ವೆಜ್ ಬಿರಿಯಾನಿ ಮಾಡುವ ಅತಿ ಸುಲಭ ವಿಧಾನ

0 23

ರುಚಿಯಾದ ವೆಜಿಟೇಬಲ್ ಬಿರಿಯಾನಿ ಹೇಗೆ ಮಾಡುವುದು ಹಾಗೂ ವೆಜ್ ಬಿರಿಯಾನಿ ಮಾಡಲು ಬೇಕಾಗುವ ಸಾಮಗ್ರಿಗಳು ಎನು? ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ವೆಜಿಟೇಬಲ್ ಬಿರಿಯಾನಿ ಮಾಡಲು ಬೇಕಾಗಿರುವಂತಹ ಸಾಮಗ್ರಿಗಳು: ಬಾಸ್ಮತಿ ಅಕ್ಕಿ 1 ಕಪ್ (1 ಕಪ್ ಅಕ್ಕಿಗೆ ಒಂದೂವರೆ ಕಪ್ ನೀರು) ಕ್ಯಾರೆಟ್ 1, ಹಸಿರು ಬಟಾಣಿ ಅರ್ಧ ಕಪ್, ಬೀನ್ಸ್ 5, ಆಲೂಗಡ್ಡೆ 1, ಟೊಮೆಟೊ ಒಂದು, ಈರುಳ್ಳಿ 1, ಚಕ್ಕೆ, ಜಾಯಿಕಾಯಿ, ನಕ್ಷತ್ರ ಮೊಗ್ಗು, ಏಲಕ್ಕಿ ಒಂದು, ಲವಂಗ 6, ಪಲಾವ್ ಎಲೆ, ಕೊತ್ತಂಬರಿ ಬೀಜ ಒಂದುವರೆ ಟೀ ಸ್ಪೂನ್, ಜೀರಿಗೆ ಅರ್ಧ ಟೀ ಸ್ಪೂನ್, ಕಾಳುಮೆಣಸು ಕಾಲು ಟೀ ಸ್ಪೂನ್, ಸೋಂಪಿನ ಕಾಳು ಕಾಲು ಟೀ ಸ್ಪೂನ್, ಪುದಿನ ಹಾಗು ಕೊತ್ತಂಬರಿ ಸೊಪ್ಪು, ಬೆಳ್ಳುಳ್ಳಿ ಎಸಳು 5, ಶುಂಠಿ, ಹಸಿರು ಮೆಣಸಿನಕಾಯಿ 1, ತುಪ್ಪ 1 ಟೀ ಸ್ಪೂನ್ ಎಣ್ಣೆ 2 ಟೀ ಸ್ಪೂನ್ , ಕೆಂಪು ಮೆಣಸಿನ ಪುಡಿ ಒಂದು ಟೀ ಸ್ಪೂನ್, ಅರಿಶಿಣ, ಮೊಸರು 2 ಟೀ ಸ್ಪೂನ್, ಉಪ್ಪು ರುಚಿಗೆ ತಕ್ಕಷ್ಟು.

ಇವಿಷ್ಟು ವೆಜ್ ಬಿರಿಯಾನಿ ಮಾಡಲು ಬೇಕಾಗಿರುವಂತಹ ಸಾಮಗ್ರಿಗಳು. ಇನ್ನು ವೆಜ್ ಬಿರಿಯಾನಿ ಮಾಡುವ ವಿಧಾನ ಹೇಗೆ ಅಂತ ನೋಡೋಣ.

ಮಾಡುವ ವಿಧಾನ: ಮೊದಲು ಸ್ಟೌ ಮೇಲೆ ಒಂದು ಪ್ಯಾನ್ ಇಟ್ಟುಕೊಂಡು ಅದಕ್ಕೆ ಚಕ್ಕೆ, ಲವಂಗ ಸ್ಟಾರ್ ಮೊಗ್ಗು ಏಲಕ್ಕಿ , ಕೊತ್ತಂಬರಿ ಬೀಜ ಜೀರಿಗೆ ಕಾಳುಮೆಣಸು ಸೋಂಪಿನ ಕಾಳು ಇವೆಲ್ಲವನ್ನು ಚೆನ್ನಾಗಿ ಒಂದೆರಡು ನಿಮಿಷ ಸಣ್ಣ ಉರಿಯಲ್ಲಿ ಹುರಿದುಕೊಳ್ಳಬೇಕು. ಸಂಪೂರ್ಣವಾಗಿ ತಣ್ಣಗಾಗಲು ಬಿಟ್ಟು ತಣ್ಣಗಾದ ನಂತರ ಎಲ್ಲವನ್ನು ಮಿಕ್ಸಿಗೆ ಹಾಕಿ ಚೆನ್ನಾಗಿ ಪುಡಿ ಮಾಡಿಟ್ಟುಕೊಳ್ಳಬೇಕು. ನಂತರ ಅದೇ ಮಿಕ್ಸಿ ಜಾರಿಗೆ ಒಂದು ಹಿಡಿಯಷ್ಟು ಪುದಿನ ಎಲೆ, 5 ಬೆಳ್ಳುಳ್ಳಿ ಎಸಳು, ಒಂದು ಇಂಚಿನಷ್ಟು ಶುಂಠಿ, ಒಂದು ಹಸಿಮೆಣಸಿನ ಕಾಯಿ ಇವೆಲ್ಲವನ್ನು ಸೇರಿಸಿ ಸ್ವಲ್ಪ ನೀರು ಹಾಕಿಕೊಂಡು ಪೇಸ್ಟ್ ಮಾಡಿಕೊಳ್ಳಬೇಕು.

