ಅರಣ್ಯ ಇಲಾಖೆಯಿಂದ ನೇಮಕಾತಿ ಪುರುಷ ಹಾಗೂ ಮಹಿಳೆಯರಿಗೆ ಆಸಕ್ತರು ಅರ್ಜಿಹಾಕಿ

0 0

ಅರಣ್ಯ ಇಲಾಖೆಯಿಂದ ನೇಮಕಾತಿ ಆರಂಭವಾಗಿದ್ದು ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಒಟ್ಟೂ 894 ಹುದ್ದೆಗಳು ಖಾಲಿ ಇದ್ದು, ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಅರ್ಜಿ ಸಲ್ಲಿಸುವ ವಿಧಾನ, ಬೇಕಾಗಿರುವ ದಾಖಲಾತಿಗಳು, ವಿದ್ಯಾರ್ಹತೆ, ವೇತನ ಈ ಎಲ್ಲದರ ಕುರಿತಾಗಿ ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಫಾರೆಸ್ಟ್ ಗಾರ್ಡ್ ರೆಕ್ಯುಟ್ಮೆಂಟ್ 2022. ಹೊಸ ಅಧಿಸೂಚನೆಯ ಪ್ರಕಾರ 894 ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಹುದ್ದೆಗಳ ಹೆಸರು ಫಾರೆಸ್ಟ್ ಗಾರ್ಡ್ ಮತ್ತು ಫಾರೆಸ್ಟರ್ ಹುದ್ದೆಗಳು ಆಗಿದ್ದು, ಅಭ್ಯರ್ಥಿಗಳು ಆನ್ಲೈನ್ ಮೂಲಕ ಅಫೀಷಿಯಲ್ ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು. ಇನ್ನೂ ಯಾರೆಲ್ಲ ಅರ್ಜಿ ಸಲ್ಲಿಸಬಹುದು ಎಂದು ನೋಡುವುದಾದರೆ, ಇಡೀ ಭಾರತದಾದ್ಯಂತ ಹತ್ತನೇ ತರಗತಿ ಮತ್ತು PUC ಪಾಸ್ ಆದಂತಹ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಇನ್ನೂ ಆಯ್ಕೆ ಆದ ಅಭ್ಯರ್ಥಿಗಳು ಕಾರ್ಯ ನಿರ್ವಹಿಸುವ ಮತ್ತು ಪರೀಕ್ಷಾ ಕೇಂದ್ರವನ್ನು ಭಾರತದಲ್ಲಿ ಎಲ್ಲಿ ಬೇಕಿದ್ದರೂ ತೆಗೆದುಕೊಳ್ಳಬಹುದು.

ಅರ್ಜಿ ಶುಲ್ಕ ಜನರಲ್ ಮತ್ತು ಒಬಿಸಿ ಅಭ್ಯರ್ಥಿಗಳು 200/- ಹಾಗೂ scst ಅಭ್ಯರ್ಥಿಗಳು 100/- ಅರ್ಜಿ ಶುಲ್ಕವನ್ನು ನೀಡಬೇಕು. ಹಾಗೇ ಅಭ್ಯರ್ಥಿಗಳ ವಯೋಮಿತಿ ಜನರಲ್ 18-25 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 18-28 ವರ್ಷ ಮತ್ತು SCST ಅಭ್ಯರ್ಥಿಗಳಿಗೆ 18-30 ವರ್ಷ.

ದೈಹಿಕ ಸಾಮರ್ಥ್ಯದ ಬಗ್ಗೆ ನೋಡುವುದಾದರೆ, ಪುರುಷ ಅಭ್ಯರ್ಥಿಗಳು 163cm ಹಾಗೂ ಮಹಿಳಾ ಅಭ್ಯರ್ಥಿಗಳು 150cm ಎತ್ತರವನ್ನು ಹೊಂದಿರಬೇಕು. ರನ್ನಿಂಗ್ ಮತ್ತೂ ಲಾಂಗ್ ಜಂಪ್ ಟೆಸ್ಟ್ ನಲ್ಲಿ ಪುರುಷರು 4 ತಾಸಿನ ಅವಧಿಯಲ್ಲಿ 24km ಹಾಗೂ ಮಹಿಳಾ ಅಭ್ಯರ್ಥಿಗಳು ಸಹ ತಾಸಿನ ಅವಧಿಯಲ್ಲಿ 14km ರನ್ನಿಂಗ್ ಅಥವಾ ವಾಕಿಂಗ್ ಮಾಡಬೇಕು.

ಇನ್ನೂ ಆಯ್ಕೆಯ ವಿಧಾನ ಹೇಗೆ ಎಂದು ನೋಡುವುದಾದರೆ, written test, physical test, medical test ಮತ್ತು document verification ಮೂಲಕ ಆಯ್ಕೆ ಮಾಡಲಾಗುವುದು. ಮುಖ್ಯವಾದ ದಿನಾಂಕಗಳನ್ನು ನೋಡುವುದಾದರೆ, ಅರ್ಜಿ ಸಲ್ಲಿಸಲು ಆರಂಭವಾದ ದಿನಾಂಕ 19/05/2022 ಆಗಿದ್ದು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 19/06/2022 ಆಗಿರುತ್ತದೆ.
ಹೆಚ್ಚಿನ ಮಾಹಿತಿಗೆ ಈ ಕೆಳಗಿನ ವಿಡಿಯೋ ನೋಡಿ.

Leave A Reply

Your email address will not be published.