ಕನ್ನಡ ಚಿತ್ರರಂಗದಲ್ಲಿ ಯಶಸ್ವಿ ಹಾಗೂ ಮಾದರಿಯಾಗಿ ಬದುಕುತ್ತಿರುವ ನವರಸ ನಾಯಕ ಜಗ್ಗೇಶ್ ಹಾಗೂ ಅವರ ತಮ್ಮ ಕೋಮಲ್ ಅವರು ಅಪರೂಪದ ಅಣ್ಣ-ತಮ್ಮಂದಿರು. ಕನ್ನಡ ಚಿತ್ರರಂಗದಲ್ಲಿ ಯಾವುದೇ ಬ್ಯಾಗ್ರೌಂಡ್ ಇಲ್ಲದೆ ತುಂಬಾ ವರ್ಷ ಸೈಕಲ್ ಹೊಡೆದು ನಂತರ ಸ್ವಂತ ಪರಿಶ್ರಮದಿಂದ ಟಾಪ್ ನಾಯಕ ನಟರಾಗಿ ಬೆಳೆದರು ನಟ ಜಗ್ಗೇಶ್. ಇನ್ನೂ ತಾನೊಂದಿಷ್ಟು ಸಕ್ಸಸ್ ಕಂಡ ಮೇಲೆ ತನ್ನ ತಮ್ಮ ಕೋಮಲ್ ಅವರನ್ನು ಕೂಡ ಕನ್ನಡ ಚಿತ್ರರಂಗಕ್ಕೆ ಕರೆ ತಂದರು. ಕೋಮಲ್ ಅವರು ಕೂಡ ತನ್ನ ಅಣ್ಣನ ಸಲಹೆಗಳನ್ನು, ಸಹಕಾರಗಳನ್ನು ಪಡೆದು ಸಿನಿಮಾ ರಂಗದಲ್ಲಿ ಅಣ್ಣ ಹಾಕಿಕೊಟ್ಟ ಹಾದಿಯಲ್ಲಿ ಬೆಳೆದ ನಟ ಕೋಮಲ್ ಕೊನೆಗೂ ತಮ್ಮದೇ ಆದ ಪ್ರಸಿದ್ಧಿಯನ್ನು ಗಳಿಸಿಕೊಂಡರು.

ಕೋಮಲ್ ಕುಮಾರ್ ಇವರು ಜನಿಸಿದ್ದು ಜುಲೈ 04, 1973 ತುಮಕೂರು ಜಿಲ್ಲೆಯ ಮಾಯಾಸಂದ್ರದಲ್ಲಿ. ಇವರು ತಮ್ಮ ವಿದ್ಯಾಭ್ಯಾಸವನ್ನು ಊಟಿಯಲ್ಲಿ ಮುಗಿಸಿದ್ದಾರೆ. ಇವರು ನವರಸನಾಯಕ ಜಗ್ಗೇಶ್ ಕಿರಿಯ ಸಹೋದರ. ಖಳನಟನಾಗಿ ಸಿನಿಜೀವನ ಆರಂಬಿಸಿದ ಕೋಮಲ್ ನಂತರ ಹಲವು ಚಿತ್ರಗಳಲ್ಲಿ ಪೋಷಕ ಮತ್ತು ಹಾಸ್ಯ ನಟನಾಗಿ ಅಭಿನಯಿಸಿದರು.

ಇವರು 2008 ರಲ್ಲಿ ಬಿಡುಗಡೆಗೊಂಡಿರುವ “ಮಿಸ್ಟರ್ ಗರಗಸ” ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡರು. ನಾಯಕನಾಗಿ ಹೊಸ ಇನ್ನಿಂಗ್ಸ್ ಆರಂಭಿಸಿದರು. ನಂತರ ಗೋವಿಂದಾಯ ನಮಃ, ಪುಂಗಿದಾಸ, ಡೀಲ್ ರಾಜ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಕೆಂಪೇಗೌಡ 2 ಚಿತ್ರದಲ್ಲಿ ಖಡಕ್ ಖಾಕಿಯಲ್ಲಿ ಮಿಂಚಿದ್ದಾರೆ. ಇವರ ನಟನೆಗೆ, ಕಾಮಿಡಿಗೆ ಹಲವು ಪ್ರಶಸ್ತಿಗಳು ಸಹ ಲಭಿಸಿವೆ.

ನಟ ಕೋಮಲ್ ಅವರಿಗೆ ಕೇವಲ 20 ವಯಸ್ಸಿಗೆ ಮದುವೆ ಮಾಡಲಾಯಿತು. ಈ ಬಗ್ಗೆ ಬೇರೆ ರೀತಿಯ ಊಹಾಪೋಹಗಳು ಹರಿದಾಡುತ್ತಿತ್ತು. ಆದರೆ ಕೋಮಲ್ ಅವರ ಅಣ್ಣ ಜಗ್ಗೇಶ್ ಅವರು ಕೋಮಲ್ ಅವರಿಗೆ ಬೇಗ ಮದುವೆ ಮಾಡಿದ ಕಾರಣವೇನು ಎಂಬುದರ ಕುರಿತು ಕೆಲ ವರ್ಷಗಳ ಹಿಂದೆ ಹೇಳಿಕೊಂಡಿದ್ದಾರೆ.

