ಕರ್ನಾಟಕದ ಸಿಕ್ಸ್ ಪ್ಯಾಕ್ ಪಿಎಸ್ಐ, ಸಿ.ಆರ್ ಅರ್ಜುನ್

0 4

ಕರ್ನಾಟಕದ ಸಿಕ್ಸ್ ಪ್ಯಾಕ್ ಸಿ.ಆರ್ ಅರ್ಜುನ್ ಅವರ ವರ್ಕೌಟ್ ಮಾಡಿದ ರೀತಿ ಮುಂತಾದ ಹಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಸಿ. ಆರ್ ಅರ್ಜುನ್ ಬನಶಂಕರಿ ಠಾಣೆ ಸಬ್ ಇನಸ್ಪೆಕ್ಟರ್. ಇವರು ಚೆನ್ನಪಟ್ಟಣದವರು, ಇವರು ಎಂಜಿನಿಯರಿಂಗ್ ಓದಿದ್ದಾರೆ. 2009 ರಲ್ಲಿ ಪೊಲೀಸ್ ಎಕ್ಸಾಂ ತೆಗೆದುಕೊಂಡು ಸೆಲೆಕ್ಟ್ ಆಗಿ 2010 ರಲ್ಲಿ ಜಾಯಿನ್ ಆದರೂ. 2012 ರಲ್ಲಿ ಬೆಂಗಳೂರಿಗೆ ಎಸ್.ಐ ಆಗಿ ಹೋದರು. ಅವರು ಒಬ್ಬ ಕ್ರೀಡಾಪಟು, 2014 ರಲ್ಲಿ ಕಬಡ್ಡಿ ಟೂರ್ನಮೆಂಟ್ ಹೋದಾಗ ಬಲಗಾಲಿಗೆ ಪೆಟ್ಟಾಯಿತು, ಕಾಲಿನ ಆಪರೇಷನ್ ಆಯಿತು. ನಂತರ ದೇಹದ ತೂಕ ಹೆಚ್ಚಾಯಿತು ಮೊದಲಿನಂತೆ ಚುರುಕಾಗಿ ಇರಲು ಆಗಲಿಲ್ಲ. ಹೀಗಿರುವಾಗ ಜಿಮ್ ಟ್ರೇನರ್ ವಿಶ್ವಾಸ್ ಪರಿಚಯವಾಯಿತು ಅವರನ್ನು ಕೇಳಿದಾಗ ಅವರು ಸಲಹೆ ನೀಡಿದರು. ವಿಶ್ವಾಸ್ ಅವರ ಜಿಮ್ ಭೇಟಿ ಮಾಡಿದರು ಅಲ್ಲಿ ಯಾವ ರೀತಿ ವರ್ಕೌಟ್ ಮಾಡಬೇಕು, ಆಹಾರ ಪದ್ಧತಿಯ ಬಗ್ಗೆ ತಿಳಿದುಕೊಂಡರು. ನಂತರ ಪೊಲೀಸ್ ಕೆಲಸ ಮುಗಿಸಿ ರಾತ್ರಿ ಜಿಮ್ ಗೆ ಹೋಗುತ್ತಿದ್ದರು ವಿಶ್ವಾಸ್ ಟ್ರೇನ್ ಮಾಡುತ್ತಿದ್ದರು 2 ಗಂಟೆ ವರೆಗೆ ಅಂದರೆ 11 ಗಂಟೆಯಿಂದ 1 ಗಂಟೆಯವರೆಗೆ ವರ್ಕೌಟ್ ಮಾಡುತ್ತಿದ್ದರು. ವಿಶ್ವಾಸ್ ಅವರು ಹೇಳಿದಂತೆ ಅರ್ಜುನ್ ಮಾಡಿದರು 3 ತಿಂಗಳಲ್ಲಿ 6-7 ಕೆ.ಜಿ ಕಡಿಮೆ ಮಾಡಿಕೊಂಡರು ಆಗ ಅವರಿಗೆ ಸೆಲ್ಫ್ ಕಾನ್ಫಿಡೆನ್ಸ್ ಬಂತು ನಂತರ 6 ತಿಂಗಳವರೆಗೆ 20 ಕೆ.ಜಿ ತೂಕ ಕಡಿಮೆ ಮಾಡಿಕೊಂಡು ಫಿಟ್ ಆದರು. ಅರ್ಜುನ್ ಅವರ ಪ್ರಕಾರ ಕೋಚ್ ಮುಖ್ಯ. ವಿಶ್ವಾಸ್ ಅವರು ಹುರಿದುಂಬಿಸಿದರು ಇದರಿಂದ ಸಾಧ್ಯವಾಯಿತು ಎಂದು ಅರ್ಜುನ ಹೇಳಿಕೊಂಡಿದ್ದಾರೆ.

