ಇದೇ ಅಕ್ಟೋಬರ್ 25ರಂದು ಗ್ರಸ್ತಾಸ್ತ ಸೂರ್ಯಗ್ರಹಣ ತುಲಾ ರಾಶಿಯಲ್ಲಿ ನಡೆಯಲಿದೆ. ಈ ಗ್ರಹಣ ಎನ್ನುವುದು ಮಧ್ಯಾಹ್ನ 2.22 ಗಂಟೆಯಿಂದ ಪ್ರಾರಂಭವಾಗಿ ಸಂಜೆ 6.32 ಗಂಟೆ ತನಕ ಇರುತ್ತದೆ. ಹಾಗಿದ್ದರೆ ಈ ಸಂದರ್ಭದಲ್ಲಿ ಆಶುಭ ಫಲವನ್ನು ಎದುರಿಸಲಿರುವ ರಾಶಿಗಳು ಯಾವುವು ಎಂಬುದು ವಿವರವಾಗಿ ತಿಳಿದುಕೊಳ್ಳೋಣ.

ಮೇಷ ರಾಶಿ; ಮೇಷ ರಾಶಿಯವರ ಮಾಂಗಲ್ಯ ಸ್ಥಾನದಲ್ಲಿ ಗ್ರಹಣ ಸಂಭವಿಸುವ ಕಾರಣದಿಂದಾಗಿ ಅವರ ಗಂಡಂದಿರ ಆರೋಗ್ಯದ ಕುರಿತಂತೆ ಸ್ವಲ್ಪಮಟ್ಟಿಗೆ ಜಾಗೃತೆ ವಹಿಸುವುದು ಒಳ್ಳೆಯದು. ಇನ್ನು ಹಬ್ಬದ ಸಂದರ್ಭ ಕೂಡ ಸಮಿತಿ ಸುತ್ತಿದ್ದು ಮಕ್ಕಳ ಬಗ್ಗೆ ಕೂಡ ಸ್ವಲ್ಪಮಟ್ಟಿಗೆ ವಿಶೇಷ ಕಾಳಜಿಯನ್ನು ವಹಿಸುವುದು ಉತ್ತಮವಾಗಿದೆ. ಅದರಲ್ಲಿ ವಿಶೇಷವಾಗಿ ಈ ಪಟಾಕಿ ಹಚ್ಚುವುದರ ಕುರಿತಂತೆ ಮತ್ತು ಇನ್ನಿತರ ವಿಚಾರಗಳ ಕುರಿತಂತೆ ಈ ಸಂದರ್ಭದಲ್ಲಿ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಲೇಬೇಕಾಗುತ್ತದೆ.

ತುಲಾ ರಾಶಿ; ಇನ್ನು ತುಲಾ ರಾಶಿಯಲ್ಲಿಯೇ ಸೂರ್ಯ ಗ್ರಹಣ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಗ್ರಹಣ ಶಾಂತಿ ಮಾಡಿಸಿಕೊಳ್ಳಬೇಕಾಗಿರುವುದು ಉತ್ತಮವಾಗಿದೆ. ಗೋಧಿ ಹಾಗೂ ಹುರಳಿ ಧಾನ್ಯಗಳನ್ನು ನಿಮ್ಮ ಇಷ್ಟ ದೇವತೆಯ ಎದುರು ಇಟ್ಟು ಪೂಜೆ ಮಾಡಿ ಗ್ರಹಣ ಮೋಕ್ಷವಾದ ನಂತರ ಪುರೋಹಿತರಿಗೆ ಅವುಗಳನ್ನು ದಾನ ನೀಡಬೇಕು. ಈ ಎಲ್ಲಾ ಕಾರ್ಯಗಳನ್ನು ಮಾಡುವ ಮೂಲಕ ನೀವು ಗ್ರಹಣ ದಿನದಂದು ಎಲ್ಲಾ ದೋಷಗಳನ್ನು ಪರಿಹಾರ ಮಾಡಿಕೊಳ್ಳಬಹುದಾಗಿದೆ.

ವೃಶ್ಚಿಕ ರಾಶಿ; ಕೆಲಸ ಹಾಗೂ ವ್ಯಾಪಾರಕ್ಕೆ ಸಂಬಂಧಿಸಿದ ನ್ಯಾಯಾಲಯದ ವ್ಯಾಜ್ಯಗಳನ್ನು ನೀವು ಈ ಸಂದರ್ಭದಲ್ಲಿ ಕಾಣಬಹುದಾಗಿದೆ. ಹೀಗಾಗಿ ಇವುಗಳನ್ನು ನೀವು ನಿಮ್ಮ ಪರವಾಗಿ ಪರಿಹರಿಸಿಕೊಳ್ಳಲು ಗ್ರಹಣಾಚರಣೆಯನ್ನು ಮಾಡುವ ಮೂಲಕ ಪರಿಹರಿಸಿಕೊಳ್ಳಬಹುದಾಗಿದೆ. ಈ ಮೇಲೆ ತುಲಾ ರಾಶಿಯವರಿಗೆ ಹೇಳಿರುವಂತೆಯೇ ನಿಮ್ಮ ಇಷ್ಟದೇವತೆಗೆ ನೀವು ಪುರೋಹಿತರನ್ನು ಕರೆಸಿ, ಪೂಜೆ ಮಾಡಿಸಿದರೆ ಸಾಕು ನಿಮ್ಮ ಎಲ್ಲಾ ಕಷ್ಟಗಳು ಪರಿಹಾರವಾಗುತ್ತದೆ.

ಕುಂಭ ರಾಶಿ; ಈ ಸಂದರ್ಭದಲ್ಲಿ ಕುಂಭ ರಾಶಿಯವರ ಪಿತೃ ಅಂದರೆ ತಂದೆ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇರುತ್ತದೆ ಹೀಗಾಗಿ ಈ ಸಂದರ್ಭದಲ್ಲಿ ಗ್ರಹಣದ ಆಚರಣೆಯನ್ನು ಮಾಡುವ ಮೂಲಕ ತಂದೆಯ ಸ್ವಾಸ್ಥ್ಯ ಆರೋಗ್ಯದ ಪ್ರಾರ್ಥನೆಯನ್ನು ಮಾಡಿದರೆ ಎಲ್ಲಾ ಒಳ್ಳೆಯದಾಗುತ್ತದೆ. ಇವುಗಳಲ್ಲಿ ನಿಮ್ಮ ರಾಶಿ ಕೂಡ ಇದ್ದರೆ ತಪ್ಪದೆ ಗ್ರಹಣದ ಸಂದರ್ಭದಲ್ಲಿ ನಿಮ್ಮ ಇಷ್ಟ ದೇವತೆಯ ಪೂಜೆ ಪುನಸ್ಕಾರಗಳನ್ನು ಮಾಡುವ ಮೂಲಕ ನೀವು ಈ ಚಿಕ್ಕ ಪುಟ್ಟ ಕಷ್ಟಗಳಿಂದ ಹೊರಬರಬಹುದಾಗಿದೆ.

Leave a Reply

Your email address will not be published. Required fields are marked *