ಇದುವರೆಗೆ ಐಪಿಎಲ್ ನಲ್ಲಿ ಹೆಚ್ಚು ಸಿಕ್ಸ್ ಬಾರಿಸಿದವರು ಇವರೇ

0 1

ಇದುವರೆಗೂ ಐಪಿಎಲ್ ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದವರು ಯಾವ ಯಾವ ಆಟಗಾರರು ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ.

10 ನೇ ಸ್ಥಾನದಲ್ಲಿ ಯೂಸುಫ್ ಪಠಾಣ್ ಇದ್ದಾರೆ, ಇವರು ಇದುವರೆಗೆ ಐಪಿಎಲ್ ನಲ್ಲಿ ಸುಮಾರು 158 ಸಿಕ್ಸರ್ ಬಾರಿಸಿದ್ದಾರೆ ಐಪಿಎಲ್ ಸೀಸನ್ 13 ರಲ್ಲಿ ಯಾವುದೇ ತಂಡದ ಪರವಾಗಿ ಆಡುತ್ತಿಲ್ಲ. 9 ನೇ ಸ್ಥಾನದಲ್ಲಿ ಕರಣ್ ಪೊಲಾರ್ಡ್ ಇದ್ದಾರೆ, ಇವರು ಇದುವರೆಗೆ ಐಪಿಎಲ್ ನಲ್ಲಿ ಸುಮಾರು 187 ಸಿಕ್ಸರ್ ಬಾರಿಸಿದ್ದಾರೆ, ಇವರು ಐಪಿಎಲ್ 13 ರಲ್ಲಿ ಮುಂಬೈ ತಂಡದ ಪರವಾಗಿ ಆಡುತ್ತಿದ್ದಾರೆ. ಶ್ರೀನಿವಾಸನ್ ಎಂಟನೇ ಸ್ಥಾನದಲ್ಲಿದ್ದಾರೆ, ಇವರು 182 ಸಿಕ್ಸರ್ ಬಾರಿಸಿದ್ದಾರೆ, ಇವರು ಐಪಿಎಲ್ 13 ನಲ್ಲಿ ಸಿಎಸಕೆ ಪರವಾಗಿ ಆಡುತ್ತಿದ್ದಾರೆ. ಏಳನೇ ಸ್ಥಾನದಲ್ಲಿ ಡೇವಿಡ್ ವಾರ್ನರ್ ಇದ್ದಾರೆ, ಇವರು 184 ಸಿಕ್ಸರ್ ಬಾರಿಸಿದ್ದಾರೆ. ಆರನೇ ಸ್ಥಾನದಲ್ಲಿ ವಿರಾಟ್ ಕೋಹ್ಲಿ ಇದ್ದಾರೆ, ಇವರು ಇದುವರೆಗೆ ಐಪಿಎಲ್ ನಲ್ಲಿ 190 ಸಿಕ್ಸರ್ ಬಾರಿಸಿದ್ದಾರೆ, ಇವರು ಐಪಿಎಲ್ 13 ರಲ್ಲಿ ಆರ್ ಸಿಬಿ ಪರವಾಗಿ ಆಡುತ್ತಿದ್ದಾರೆ. ಐದನೇ ಸ್ಥಾನದಲ್ಲಿ ಸುರೇಶ್ ರೈನಾ ಇದ್ದಾರೆ, ಇವರು ಐಪಿಎಲ್ ನಲ್ಲಿ 194 ಸಿಕ್ಸರ್ ಬಾರಿಸಿದ್ದಾರೆ, ಇವರು ಐಪಿಎಲ್ 13 ರಲ್ಲಿ ಸಿಎಸಕೆ ತಂಡದ ಪರವಾಗಿ ಆಡಬೇಕಿತ್ತು ಪರ್ಸನಲ್ ಕಾರಣದಿಂದ ಆಡುತ್ತಿಲ್ಲ.

ನಾಲ್ಕನೇ ಸ್ಥಾನದಲ್ಲಿ ರೋಹಿತ್ ಶರ್ಮಾ ಇದ್ದಾರೆ, ಇವರು 201 ಸಿಕ್ಸರ್ ಬಾರಿಸಿದ್ದಾರೆ, ಇವರು ಐಪಿಎಲ್ 13 ರಲ್ಲಿ ಮುಂಬೈ ತಂಡದ ಪರವಾಗಿ ಆಡುತ್ತಿದ್ದಾರೆ. ಮೂರನೇ ಸ್ಥಾನದಲ್ಲಿ ಎಮ್.ಎಸ್ ಧೋನಿ ಇದ್ದಾರೆ, ಇವರು ಇದುವರೆಗೆ ಐಪಿಎಲ್ ನಲ್ಲಿ 212 ಸಿಕ್ಸರ್ ಬಾರಿಸಿದ್ದಾರೆ, ಇವರು ಐಪಿಎಲ್ 13 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಆಡುತ್ತಿದ್ದಾರೆ. ಎರಡನೇ ಸ್ಥಾನದಲ್ಲಿ ಎಬಿಡಿ ವಿಲ್ಲರ್ಸ್ ಇದ್ದಾರೆ, ಇವರು 219 ಸಿಕ್ಸರ್ ಬಾರಿಸಿದ್ದಾರೆ, ಐಪಿಎಲ್ 13 ರಲ್ಲಿ ಆರ್ ಸಿಬಿ ತಂಡದ ಪರವಾಗಿ ಆಡುತ್ತಿದ್ದಾರೆ. ಒಂದನೇ ಸ್ಥಾನದಲ್ಲಿ ಕ್ರಿಸ್ಕೆಲ್ ಇದ್ದಾರೆ ಇವರು ಇದುವರೆಗೂ ಐಪಿಎಲ್ ನಲ್ಲಿ 326 ಸಿಕ್ಸರ್ ಬಾರಿಸಿದ್ದಾರೆ, ಇವರು ಪಂಜಾಬ್ ತಂಡದ ಪರವಾಗಿ ಆಡುತ್ತಿದ್ದಾರೆ. ಹೆಚ್ಚಿನ ಸಿಕ್ಸರ್ ಬಾರಿಸಲಿ ಎಂದು ಹಾರೈಸೋಣ.

Leave A Reply

Your email address will not be published.