ಅದು 1993 ನೇ ಇಸವಿ. ನವರಸ ನಾಯಕ ಜಗ್ಗೇಶ್ ಅವರ ಮೊದಲ ಚಿತ್ರ ತರ್ಲೆ ನನ್ ಮಗ ಸಿನಿಮಾ ಭಾರಿ ಯಶಸ್ಸನ್ನು ಕಂಡು ಹೀರೋ ಆಗಿ ಹೊರಹೊಮ್ಮಿದ್ದರು. ಇನ್ನು ಹಲವಾರು ಚಿತ್ರಗಳಿಗೆ ಜಗ್ಗೇಶ್ ಅವರು ಸಹಿ ಕೂಡ ಹಾಕಿದರು. ಆದರೆ ಕೋಮಲ್ ಆಗಿನ್ನು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಚಿಕ್ಕ-ಪುಟ್ಟ ಪೋಷಕ ಪಾತ್ರಗಳು, ಹಾಸ್ಯ ಪಾತ್ರಗಳನ್ನು ಮಾಡುತ್ತಿದ್ದರು. ಆಗ ಕೋಮಲ್ ಗೆ ಕೇವಲ 20 ವರ್ಷ. ಇದೇ ಸಮಯದಲ್ಲಿ ನಟ ಜಗ್ಗೇಶ್ ಅವರ ತಾಯಿ ಜಗ್ಗೇಶ್ ಅವರಿಗೆ ಮುಖ್ಯವಾದ ಮಾತೊಂದನ್ನು ಹೇಳಿದ್ದರು ಅದೇನೆಂದರೆ,

ಬೇಗ ಕೋಮಲ್ ಗೆ ಮದುವೆ ಮಾಡು ಈಶ ಯಾಕೊ ಶಿವ ಕರೆದಂತೆ ಆಗುತ್ತಿದೆ ಎಂದು ಜಗ್ಗೇಶ್ ಅವರ ತಾಯಿ ಕೋಮಲ್ ಗೆ ಮದುವೆ ಮಾಡುವಂತೆ ಹೇಳಿದರು. ನಂತರ ಒಂದು ವಾರದಲ್ಲೇ ಜಗ್ಗೇಶ್ ಅವರು ತನ್ನ ಸ್ನೇಹಿತನ ತಂಗಿಯನ್ನು ಮದುವೆಗೆ ಒಪ್ಪಿಸಿ 20 ವರ್ಷದ ಕೋಮಲ್ ಗೆ ಮದುವೆ ಮಾಡಿಸಿದರು. ಮಗನ ಮದುವೆಯನ್ನು ನೋಡಿ ಆನಂದಿಸಿ ಚಪ್ಪಾಳೆ ತಟ್ಟಿದ್ದರು ಜಗ್ಗೇಶ್ ಅವರ ತಾಯಿ. ಆದರೆ ಕೋಮಲ್ ಅವರ ಮದುವೆಯಾದ ಇಪ್ಪತ್ತು ದಿನಕ್ಕೇ ಅವರ ತಾಯಿ ಇಹಲೋಕ ತ್ಯಜಿಸಿದರು.

ನಟ ಕೋಮಲ್ ಅವರ ಬದುಕಿನಲ್ಲಿ ಅನೇಕ ಏಳು ಬೀಳುಗಳನ್ನು ನೋಡಿದ್ದಾರೆ. ಆದರೆ ಈ ಎಲ್ಲಾ ಸಮಯದಲ್ಲೂ ಅವರ ಪತ್ನಿ ಅನುಸೂಯಾ ಅವರು ಅವರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಕೋರೋನಾಕ್ಕೆ ತುತ್ತಾಗಿ ಸಾವನ್ನು ಗೆದ್ದು ಬಂದಿದ್ದೆ ಪವಾಡ ಎನ್ನಬಹುದು. ಹಾಗೇ ಕೋಮಲ್ ಅವರ ಮೇಲೆ ಸ್ವೆಟರ್ ಹಗರಣವು ಕೇಳಿಬಂತು ಆದರೆ ಈಗ ಅದೆಲ್ಲ ಸುಳ್ಳೆಂದು ಸಾಬೀತು ಪಡಿಸಿದ್ದಾರೆ.

ಕೋಮಲ್ ಅವರು ಕಾಮಿಡಿ ಸಿನಿಮಾದ ಜೊತೆ ಖಡಕ್ ಪೊಲೀಸ್ ಅಧಿಕಾರಿಯಾಗಿ ಕೆಂಪೇಗೌಡ 2 ಸಿನೆಮಾ ಮಾಡಿದರು ಆದರೆ ಈ ಸಿನಿಮಾ ಕೈ ಹಿಡಿಯಲಿಲ್ಲ ನೆಲ ಕಚ್ಚಿತು. ನಂತರದಲ್ಲಿ ಅವರ ಯಾವ ಸಿನೆಮಾಗಳು ಬಂದಿಲ್ಲ. ಆದರೂ ಅವರ ಅಭಿಮಾನಿಗಳು ಅವರ ಕಾಮಿಡಿ ಸಿನಿಮಾಗಳು ಆದಷ್ಟು ಬೇಗ ಮತ್ತೆ ಅವರ ಬರಲಿ ಎಂದು ಕಾಯುತ್ತಿದ್ದಾರೆ ಎನ್ನಬಹುದು.

Leave a Reply

Your email address will not be published. Required fields are marked *