ನಂತರ ಕುಕ್ಕರ್ ಗೆ 1 ಟೀ ಸ್ಪೂನ್ ತುಪ್ಪ ಹಾಗೂ 2 ಸ್ಪೂನ್ ಎಣ್ಣೆ ಹಾಕಿಕೊಂಡು ಕಾದ ನಂತರ ಒಂದು ಪಲಾವ್ ಎಲೆ ಹಾಕಿ ಅದಕ್ಕೆ ಮತ್ತೆ ಒಂದು ಏಲಕ್ಕಿ, ಅರ್ಧ ಇಂಚಿನಷ್ಟು ಚಕ್ಕೆ ಒಂದು ಲವಂಗ, ಸಣ್ಣದಾಗಿ ಉದ್ದಕ್ಕೆ ಕಟ್ ಮಾಡಿದ ಒಂದು ಈರುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಿಕೊಂಡು ಮೊದಲೇ ಪೇಸ್ಟ್ ಮಾಡಿಕೊಂಡು ಇರುವಂತಹ ಪುದೀನಾ ಪೇಸ್ಟ್ ಹಾಗೂ ಟೊಮೆಟೊ ಹಾಕಿ ಹಸಿ ವಾಸನೆ ಹೋಗುವವರೆಗೆ ಫ್ರೈ ಮಾಡಿಕೊಳ್ಳಬೇಕು.

ನಂತರ ಅದಕ್ಕೆ ಕಟ್ ಮಾಡಿದ ಕ್ಯಾರೆಟ್, ಬೀನ್ಸ್, ಅರ್ಧ ಕಪ್ ಹಸಿರು ಬಟಾಣಿ, ಆಲೂಗಡ್ಡೆ ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಒಮ್ಮೆ ಫ್ರೈ ಮಾಡಿಕೊಂಡು ಕಾರಕ್ಕೆ ಬೇಕಾದಷ್ಟು ಕೆಂಪು ಮೆಣಸಿನಪುಡಿ, ಕಾಲು ಚಮಚ ಅರಿಶಿನ ಹಾಗೂ ಮೊದಲೇ ಪುಡಿ ಮಾಡಿಟ್ಟುಕೊಂಡಿರುವ ಮಸಾಲೆ ಪದಾರ್ಥಗಳನ್ನು ಸೇರಿಸಿಕೊಳ್ಳಬೇಕು. ಹಾಗೆ ಒಮ್ಮೆ ಮಿಕ್ಸ್ ಮಾಡಿಕೊಂಡು ನಂತರ 2 ಟೀಸ್ಪೂನ್ ಮೊಸರನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ನಂತರ ಅರ್ಧಗಂಟೆ ನೆನಪಿಟ್ಟುಕೊಂಡ ಬಾಸ್ಮತಿ ಅಕ್ಕಿಯನ್ನು ಹಾಕಿ, 1 ಕಪ್ ಬಾಸುಮತಿ ಅಕ್ಕಿ ಗೆ ಒಂದೂವರೆ ಕಪ್ ನಷ್ಟು ನೀರನ್ನು ಹಾಕಬೇಕು. ನೀರು ಹಾಕಿ ಸ್ವಲ್ಪ ಮಿಕ್ಸ್ ಮಾಡಿ ಮೇಲಿನಿಂದ ಕೊತ್ತಂಬರಿ ಸೊಪ್ಪು ಹಾಗೂ ಪುದೀನಾ ಸೊಪ್ಪನ್ನು ಹಾಕಿ ಕುಕ್ಕರ್ ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ ಒಂದು ವಿಜಿಲ್ ಕೂಗಿಸಬೇಕು.

ಈ ರೀತಿಯಾಗಿ ಮಾಡುವುದರಿಂದ ಹೋಟೆಲ್ ಶೈಲಿಯ ರುಚಿಯಾದ ವೆಜ್ ಬಿರಿಯಾನಿ ನಾವು ಮನೆಯಲ್ಲಿ ಮಾಡಿಕೊಳ್ಳಬಹುದು.

Leave A Reply

Your email address will not be published.