ಸರ್ಕಾರದಿಂದ ಪರವಾನಿಗೆ ಪಡೆದ ಭೂ ಮಾಪಕರಿಂದ ಸರ್ವೆ ಮಾಡಿಸುವುದು ಉತ್ತಮ.
ಭೂ ಮಾಪಕರು ಜಮೀನನ್ನು ಅಳತೆ ಮಾಡುವ ಸಂದರ್ಭದಲ್ಲಿ ಜಮೀನಿಗೆ ಕುರಿತಾದ ದಾಖಲೆಗಳು ಇದ್ದರೆ, ಅಳತೆ ಮಾಡಲು ಮತ್ತು ಗಡಿಯನ್ನು ವೇಗವಾಗಿ ಗುರುತಿಸಲು ದಾಖಲೆಗಳು ಸಹಾಯ ಮಾಡುತ್ತದೆ.
ಮಾಲೀಕರು ಅಕ್ಕಪಕ್ಕದ ರೈತರಿಗೆ ಸರ್ವೇ ಮಾಡಿಸುವ ಮುನ್ನ ನೋಟಿಸ್ ಕೊಡಬೇಕು. ಅದರಿಂದ, ಅಳತೆ ಮಾಡುವ ಸಮಯದಲ್ಲಿ ಆ ರೈತರ ಹಾಜರಾತಿ ಕಡ್ಡಾಯವಾಗಿ ಇರುವಂತೆ ಸಹ ನೋಡಿಕೊಳ್ಳಬೇಕು. ಇದರಿಂದ, ಮುಂದೆ ಯಾವುದೇ ರೀತಿಯ ಸಮಸ್ಯೆಗಳು ಎದುರಾಗುವುದಿಲ್ಲ. ಸರ್ವೆಯನ್ನು ಈ ರೀತಿಯನ್ನು ಕ್ರಮವಾಗಿ ಮಾಡಿಸಬೇಕು ಮತ್ತು ಸರ್ಕಾರದ ಕಡೆಯಿಂದ ಹೋಗುವುದು ಒಳ್ಳೆಯದು.