ಡಿ.ಸಿ.ಪಿ ಅಣ್ಣಾಮಲೈ ಬನಶಂಕರಿ ಪೊಲೀಸ್ ಸ್ಟೇಷನ್ ಭೇಟಿ ಮಾಡಿದಾಗ ಅವರು ಕೇಳಿದರು ಜಿಮ್ ಹೋಗುತ್ತೀರಾ ಎಂದು ಅದಕ್ಕೆ ಅರ್ಜುನ್ ಹೌದು ಈಗ ಶುರು ಮಾಡಿದಿನಿ ಅಂತ ಹೇಳುತ್ತಾರೆ ಅಣ್ಣಾಮಲೈ ಫಿಟ್ ಆಗಿದ್ದೀರಾ ಮುಂದುವರೆಸಿ ಎಂದು ಹೇಳಿದರು. ನಂತರ ಭೇಟಿಯಾದಾಗ 5 ನಿಮಿಷ ಹೇಗೆ ಮಾಡುತ್ತೀರಾ ಎಂದು ಕೇಳುವುದಲ್ಲದೆ ಸಲಹೆ ಕೊಡುತ್ತಾರೆ. ತಂದೆ, ತಾಯಿ, ತಮ್ಮ, ಹೆಂಡತಿ ಅರ್ಜುನ ಅವರಿಗೆ ಸಪೋರ್ಟ್ ಮಾಡಿದ್ದಾರೆ. ರಾತ್ರಿ ಲೇಟ್ ಆದರೂ ಅರ್ಜುನ್ ಅವರ ಹೆಂಡತಿ ಸೌಮ್ಯ ಅಡುಗೆಯನ್ನು ಪದ್ಧತಿಯ ಪ್ರಕಾರ ಮಾಡುತ್ತಿದ್ದರು. ವಿಶ್ವಾಸ್ ಅವರು ತಮ್ಮ ಜಿಮ್ ನ ಕೀ ಅರ್ಜುನ್ ಅವರಿಗೆ ಕೊಟ್ಟಿದ್ದರು. ಅರ್ಜುನ್ ತಿಂಡಿ ಪ್ರಿಯ ಹಾಗಾಗಿ ಅದಕ್ಕೆ ತಕ್ಕಂತೆ ವಿಶ್ವಾಸ್ ಸಲಹೆ ಕೊಡುತ್ತಿದ್ದರು. ಪ್ರೊಟೀನ್ ಇರುವ ಆಹಾರ, ಅತಿಹೆಚ್ಚು ನೀರನ್ನು ಕುಡಿಯುತ್ತಿದ್ದರು. ಅವರು ದೇಹ ತೂಕ ಕಡಿಮೆ ಇದ್ದಾಗ ಆಕ್ಟೀವ ಇರಲು ಸಾಧ್ಯ ಎಂದು ಹೇಳುತ್ತಾರೆ. ಅವರಿಗೆ ಸಿಕ್ಸ್ ಪ್ಯಾಕ್ ಮಾಡಬೇಕು ಎನ್ನುವುದಿರಲಿಲ್ಲ ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಜಿಮ್ ಸೇರಿಕೊಳ್ಳುತ್ತಾರೆ. ಪೊಲೀಸ್ ಇಲಾಖೆ ಹಾಗೂ ಕುಟುಂಬದವರು ಉತ್ತಮವಾಗಿ ಸಪೋರ್ಟ್ ಮಾಡಿದ್ದಾರೆ ಎಂದು ಅರ್ಜುನ್ ಹೇಳಿದ್ದಾರೆ. ನಮ್ಮ ದೇಹವನ್ನು ನಾವು ಪ್ರೀತಿಸಬೇಕು ಎಂದು ಹೇಳಿರುವ ಅರ್ಜುನ್ ಯಾರಿಗೆ ಯಾವ ಕ್ರೀಡೆಯಲ್ಲಿ ಆಸಕ್ತಿ ಇರುತ್ತದೆ ಅವರು ಆ ಕ್ರೀಡೆಯನ್ನು ಮುಂದುವರೆಸಬೇಕು ಟೈಮ್ ಇಲ್ಲದಿದ್ದರೂ ಟೈಮ್ ಮಾಡಿಕೊಳ್ಳಬೇಕು ಎಂದು ಯುವಕರಿಗೆ ಹಾಗೂ ಪೊಲೀಸ್ ಇಲಾಖೆಯವರಿಗೆ ಸಲಹೆ ಕೊಟ್ಟಿದ್ದಾರೆ. ಈ ಮಾಹಿತಿಯನ್ನು ಎಲ್ಲರಿಗೂ ತಿಳಿಸಿ ಅರ್ಜುನ ಅವರಿಂದ ಇನ್ಸಪೈರ್ ಆಗಿ.

Leave A Reply

Your email address will not be published.