ಲೂಸ್ ಮಾದ ಯೋಗಿ ಪತ್ನಿಯ ಡ್ಯಾನ್ಸ್ ಇದೀಗ ಫುಲ್ ವೈರಲ್

0 1

ಯೋಗೇಶ ಅವರು ದುನಿಯಾ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿದರು. ಯೋಗೇಶ್, ಅಭಿಮಾನಿಗಳಲ್ಲಿ ‘ಲೂಸ್ ಮಾದ ಯೋಗೇಶ್’ ಎಂದು ಹೆಸರುವಾಸಿ ಯಾಗಿರುವ ಒಬ್ಬ ಜನಪ್ರಿಯ ಕನ್ನಡ ಚಲನಚಿತ್ರ ನಟ. ಇವರು ಇನ್ನೊಬ್ಬ ಕನ್ನಡ ನಟ ದುನಿಯಾ ವಿಜಯ್ ಸಂಭಂದಿ. ಯೋಗೆಶನ ಮೊದಲ ಚಿತ್ರ ದುನಿಯಾ ಇದರಲ್ಲಿ ಈತ ಲೂಸ್ ಮಾದ ನ ಪಾತ್ರವನ್ನು ಅಚ್ಚುಕಟ್ಟಾಗಿ ಅಭಿನಯಿಸಿ ಜನರ ಮನ ಗೆದ್ದಿದ್ದರು. ಈ ಪಾತ್ರ ಹಾಗು ದುನಿಯಾ ಸಿನಿಮಾ ಎರಡು ಬಹಳ ಪ್ರಸಿದ್ಧವಾಯಿತು ಇದರಿಂದ ವಿಜಯ್ ಹಾಗು ಯೋಗೇಶ್ ಇಬ್ಬರಿಗೂ ಕನ್ನಡ ಚಲನಚಿತ್ರೋದ್ಯಮಕ್ಕೆ ಖ್ಯಾತಿ ಸಿಕ್ಕಿತು.

ಬೆಂಗಳೂರುನಲ್ಲಿರುವ ಚಲನಚಿತ್ರೋದ್ಯಮದ ಇಂದಿನ ಯುವ ನಾಯಕ ನಟರಲ್ಲಿ ಯೋಗೇಶ್ ಕೂಡ ಒಬ್ಬರು. ಇನ್ನೂ ಇವರು ನಂದ ಲವ್ಸ್ ನಂದಿತಾ ಚಿತ್ರ ಮೂಲಕ ಪೂರ್ಣ ನಾಯಕ ನಟನಾಗಿ ತಮ್ಮ ಸಿನಿ ಜೀವನ ಆರಂಭ ಮಾಡಿದ್ದು ನಂತ್ರ ಸಿದ್ಲಿಂಗು ಯಾರೇ ಕೂಗಾಡಲಿ ಹುಡುಗರು ಅಂಬಾರಿ ಇನ್ನೂ ಮುಂತಾದ ಸಿನಿಮಾದಲ್ಲಿ ನಟಿಸಿದ್ದಾರೆ ನಂತ್ರ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ . ಯೋಗಿ ಅವರು ಒಳ್ಳೆಯ ನಟ ನೃತ್ಯಗಾರರು ಹಾಗೂ ನಿರೂಪಕ.

ನವೆಂಬರ್ 2 2017 ರಂದು ತಮ್ಮ ಗೆಳತಿ ಹಾಗೂ ಪ್ರೇಮಿಯೂ ಆಗಿದ್ದ ಸಾಹಿತ್ಯ ಅವರನ್ನು ಮನೆಯವರ ಸಮ್ಮುಖದಲ್ಲಿ ಪತ್ನಿಯನ್ನಾಗಿ ಸ್ವೀಕರಿಸಿದ್ದು ಇವರಿಬ್ಬರ ಪ್ರೀತಿಯ ಕುರುಹಾಗಿ ಒಬ್ಬ ಮಗಳು ಕೂಡ ಇದ್ದಾಳೆ. ಇನ್ನೂ ಈ ಜೋಡಿ ಮುದ್ದಾಗಿದ್ದು ಯೂಟ್ಯೂಬ್ ಚಾನಲ್ ಒಂದರಲ್ಲಿ ಡಾನ್ಸ್ ವಿಡಿಯೊ ತುಣುಕನ್ನು ಬಿಟ್ಟಿದ್ದಾರೆ ಈ ನಡುವೆ ತಮ್ಮ ಫ್ಯಾಮಿಲಿ ಜೊತೆಗೆ ಜಾಸ್ತಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಮಡದಿ ಮಗುವಿನೊಂದಿಗೆ ಕಾಣಿಸಿಕೊಂಡಿದ್ದಾರೆ

ತಮ್ಮ ಪತ್ನಿ ಸಾಹಿತ್ಯ ಅವರೊಂದಿಗೆ ಇತ್ತೀಚಿಗೆ ಡಾನ್ಸ್ ವಿಡಿಯೊ ಮಾಡಿದ್ದು ತಮ್ಮ ಮಗುವಿನ ಜೊತೆ ಸಮಯ ಕಳೆಯುವ ಆಟ ಆಡುವುದನ್ನು ಹಾಗೂ ತಮ್ಮ ಪತ್ನಿಯ ಜೊತೆ ಮಾಡಿದ ಡಾನ್ಸ್ ನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಈಗ ಆ ವಿಡಿಯೋ ಸಖತ್ ವೈರಲ್ ಆಗಿದೆ. Video Credit For SSTV

Leave A Reply

Your email address will not be published.